ಚಿಕ್ಕನಾಯಕನಹಳ್ಳಿ ನಗರದಲ್ಲಿ ನಾಯಿಗಳ/ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು ಇತ್ತೀಚೆಗೆ ಲಕ್ಷ್ಮೀನರಸಿಂಹ ಚಿತ್ರಮಂದಿರದ ಬಳಿ ಇಬ್ಬರು ಮಹಿಳೆ ಸೇರಿದಂತೆ 3 ಜನರಿಗೆ ಬೀದಿನಾಯಿ ಕಡಿದು ಗಾಯಗೊಳಿಸಿರುತ್ತದೆ.
ಜೋಗಿಹಳ್ಳಿ ಬಳಿ ವೇದಾಂತ್ ಎಂಬ ಎಂಟು ವರ್ಷದ ಬಾಲಕನಿಗೆ ಕುದುರೆಯೊಂದು ಕಡಿದು ಗಾಯಗೊಳಿಸಿದೆ.17-02-2021 ನಗರದ ಕನ್ನಡ ಸಂಘದ ಬಳಿ ಪತ್ರಕರ್ತ ಸಿದ್ದರಾಮಯ್ಯ ಎಂಬುವರಿಗೆ ಮತ್ತು ಕನ್ನಡ ಸಂಘದ ಅಧ್ಯಕ್ಷರಾದ ಸಿ.ಬಿ.ರೇಣುಕಸ್ವಾಮಿಯವರಿಗೆ ಹುಚ್ಚು ನಾಯಿಯಂದು ಕಡಿದು ಗಾಯಗೊಳಿಸಿದೆ. ಅದನ್ನು ನೋಡಲು ಬಂದ ಪುರಸಭಾ ಆರೋಗ್ಯ ಅಧಿಕಾರಿಯೊಬ್ಬರಿಗೆ ಅದೇ ಹುಚ್ಚುನಾಯಿ ಕಡಿದಿದೆ.ನಗರದಲ್ಲಿ ಚಿಕ್ಕ ಚಿಕ್ಕ ಮಕ್ಕಳು ವಯಸ್ಸಾದವರು ಓಡಾಡುವುದು ತುಂಬ ಕಷ್ಟವಾಗಿದೆ.
ಇಡಿ ನಗರದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಪುರಸಭೆ ಕಾನೂನು ರೀತಿಯ ಕ್ರಮಕೈಗೊಂಡು ಅವುಗಳನ್ನು ನಿಯಂತ್ರಿಸುವಂತೆ
ಚಿಕ್ಕನಾಯಕನಹಳ್ಳಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಾಕ್ಷರಾದ ಸಿ.ಡಿ.ಚಂದ್ರಶೇಖರ್, ವಕ್ತಾರರಾದ ಕೆಜಿ ಕೃಷ್ಣೇಗೌಡ ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ