ಚಿಕ್ಕನಾಯಕನಹಳ್ಳಿ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿಪಕ್ಷದ ವತಿಯಿಂದ ಕೇಂದ್ರ ಸರ್ಕಾರದ ರೈತ ವಿರೋಧಿ ಮಸೂದೆಗಳನ್ನು ಮತ್ತು ಪೆಟ್ರೋಲ್ ಡೀಸೆಲ್ ಗ್ಯಾಸ್ ಗಳ ದರ ಏರಿಕೆಯ ಕ್ರಮವನ್ನು ಖಂಡಿಸಿ ನೆಹರೂ ಸರ್ಕಲ್ ನಲ್ಲಿ ಪ್ರತಿಭಟನೆ ಮಾಡಲಾಯಿತು.
ನಂತರ ತಹಸೀಲ್ದಾರ್ ರವರ ಮುಖಾಂತರ ರಾಷ್ಟ್ರಪತಿರವರಿಗೆ ಮಧ್ಯ ಪ್ರವೇಶ ಮಾಡಿ ಈ ಜನವಿರೋಧಿ, ರೈತ ವಿರೋಧಿ ಕಾನೂನುಗಳನ್ನು ರದ್ದು ಮಾಡುವಂತೆ ಮನವಿ ಸಲ್ಲಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಸಿ ಬಸವರಾಜು,ಜಿಲ್ಲಾ ಉಪಾಧ್ಯಕ್ಷರಾದ ಹೆಚ್ ಸಿ ಹನುಮಂತಯ್ಯ,ಬ್ಲಾಕ್ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರಾದ ಸಿ. ಡಿ ಚಂದ್ರಶೇಖರ್ ,ಮಾಜಿ ಶಾಸಕರಾದ ಬಿ ಲಕ್ಕಪ್ಪ,ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್, ಯುವ ಅಧ್ಯಕ್ಷರಾದ ಸಾಸಲು ಮಂಜುನಾಥ್, ಮಹಿಳಾ ಅಧ್ಯಕ್ಷರಾದ ಅನಂತ ಲಕ್ಷ್ಮಿ,ಹುಳಿಯಾರ್ ಹಿಂದುಳಿದ ಸಮಿತಿ ಅಧ್ಯಕ್ಷರಾದ ಪ್ರಸನ್ನ ಕುಮಾರ್, ಗೋವಿಂದರಾಜು,ಕಾರ್ಯದಶಿ ಬ್ರಹ್ಮನಂದ್, ರಾಜ್ಯ ಕಾರ್ಮಿಕರ ಕಾರ್ಯದರ್ಶಿ ಆನಂದ್, ದಾದಪೀರ್, ಲಿಂಗರಾಜು,ವಕ್ತಾರರಾದ ಕೆ ಜೆ ಕೃಷ್ಣಗೌಡ,ಲಿಂಗರಾಜ,ಜಾಕಿರ್,ಭಾಗವಹಿಸಿದ್ದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ