ಹುಳಿಯಾರು ಹೋಬಳಿ ಯಳನಾಡು ಗ್ರಾಮದ ಗ್ರಾಮದೇವತೆ ಶ್ರೀ ಕರಿಯಮ್ಮ ದೇವಿಯವರ ಜಾತ್ರಾ ಮಹೋತ್ಸವ ಇದೇ ಫೆ.26 ರ ಶನಿವಾರದಿಂದ 28 ರ ಭಾನುವಾರದವರೆಗೆ ನಡೆಯಲಿದೆ.26ರ ಶುಕ್ರವಾರ ಸಂಜೆ ಕರಿಯಮ್ಮ ದೇವಿಯ ಬಾನದ ಸೇವೆ ನಡೆಯಲಿದೆ.ರಾತ್ರಿ 9:00 ಗಂಟೆಗೆ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
27ರ ಶನಿವಾರ ಮಧ್ಯಾಹ್ನ 1ಗಂಟೆಗೆ ಸಿಡಿ ಉತ್ಸವ ಹಾಗೂ ಪಾನಕ ಪನಿವಾರ ಸೇವೆ ನಡೆಯಲಿದೆ. ಅದೇ ದಿನ ರಾತ್ರಿ 8 ಗಂಟೆಗೆ ಉಯ್ಯಾಲೆ ಉತ್ಸವ ಹಮ್ಮಿಕೊಳ್ಳಲಾಗಿದೆ
28ರ ಭಾನುವಾರ ರಾತ್ರಿ 8:00 ಗಂಟೆಗೆ ಪುಷ್ಪ ರಥೋತ್ಸವ ನಡೆಯಲಿದೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ