ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮತ್ತಿಘಟ್ಟದ ಶ್ರೀ ಜಯಭಾರತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಹುಳಿಯಾರಿನ BMS ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಬಿಳಿಗೆರೆ ಕೃಷ್ಣಮೂರ್ತಿಯವರು ವಿದ್ಯಾರ್ಥಿಗಳಿಗೆ Historyಯ ಚರಿತ್ರೆ- ಚಾರಿತ್ರ್ಯ, ರಾಜ ಮನೆತನದ ರಾಜತ್ವ, ಹೆಣ್ಣು ಮಕ್ಕಳ ಅಸ್ತಿತ್ವ, ಗ್ರಾಮೀಣದ ದುಡಿಯುವ ವರ್ಗ ಹಾಗೂ ಕೃಷಿಯಲ್ಲಿನ ಬೀಜದ, ನೀರಾವರಿ, ಬೆಳೆ, ಪ್ರಾಣಿ ಮುಂತಾದ ಚರಿತ್ರೆಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಈ ವೇಳೆ ಕಾಲೇಜಿನ ಪ್ರಾಂಶುಪಾಲರಾದ ಲೋಕೇಶ್, ಇಂಗ್ಲೀಷ್ ಉಪನ್ಯಾಸಕರಾದ ಗಂಗಾಧರಯ್ಯ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ