ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಫೆಬ್ರವರಿ, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ದೊಡ್ಡಣ್ಣೇಗೆರೆ ಪಿಡಿಓ ಅವರ ಕರ್ತವ್ಯಕ್ಕೆ ಅಡ್ಡಿ, ಜಾತಿನಿಂದನೆ: ಹಂದನಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಹುಳಿಯಾರು : ದೊಡ್ಡಣ್ಣೆಗರೆ ಗ್ರಾಮಪಂಚಾಯತಿ  ಪ್ರಭಾರ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಡವೀಶ್ ಕುಮಾರ್ ಅವರ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ, ಜಾತಿ ನಿಂದನೆ ಮಾಡುವವ ಮೂಲಕ ಮಾನ ಹಾನಿ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಚಿಕ್ಕನಾಯಕನಹಳ್ಳಿ ತಾಲೂಕಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ತಹಸಿಲ್ದಾರ್ ತೇಜಸ್ವಿನಿ ಹಾಗೂ  ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ವಿವರ: ಚಿಕ್ಕನಾಯಕನಹಳ್ಳಿ ತಾಲ್ಲೂಕು ಹಂದನಕೆರೆ ಹೋಬಳಿ ದೊಡ್ಡಣ್ಣೆಗರೆ ಗ್ರಾಮಪಂಚಾಯತಿಯಲ್ಲಿ (ಪ್ರಭಾರ) ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ  ಅಡವೀಶ್ ಕುಮಾರ್ ರವರ ಮೇಲೆ ದಿನಾಂಕ:24/02/2021 ರಂದು ಸದರಿ ಪಂಚಾಯತಿ ಅಧ್ಯಕ್ಷರಾದ  ಎ.ವೈ ರಮ್ಯರವರ ಪತಿಯಾದ ಮಂಜುನಾಥ್ ಹಾಗೂ ಗ್ರಾಮಪಂಚಾಯತಿ ಸದಸ್ಯರಾದ  ಪ್ರಶಾಂತ್ ಡಿ.ಎಸ್ ಹಾಗೂ ಶಿವಕುಮಾರ್‌ ಡಿ.ಎಂ ರವರು ಗ್ರಾಮಪಂಚಾಯತಿ ಕಛೇರಿಗೆ ಬಂದು ಕರ್ತವ್ಯದ ಅವಧಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರನ್ನು ಕೊಠಡಿಯಿಂದ ಹೊರಹಾಕಿ ಸರ್ಕಾರಿ ಕರ್ತವ್ಯ ನಿರ್ವಹಿಸಲು ಅಡ್ಡಿ ಉಂಟು ಮಾಡಿರುತ್ತಾರೆ. ಆ ಮೂಲಕ ಪರಿಶಿಷ್ಟ ಜಾತಿಗೆ ಸೇರಿದ ಇವರ ಮೇಲೆ ಜಾತಿ ನಿಂದನೆ ಮಾಡುವ ಮೂಲಕ ಮಾನಹಾನಿ ಮಾಡಿರುತ್ತಾರೆ. ಈ ಬಗ್ಗೆ ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿರುತ್ತದೆ.

ಜಯಭಾರತಿ ಕಾಲೇಜಿನಲ್ಲಿ ಪ್ರೊಫೆಸರ್ ಬಿಳಿಗೆರೆಯಿಂದ ವಿಶೇಷ ಉಪನ್ಯಾಸ.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮತ್ತಿಘಟ್ಟದ ಶ್ರೀ ಜಯಭಾರತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಹುಳಿಯಾರಿನ BMS ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಬಿಳಿಗೆರೆ ಕೃಷ್ಣಮೂರ್ತಿಯವರು ವಿದ್ಯಾರ್ಥಿಗಳಿಗೆ Historyಯ ಚರಿತ್ರೆ- ಚಾರಿತ್ರ್ಯ, ರಾಜ ಮನೆತನದ ರಾಜತ್ವ, ಹೆಣ್ಣು ಮಕ್ಕಳ ಅಸ್ತಿತ್ವ,  ಗ್ರಾಮೀಣದ ದುಡಿಯುವ ವರ್ಗ ಹಾಗೂ ಕೃಷಿಯಲ್ಲಿನ ಬೀಜದ, ನೀರಾವರಿ, ಬೆಳೆ, ಪ್ರಾಣಿ ಮುಂತಾದ ಚರಿತ್ರೆಗಳ ಬಗ್ಗೆ  ವಿಶೇಷ ಉಪನ್ಯಾಸ ನೀಡಿದರು.  ಈ ವೇಳೆ ಕಾಲೇಜಿನ ಪ್ರಾಂಶುಪಾಲರಾದ ಲೋಕೇಶ್, ಇಂಗ್ಲೀಷ್ ಉಪನ್ಯಾಸಕರಾದ ಗಂಗಾಧರಯ್ಯ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಹಾಜರಿದ್ದರು.

ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಲು ಮನವಿ

ಹುಳಿಯಾರು: ಹೋಬಳಿಯ ಕಾಮಶೆಟ್ಟಿಪಾಳ್ಯ ಮತ್ತು ಸೋಮಜ್ಜನಪಾಳ್ಯ ಗ್ರಾಮಗಳಿಂದ ಹುಳಿಯಾರು ಪಟ್ಟಣದ ಎಪಿಎಂಸಿ ಬಳಿಯ ರಾಷ್ಟ್ರೀಯ ಹೆದ್ದಾರಿ ಸಂಧಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. ಈ ರಸ್ತೆ ಮತ್ತೊಂದು 150ಎ ಹೆದ್ದಾರಿಯಾಗಿರುವ ಹಿರಿಯೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯೂ ಆಗಿದೆ. ಕಾಮಶೆಟ್ಟಿಪಾಳ್ಯ ಹಾಗೂ ಸೋಮಜ್ಜನಪಾಳ್ಯ ಮುಖಾಂತರ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ರಸ್ತೆ ಬಹು ವರ್ಷಗಳಿಂದ ಅಭಿವೃದ್ಧಿ ಕಾಣದ ಪರಿಣಾಮ ಸಂಪೂರ್ಣ ಗುಂಡಿಗಳು ಬಿದ್ದಿವೆ. ಈಗಾಗಲೇ ದ್ವಿಚಕ್ರ ವಾಹನಗಳ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಕೂಡಲೇ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆ ಸರಿಪಡಿಸಲು ಮನವಿ. ನೊಂದ ಗ್ರಾಮಸ್ಥರು ಕಾಮಶೆಟ್ಟಿಪಾಳ್ಯ ಮತ್ತು ಸೋಮಜ್ಜನಪಾಳ್ಯ

ದೊಡ್ಡಬಿದರೆ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ

ಹುಳಿಯಾರು ಹೋಬಳಿಯ ದೊಡ್ಡಬಿದರೆ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಅಭಿಯಾನ ಅನ್ನಪ್ರಾಶನ ಕಾರ್ಯಕ್ರಮ ಜರುಗಿತು.

ಹುಳಿಯಾರಿನಲ್ಲಿ ವಿದ್ಯಾವಾರಿಧಿ ಇಂಡಿಪೆಂಡೆಂಟ್ ಪದವಿಪೂರ್ವ ಕಾಲೇಜು ಲೋಕಾರ್ಪಣೆ

ಹುಳಿಯಾರಿನಲ್ಲಿ ವಿದ್ಯಾವಾರಿಧಿ ಇಂಡಿಪೆಂಡೆಂಟ್ ಪದವಿಪೂರ್ವ ಕಾಲೇಜು ಲೋಕಾರ್ಪಣೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನ ಸುವರ್ಣಮುಖಿ ಕ್ಯಾಂಪಸ್‌‌ನಲ್ಲಿ ವಿದ್ಯಾವಾರಿಧಿ ಇಂಡಿಪೆಂಡೆಂಟ್ ಪದವಿಪೂರ್ವ ಕಾಲೇಜ್  (ಶೈಕ್ಷಣಿಕ ಸಲಹೆ ನಾರಾಯಣ ಸಮೂಹ ಸಂಸ್ಥೆ, ಹೈದರಾಬಾದ್) ಆರಂಭವಾಗಿದ್ದು  ಕಾಲೇಜಿನ ನೂತನ ಕಟ್ಟಡದ ಉದ್ಘಾಟನೆಯನ್ನು ಮಾಜಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ಜೈವಿಕ ಇಂಧನ ಮಂಡಳಿ ಅಧ್ಯಕ್ಷರಾಗಿರುವ ಕೆ.ಎಸ್.ಕಿರಣ್ ಕುಮಾರ್ ನೆರವೇರಿಸಿದರು.ಈ ವೇಳೆ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲಿನ ಕಾರ್ಯದರ್ಶಿ ಶ್ರೀಮತಿ ಕವಿತಾ ಕಿರಣ್ ಕುಮಾರ್, ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಸತೀಶ್ ಮತ್ತಿತರರು ಪಾಲ್ಗೊಂಡಿದ್ದರು. ಕಾಲೇಜಿನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ  ಪ್ರಾಂಶುಪಾಲರು(ಮೊ: 9916975243) vvipuc@gmail.com ಸಂಪರ್ಕಿಸಬಹುದಾಗಿದೆ.

ಹುಳಿಯಾರಿನ ಧ್ಯಾನ ನಗರಿಯ ಶ್ರೀ ಮಾತಾ ಚಾರಿಟಬಲ್ ಟ್ರಸ್ಟ್ ಗೆ ನಟ ಶಿವರಾಂ ಭೇಟಿ

ಚಿಕ್ಕನಾಯಕನಹಳ್ಳಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ  ಭೂಮಿ ಪೂಜೆಗೆ ಆಗಮಿಸಿದ್ದ ಅಯ್ಯಪ್ಪಸ್ವಾಮಿ ದೇವಸ್ಥಾನದ ಮುಖ್ಯಸ್ಥರಾದ ಶ್ರೀ ಟಿ.ಬಿ.ಶೇಖರ್ ಸ್ವಾಮಿ,ಕನ್ನಡ ಚಲನಚಿತ್ರ ನಟರಾದಂತಹ ಶ್ರೀ ಎಸ್.ಶಿವರಾಮ್ ಸ್ವಾಮಿ, ವಿ.ಕರಿನಪ್ಪಸ್ವಾಮಿ,ಶ್ರೀ ಜಯರಾಮ್ ಸ್ವಾಮಿ,ಶ್ರೀ ಬಾಲು ಗುರುಸ್ವಾಮಿ, ಶ್ರೀ ಪ್ರಕಾಶ್ ಸ್ವಾಮಿ,ಶ್ರೀ ಸಶಿಧರನ್ ಸ್ವಾಮಿ, ಶ್ರೀ ಭೀಮರಾಜ್ ಸ್ವಾಮಿಯವರು ಹುಳಿಯಾರಿನ ಧ್ಯಾನ ನಗರಿಯ ಶ್ರೀ ಮಾತಾ ಚಾರಿಟಬಲ್ ಟ್ರಸ್ಟ್‌ಗೆ ಭೇಟಿ ನೀಡಿ ತುಳಜಾಭವಾನಿ ಹಾಗೂ ಕಂಕಾಳಿ ದೇವಿಯ ದರ್ಶನ ಪಡೆದರು.ಟ್ರಸ್ಟ್‌ನ ವತಿಯಿಂದ ಇವರೆಲ್ಲರನ್ನೂ ಸನ್ಮಾನಿಸಲಾಯಿತು.

ಯಳನಾಡು ಕರಿಯಮ್ಮ ದೇವಿ ಜಾತ್ರೆ ಫೆ.26ರಿಂದ

ಹುಳಿಯಾರು ಹೋಬಳಿ ಯಳನಾಡು ಗ್ರಾಮದ ಗ್ರಾಮದೇವತೆ ಶ್ರೀ ಕರಿಯಮ್ಮ ದೇವಿಯವರ ಜಾತ್ರಾ ಮಹೋತ್ಸವ ಇದೇ ಫೆ.26 ರ ಶನಿವಾರದಿಂದ 28 ರ ಭಾನುವಾರದವರೆಗೆ ನಡೆಯಲಿದೆ. 26ರ ಶುಕ್ರವಾರ ಸಂಜೆ ಕರಿಯಮ್ಮ ದೇವಿಯ ಬಾನದ ಸೇವೆ ನಡೆಯಲಿದೆ.ರಾತ್ರಿ 9:00 ಗಂಟೆಗೆ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 27ರ ಶನಿವಾರ ಮಧ್ಯಾಹ್ನ 1ಗಂಟೆಗೆ ಸಿಡಿ ಉತ್ಸವ ಹಾಗೂ ಪಾನಕ ಪನಿವಾರ ಸೇವೆ ನಡೆಯಲಿದೆ. ಅದೇ ದಿನ ರಾತ್ರಿ 8 ಗಂಟೆಗೆ ಉಯ್ಯಾಲೆ ಉತ್ಸವ ಹಮ್ಮಿಕೊಳ್ಳಲಾಗಿದೆ  28ರ ಭಾನುವಾರ ರಾತ್ರಿ 8:00 ಗಂಟೆಗೆ ಪುಷ್ಪ ರಥೋತ್ಸವ ನಡೆಯಲಿದೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕರಿಯಮ್ಮ ದೇವರ ದೇವಸ್ಥಾನದ ಸಮಿತಿಯವರು ಕೋರಿದ್ದಾರೆ.

ಹುಳಿಯಾರಿನಲ್ಲಿ ಈರುಳ್ಳಿ ಹರಾಜು ಆರಂಭ

ಹುಳಿಯಾರಿನಲ್ಲಿ ಈರುಳ್ಳಿ ಹರಾಜು ಆರಂಭ ಈರುಳ್ಳಿ ವ್ಯಾಪಾರಿ ಹಾರೂನ್ ಷರೀಫ್ ಪ್ರಯತ್ನದ ಫಲ ಎಪಿಎಂಸಿ ಕಾಯ್ದೆ ತಿದ್ದುಪಡಿಯ ಪ್ರಯೋಜನ ಪ್ರತಿ ಭಾನುವಾರ, ಬುಧವಾರ ಹರಾಜು,  ಕ್ವಿಂಟಲ್ಗೆ ಕನಿಷ್ಠ 2 ಸಾವಿರ ಗರಿಷ್ಠ 4600 ರೂಗೆ ಈರುಳ್ಳಿ ಮಾರಾಟ

ಚಿಕ್ಕನಾಯಕನಹಳ್ಳಿ: ಅಯ್ಯಪ್ಪ ದೇವಾಲಯಕ್ಕೆ ಭೂಮಿಪೂಜೆ

ಚಿಕ್ಕನಾಯಕನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಶ್ರೀ ಅಯ್ಯಪ್ಪ ಸ್ವಾಮಿದೇವಾಲಯದ   ಭೂ ಕರ್ಷಣ ಹಾಗೂ ಭೂಮಿ ಶುದ್ಧ ಪೂಜೆಯೂ ಇಂದು ಸಾಂಗವಾಗಿ ನಡೆಯಿತು

ಇಂದಿನ ತಿಪಟೂರು ಕೊಬ್ಬರಿ ಧಾರಣೆ

ತಿಪಟೂರು ಕೊಬ್ಬರಿ ಧಾರಣೆ ದಿನಾಂಕ 20/02/2021 ಕನಿಷ್ಠ - 14600 ಗರಿಷ್ಠ - 15558 ಮಾದರಿ - 15000 ಒಟ್ಟು ಆವಕ - 1876.09 ಕ್ವಿಂಟಾಲ್ 4363 ಚೀಲಗಳು. ಟೆಂಡರ್ ಬೆಲೆ ರೂ.15558/-

ದೊಡ್ಡೆಣ್ಣೇಗೆರೆ: ಕ್ರಿಕೆಟ್ ಟೂರ್ನಮೆಂಟ್

ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಹೋಬಳಿಯ ದೊಡ್ಡಣ್ಣೇಗೆರೆ ಗ್ರಾಮ ಪಂಚಾಯಿತಿ 2020-21 ನೇ ಸಾಲಿನ ಯುವಜನ ಕ್ರೀಡಾ ಮೇಳ ಕಾರ್ಯಕ್ರಮದಲ್ಲಿ ಕ್ರಿಕೆಟ್ ಟೂರ್ನಮೆಂಟ್ ಜರುಗಿತು... ಈ ವೇಳೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಶಾಸಕ ನಾಗೇಶ್ ಅವರಿಂದ ಅಭಿನವ ಶ್ರೀಗಳ ಭೇಟಿ

ತಿಪಟೂರು ತಾಲ್ಲೋಕಿನ ಶಾಸಕರಾದ ಬಿ.ಸಿ ನಾಗೇಶ್‌ರವರು  ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕುಪ್ಪೂರು ತಮ್ಮಡಿಹಳ್ಳಿ ಮಠದ ಅಭಿನವಶ್ರೀಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು

ಚಿಕ್ಕನಾಯಕನಹಳ್ಳಿ: ಶ್ರೀ ಅಯ್ಯಪ್ಪಸ್ವಾಮಿಯವರ ನೂತನ ದೇವಾಲಯದ ಶಿಲಾನ್ಯಾಸ ಕಾರ್ಯಕ್ರಮ

|| ಓಂ ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ | ಶ್ರೀ ಅಯ್ಯಪ್ಪಸ್ವಾಮಿ ಚಾರಿಟಬಲ್ ಟ್ರಸ್ಟ್ (ಅ) ಅರಳೆಪೇಟೆ, ಚಿಕ್ಕನಾಯಕನಹಳ್ಳಿ, ತುಮಕೂರು ಜಿಲ್ಲೆ.... ಶ್ರೀ ಅಯ್ಯಪ್ಪಸ್ವಾಮಿಯವರ ನೂತನ ದೇವಾಲಯದ ಶಿಲಾನ್ಯಾಸ ಕಾರ್ಯಕ್ರಮ ಸ್ವಸ್ತಿ ಶ್ರೀ ಶಾರ್ವರಿನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಮಾಘಯುಕ್ತ ಶುಕ್ಲಪಕ್ಷ ದಶಮಿ ದಿನಾಂಕ 22.02.2021 ನೇ ಸೋಮವಾರ ಸಮಯ ಬೆಳಗ್ಗೆ 9 ಗಂಟೆಯ ಶುಭ ಮೀನ ಲಗ್ನದಲ್ಲಿ ಶ್ರೀ ಶಾಸ್ತ ಅಯ್ಯಪ್ಪಸ್ವಾಮಿ ಯವರ ದೇವಾಲಯ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ. ಶಿಲಾನ್ಯಾಸದ ಪೂರ್ವ ಪೂಜಾ ವಿಧಿವಿಧಾನಗಳು ದಿನಾಂಕ 20.02.2021ನೇ ಶನಿವಾರದಿಂದ 22,02.2021 ನೇ ಸೋಮವಾರದ ವರೆಗೆ ನೆರವೇರಲಿದೆ. ಅಯ್ಯಪ್ಪ ಸ್ವಾಮಿಯವರ ದೇವಾಲಯದ ಭೂಮಿ ಪೂಜೆಯ ಸಿದ್ಧತೆಯನ್ನು ವೀಕ್ಷಿಸಿದ ಮಾಜಿ ಶಾಸಕ ಸುರೇಶ್ ಬಾಬುರವರು....

ಹುಳಿಯಾರು ಪಪಂ ಚುನಾವಣೆ: ವಾರ್ಡವಾರು ಕರಡು ಮತದಾರರ ಪಟ್ಟಿ ಸಿದ್ದ

ಹುಳಿಯಾರು ಪಪಂ ಚುನಾವಣೆ: ವಾರ್ಡವಾರು ಕರಡು ಮತದಾರರ ಪಟ್ಟಿ ಸಿದ್ದ ಹುಳಿಯಾರು ಪಟ್ಟಣ ಪಂಚಾಯಿತಿ ಚುನಾವಣೆ ಸಂಬಂಧ ವಾರ್ಡವಾರು ಕರಡು ಮತದಾರರ ಪಟ್ಟಿ ಸಿದ್ದಗೊಂಡಿದ್ದು, ದಿನಾಂಕ:18-2-2021 ರಂದು ಸಂಬಂಧಿಸಿದ ಪಟ್ಟಣ ಪಂಚಾಯಿತಿ ಕಾರ್ಯಲಯ ಹುಳಿಯಾರು, ತಾಲ್ಲೂಕು ಕಛೇರಿ ಕಾರ್ಯಲಯ ಚಿ.ನಾ.ಹಳ್ಳಿ, ಹಾಗೂ ಸಂಬಂಧಿಸಿದ ಮತಗಟ್ಟೆಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಚುರ ಪಡಿಸಲಾಗಿರುತ್ತದೆ.  ಸದರಿ ಮತದಾರರ ಪಟ್ಟಿ ಸಂಬಂಧ ಯಾವುದೇ ಅಕ್ಷೇಪಣೆಗಳು ಇದ್ದಲ್ಲಿ ಖುದ್ದಾಗಿ ತಾಲ್ಲೂಕು ಕಛೇರಿಗೆ ದಿನಾಂಕ:22-02-2021 ರ ಒಳಗಾಗಿ ಸಲ್ಲಿಸಲು ಸೂಚಿಸಿದೆ.

ಕುರುಬರ ಮೀಸಲಾತಿ ಹೋರಾಟ: ಹುಳಿಯಾರು ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದರಾಮಯ್ಯ ಭಾಗಿ

ಬೆಂಗಳೂರಿನ ಮೌರ್ಯ ಹೋಟೆಲ್ ಸರ್ಕಲ್ ನ ಗಾಂಧಿ ಪ್ರತಿಮೆ ಬಳಿ ಹಿಂದುಳಿದ ವರ್ಗಗಳ ಒಕ್ಕೂಟದ ವತಿಯಿಂದ ಆಯೋಜನೆ ಮಾಡಿದ್ದ ಕುರುಬರ ಮೀಸಲಾತಿ ಹೋರಾಟದ ಪ್ರತಿಭಟನೆಯಲ್ಲಿ ರಾಜ್ಶ ಕುರುಬರ ಸಂಘದ ಸಂಸ್ಥಾಪಕ ಕಾರ್ಯಾಧ್ಶಕ್ಷ ನಿಂಗಪ್ಪ,ಬೆಂಗಳೂರು ಮಾಜಿ ಮೇಯರ್ ರಾಮಚಂದ್ರಪ್ಪ,ಮಾಜಿ ಮೇಯರ್ ಹುಚ್ಚಪ್ಪ,ಮಾಜಿ ಮೇಯರ್ ವೆಂಕಟೇಶ್ ಮೂರ್ತಿ,ಹುಳಿಯಾರು ಜಿ.ಪಂ.ಸದಸ್ಶ ವೈ ಸಿ ಸಿದ್ದರಾಮಯ್ಶ. ಭಾಗವಹಿಸಿದ್ದರು...

ಹುಳಿಯಾರು: ರಥಸಪ್ತಮಿ ಅಂಗವಾಗಿ 108 ಸೂರ್ಯ ನಮಸ್ಕಾರ

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ)ತುಮಕೂರು  ಹಾಗೂ ಹುಳಿಯಾರಿನ ಶ್ರೀ ಮಾತಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಕೋಡಿಪಾಳ್ಯದ ಧ್ಯಾನ ನಗರಿಯ ಅನಂತಪದ್ಮನಾಭ ಸನ್ನಿಧಿಯಲ್ಲಿ ಯೋಗ ಪಟುಗಳಿಂದ ಈ ದಿನ ರಥಸಪ್ತಮಿ ಅಂಗವಾಗಿ ಸಾಮೂಹಿಕ ಅಗ್ನಿಹೋತ್ರ ಮತ್ತು108 ಸೂರ್ಯ ನಮಸ್ಕಾರ ನಡೆಯಿತು

ಹಂದನಕೆರೆಗೆ ನಾಳೆ ತಹಸೀಲ್ದಾರ್ ಭೇಟಿ: ಕುಂದುಕೊರತೆ ವಿಚಾರಣೆ

ಸರ್ಕಾರದ ಸೂಚನೆಯಂತೆ ಚಿಕ್ಕನಾಯಕನಹಳ್ಳಿ ತಹಸೀಲ್ದಾರ್‌ ಸೇರಿದಂತೆ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಹಾಗೂ ಹುಳಿಯಾರು ಹೋಬಳಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಇಲಾಖೆಗಳ ಅಧಿಕಾರಿಗಳು/ನೌಕರರುಗಳ ಸಮಕ್ಷಮ ಚಿಕ್ಕನಾಯಕನಹಳ್ಳಿ ತಾಲ್ಲೂಕು ಹಂದನಕೆರೆ ಹೋಬಳಿ ಹಂದನಕೆರೆ ಗ್ರಾಮದ ಶ್ರೀ.ಕಣ್ಣಪ್ಪಸ್ವಾಮಿ ಛತ್ರ (ವಾಲ್ಮೀಕಿ ಭವನದಲ್ಲಿ ದಿನಾಂಕ: 20.02.2021 ರಂದು ಬೆಳಿಗ್ಗೆ 10.00 ರಿಂದ ಸಂಜೆ 5-00 ರವರೆಗೆ ಗ್ರಾಮಭೇಟಿ ಮಾಡಲಿದ್ದು, ಹಂದನಕೆರೆ ಗ್ರಾಮದ ಎಲ್ಲಾ ಸಾರ್ವಜನಿಕರುಗಳು ಯಾವುದೇ ಕುಂದು-ಕೊರತೆಗಳಿದ್ದಲ್ಲಿ ತಮ್ಮ ಅಹವಾಲುಗಳನ್ನು ಸಲ್ಲಿಸಲು ಈ ಮೂಲಕ ಕೋರಲಾಗಿದೆ.