ಹುಳಿಯಾರು: ಹೋಬಳಿಯ ಕಾಮಶೆಟ್ಟಿಪಾಳ್ಯ ಮತ್ತು ಸೋಮಜ್ಜನಪಾಳ್ಯ ಗ್ರಾಮಗಳಿಂದ ಹುಳಿಯಾರು ಪಟ್ಟಣದ ಎಪಿಎಂಸಿ ಬಳಿಯ ರಾಷ್ಟ್ರೀಯ ಹೆದ್ದಾರಿ ಸಂಧಿಸುವ ರಸ್ತೆ ಸಂಪೂರ್ಣ ಹಾಳಾಗಿದೆ.
ಈ ರಸ್ತೆ ಮತ್ತೊಂದು 150ಎ ಹೆದ್ದಾರಿಯಾಗಿರುವ ಹಿರಿಯೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯೂ ಆಗಿದೆ. ಕಾಮಶೆಟ್ಟಿಪಾಳ್ಯ ಹಾಗೂ ಸೋಮಜ್ಜನಪಾಳ್ಯ ಮುಖಾಂತರ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ರಸ್ತೆ ಬಹು ವರ್ಷಗಳಿಂದ ಅಭಿವೃದ್ಧಿ ಕಾಣದ ಪರಿಣಾಮ ಸಂಪೂರ್ಣ ಗುಂಡಿಗಳು ಬಿದ್ದಿವೆ. ಈಗಾಗಲೇ ದ್ವಿಚಕ್ರ ವಾಹನಗಳ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಕೂಡಲೇ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆ ಸರಿಪಡಿಸಲು ಮನವಿ.
ನೊಂದ ಗ್ರಾಮಸ್ಥರು ಕಾಮಶೆಟ್ಟಿಪಾಳ್ಯ ಮತ್ತು ಸೋಮಜ್ಜನಪಾಳ್ಯ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ