(ಸುದ್ದಿ:✍️ನರೇಂದ್ರಬಾಬು,ಹುಳಿಯಾರು)
ಹುಳಿಯಾರು, ಚಿಕ್ಕನಾಯಕನಹಳ್ಳಿ ತಿಪಟೂರು, ತುರುವೇಕೆರೆ ಮತ್ತು ತುಮಕೂರು ಕಡೆಗಳಲ್ಲಿ ಸರಗಳ್ಳತನ ಮಾಡುತ್ತಿದ್ದ ಕಳ್ಳರನ್ನು ಬಂಧಿಸಿ ಒಟ್ಟು 17,52,750 ರೂ ಮೌಲ್ಯದ 369 ಗ್ರಾಂ ತೂಕದ ಚಿನ್ನಾಭರಣ ಮತ್ತು ಒಂದು ದ್ವಿಚಕ್ರವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ದಿನಾಂಕ:-21-12-2020 ರಂದು ಬೆಳಗ್ಗೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರು ಹೋಬಳಿ ಬೆಳವಾಡಿ ಬಳಿ ಮಹಿಳೆಯು ತೋಟಕ್ಕೆ ಹೋಗಿದ್ದ ಸಮಯದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಬಂದು ಮಹಿಳೆಯ ಕೊರಳನಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿದ್ದು, ಈ ಸಂಬಂಧ ಹುಳಿಯಾರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಕೇಸಿನ ಆರೋಪಿತರನ್ನು ಪತ್ತೆ ಮಾಡಲು ತಿಪಟೂರು ಉಪವಿಭಾಗದ ಡಿ.ಎಸ್.ಪಿ.ರವರ ಮಾರ್ಗದರ್ಶನದಲ್ಲಿ ಚಿಕ್ಕನಾಯಕನಹಳ್ಳಿ ವೃತ್ತದ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಹುಳಿಯಾರು ಪೊಲೀಸ್ ಠಾಣಾ ಪಿ.ಎಸ್.ಐ. ಹಾಗೂ ಚಿ.ನಾ ಹಳ್ಳಿ ಪೊಲೀಸ್ ಠಾಣಾ ಪಿ.ಎಸ್.ಐ. ರವರ ತಂಡ ರಚಿಸಿದ್ದು, ದಿನಾಂಕ:-22/01/2021 ರಂದು ಈ ಕೆಳಕಂಡ ಆರೋಪಿತರನ್ನು ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಿದಾಗ ಹುಳಿಯಾರು ಪೋಲೀಸ್ ಠಾಣೆಯ ೦2 ಪ್ರಕರಣ, ಚಿ.ನಾ ಹಳ್ಳಿ ಠಾಣೆಯ 01 ಪ್ರಕರಣ, ತಿಪಟೂರು ನಗರ ಠಾಣೆಯ 02 ಪ್ರಕರಣ, ತುರುವೇಕೆರೆ ಪೊಲೀಸ್ ಠಾಣೆಯ 01 ಪ್ರಕರಣ, ಮತ್ತು ತುಮಕೂರಿನ ಹೊಸಬಡಾವಣೆ ಪೊಲೀಸ್ ಠಾಣೆಯ 02 ಪ್ರಕರಣ, ಒಟ್ಟು 08 ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದು, ಆರೋಪಿತರಿಂದ ಒಟ್ಟು 17,52,750 ರೂ ಮೌಲ್ಯದ 369 ಗ್ರಾಂ ಚಿನ್ನಾಭರಣ ಮತ್ತು ಒಂದು ದ್ವಿಚಕ್ರ ವಾಹನವನ್ನು ಅಮಾನತ್ತು ಪಡಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತೆ.
ಬಂಧಿತ ಆರೋಪಿಗಳನ್ನು
1) ಆಲಿಬಾಬ ಬಿನ್ ಲೇಟ್ ಏಜಾಜ್, 50 ವರ್ಷ, ಉಂಗುರದ ಕಲ್ಲಿನ ವ್ಯಾಪಾರ ಮತ್ತು ಬಟ್ಟೆ ವ್ಯಾಪಾರಿ ,ಪುಟ್ಟಸ್ವಾಮಯ್ಯನ ಪಾಳ್ಯ, ಶಿರಾಗೇಟ್, ಶನಿಮಹಾತ್ಮ ದೇವಸ್ಥಾನ ಹತ್ತಿರ. ತುಮಕೂರು ಟೌನ್ ( ಹಾಲಿ ತಿಪಟೂರು ವಾಸಿ)
ಹಾಗೂ
2) ಸಿರಾಜ್ ಅಲಿ ಬಿನ್ ಲೇಟ್ ಇಕ್ಬಾಲ್ ಆಲಿಖಾನ್, 37 ವರ್ಷ, ಹಾಲಿ ತಿಪಟೂರು ವಾಸಿ ಎಂದು ಗುರುತಿಸಲಾಗಿದೆ.
ಸದರಿ ಪ್ರಕರಣದ ಆರೋಪಿಗಳು ಮತ್ತು ಕಳವು ಮಾಲನ್ನು ಪತ್ತೆ ಹಚ್ಚಲು ಶ್ರಮಿಸಿದ ತಿಪಟೂರು ಪೊಲೀಸ್ ಉಪಾಧೀಕ್ಷಕರಾದ ಚಂದನ್ ಕುಮಾರ್. ಎನ್ , ಚಿಕ್ಕನಾಯಕನಹಳ್ಳಿ ವೃತ್ತ ನಿರೀಕ್ಷಕರಾದ ಶ್ರೀಮತಿ ವೀಣಾ ಎಸ್ಎಂ, ಹುಳಿಯಾರು ಪೊಲೀಸ್ ಠಾಣೆಯ ಪಿಎಸ್‌ಐರವರಾದ ರಮೇಶ್ ಕೆ. ಟಿ, ಚಿಕ್ಕನಾಯಕನಹಳ್ಳಿ ಠಾಣೆಯ ಪಿಎಸ್‌ಐ ರವರಾದ ಹರೀಶ್ ಎಸ್ ಮತ್ತು ಸಿಬ್ಬಂದಿಗಳಾದ ಮಹಮ್ಮದ್ ಮಕ್ತಿಯಾರ್, ಚೇತನ್ ಕೆ.ವಿ, ಮಧುಸೂಧನ್, ನಾಗಭೂಷಣ್, ಮಂಜಪ್ಪ. ಟಿ, ಮಂಜುನಾಥ್, ಎಸ್ ಜೀವನ್ ಮತ್ತು ಚಿದಾನಂದ ರವರುಗಳ ತಂಡವನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ// ಕೆ. ವಂಶಿಕೃಷ್ಣ ಹಾಗೂ ತುಮಕೂರು ಜಿಲ್ಲಾ ಹೆಚ್ಚುವರಿ ಹೊಲೀಸ್ ಅಧೀಕ್ಷಕರಾದ ಟಿ.ಜೆ. ಉದೇಶ್‌ರವರು ಅಭಿನಂದಿಸಿರುತ್ತಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ