ಇನ್ಮುಂದೆ ಪ್ರತಿ ಸೋಮವಾರ ಮಧ್ಯಾಹ್ನ 2:30 ರಿಂದ 4:00 ಗಂಟೆಯವರೆಗೆ ತಾಲ್ಲೂಕು ಕಚೇರಿಯಲ್ಲಿಯೇ ಕುಳಿತು ಅರ್ಜಿಗಳ ವಿಲೇವಾರಿ
ಹುಳಿಯಾರು: ಜನರ ಸಮಸ್ಯೆಗಳನ್ನು ಆಲಿಸಲು ಮತ್ತು ಸ್ಥಳದಲ್ಲಿಯೇ ಪರಿಹಾರ ನೀಡಲು ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ 'ಮನೆ ಬಾಗಿಲಿಗೆ ಮನೆ ಮಗ' ಎಂಬ ವಿನೂತನ ಕಾರ್ಯಕ್ರಮಕ್ಕೆ ಶಾಸಕ ಸುರೇಶ್ ಬಾಬು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸುರೇಶ್ ಬಾಬು, ತಾವು ಗೆದ್ದ ನಂತರ ಪ್ರತಿ ಸೋಮವಾರ ಜನಸ್ಪಂದನ ಕಾರ್ಯಕ್ರಮವನ್ನು ನಡೆಸುತ್ತಿರುವುದಾಗಿ ತಿಳಿಸಿದರು. ಈಗಾಗಲೇ 75 ವಾರಗಳಿಂದ ಈ ಕಾರ್ಯಕ್ರಮವು ನಿರಂತರವಾಗಿ ನಡೆಯುತ್ತಿದೆ. ಕಳೆದ 13 ವಾರಗಳಿಂದ ಪ್ರತಿ ಶುಕ್ರವಾರ ಮನೆ ಬಾಗಿಲಿಗೆ ಮನೆ ಮಗ ಎಂಬ ಕಾರ್ಯಕ್ರಮವನ್ನು ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಹಮ್ಮಿಕೊಂಡು ಪ್ರತಿ ಹಳ್ಳಿಗಳಿಗೂ ತೆರಳಿ ಜನರ ಸಮಸ್ಯೆ ಆಲಿಸಲಾಗುತ್ತಿದೆ.ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಜನರು ನೇರವಾಗಿ ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮುಂದೆ ಮಂಡಿಸಲು ಈ 'ಮನೆ ಬಾಗಿಲಿಗೆ ಮನೆ ಮಗ' ಕಾರ್ಯಕ್ರಮ ಸಹಾಯಕವಾಗಿದೆ.ಶಾಸಕರ ಬಳಿ ನೇರವಾಗಿ ಹೇಳಿಕೊಳ್ಳಲಿಕ್ಕಾಗಿಯೇ ಈ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗಿದ್ದು ಇದಕ್ಕಾಗಿ ವಿಧಾನಸಭಾ ಕ್ಷೇತ್ರವನ್ನು ಆರು ಜಿಲ್ಲಾ ಪಂಚಾಯಿತಿ ಮತ್ತು ಹುಳಿಯಾರು ಪಟ್ಟಣ ಪಂಚಾಯಿತಿ ಹಾಗೂ ಚಿಕ್ಕನಾಯಕನಹಳ್ಳಿ ಪುರಸಭೆ ವ್ಯಾಪ್ತಿಗೆ ಬರುವಂತೆ ಎಂಟು ಭಾಗಗಳಾಗಿ ವಿಂಗಡಿಸಲಾಗಿದೆ. ಪ್ರತಿ ತಿಂಗಳು ಎರಡು ಬಾರಿ, ಪ್ರತಿ ಹೋಬಳಿಯಲ್ಲಿ ಒಂದು ಪಂಚಾಯಿತಿಯಲ್ಲಿ ಎಲ್ಲರೂ ಒಂದೇ ಕಡೆ ಸಿಗುವಂತೆ ವ್ಯವಸ್ಥೆ ಮಾಡಲಾಗುವುದು. ಅಲ್ಲದೆ, ಪ್ರತಿ ಶುಕ್ರವಾರ ಎಲ್ಲ ಹಳ್ಳಿಗಳಿಗೂ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಲಾಗುವುದು ಎಂದು ಹೇಳಿದರು..
ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರ ನೇತೃತ್ವದಲ್ಲಿ ಈಗಾಗಲೇ ಹಸುಗಳನ್ನು ಸಾಕಲು ಇಚ್ಚಿಸುವವರ ಕುರಿತು ಸರ್ವೇ ನಡೆಸಲಾಗಿದೆ.ಯಾವುದೇ ಕುಟುಂಬದಲ್ಲಿ ಹೆಣ್ಣುಮಕ್ಕಳಿದ್ದರೆ, ಅವರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಇದು ಸಹಾಯಕವಾಗಲಿದೆ ಎಂದರು.ಕೃಷಿ ಮತ್ತು ಕೃಷಿ ಉಪಕರಣಗಳು:
ಕೃಷಿ ಇಲಾಖೆಯಿಂದ ರೈತರಿಗೆ ಅಗತ್ಯ ಉಪಕರಣಗಳನ್ನು ನೀಡಲಾಗುತ್ತಿದೆ.ಹಿಂದೆ ಕೇವಲ 400-500 ಸ್ಪ್ರಿಂಕ್ಲರ್ ಸೆಟ್‌ಗಳನ್ನು ನೀಡಲಾಗುತ್ತಿತ್ತು, ಆದರೆ ಈ ವರ್ಷ 7,000ಕ್ಕೂ ಹೆಚ್ಚು ಸೆಟ್‌ಗಳನ್ನು ವಿತರಿಸಲಾಗಿದೆ.ಈ ಬಾರಿ ಇನ್ನೂ ಹೆಚ್ಚಿನ ಸ್ಪ್ರಿಂಕ್ಲರ್ ಸೆಟ್‌ಗಳನ್ನು ನೀಡಲಾಗುವುದು ಮತ್ತು ಇನ್ನು ಮುಂದೆ ಒಂದು ಎಕರೆ ಬದಲಾಗಿ ಅರ್ಧ ಎಕರೆ ಜಮೀನು ಇರುವವರಿಗೂ ಈ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.
ರಸಗೊಬ್ಬರ ಲಭ್ಯತೆ:
ಗೊಬ್ಬರದ ಲಭ್ಯತೆ ಇದ್ದು ಲೈಸೆನ್ಸ್ ಹೊಂದಿರುವವರು ಇಲ್ಲಿಯೇ ಗೊಬ್ಬರವನ್ನು ಮಾರಾಟ ಮಾಡಬಹುದು ಮತ್ತು ಆ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಲು ರೈತರಿಗೆ ತಿಳಿಸಿದರು
ಮೂಲಭೂತ ಸೌಕರ್ಯಗಳು ಮತ್ತು ಅಭಿವೃದ್ಧಿ ಕಾರ್ಯಗಳು : ರಸ್ತೆಗಳು ಮತ್ತು ಚರಂಡಿ ನಿರ್ಮಾಣದ ಬಗ್ಗೆಯೂ ಕ್ರಮ ಕೈಗೊಳ್ಳಲಾಗಿದೆ.ಈಗಾಗಲೇ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 30 ಕೋಟಿಗೂ ಹೆಚ್ಚು ವೆಚ್ಚದಲ್ಲಿ ರಸ್ತೆಗಳನ್ನು ನಿರ್ಮಿಸಲಾಗಿದೆ. ಇನ್ನಾದರೂ ಆಗಿಲ್ಲದ ರಸ್ತೆಗಳ ಬಗ್ಗೆ ಪಟ್ಟಿ ನೀಡಿದರೆ, ಅವುಗಳನ್ನು ಕೂಡ ಆಕ್ಷನ್ ಪ್ಲಾನ್ ಮಾಡಿ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದರು.
ಮನೆಗಳ ಕುರಿತು ಮಾತನಾಡಿದ ಸುರೇಶ್ ಬಾಬು, ಸೈಟ್ ಇಲ್ಲದವರಿಗೆ 69ನೇ ಸರ್ವೆ ನಂಬರಿನ 5 ಎಕರೆ ಜಮೀನಿನಲ್ಲಿ ಸೈಟ್ ಹಂಚಿಕೆ ಮಾಡಲಾಗುವುದು. ಗ್ರಾಮ ಪಂಚಾಯತಿ ಅಧ್ಯಕ್ಷರು ರೆಸಲ್ಯೂಷನ್ ಮಾಡಿ ಕೊಟ್ಟರೆ, ಅದನ್ನು ಫಾಲೋ ಅಪ್ ಮಾಡಿಸಿ ಟೌನ್ ಪ್ಲಾನಿಂಗ್ ಮೂಲಕ ಎಲ್ಲರಿಗೂ ಸೈಟ್ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು. ಅಲ್ಲದೆ, ಸೈಟ್ ಇರುವವರು ಅದನ್ನು ಉಪಯೋಗಿಸಿಕೊಳ್ಳಬೇಕು. ಗ್ರಾಮಸಭೆಯಲ್ಲಿ ಅರ್ಜಿಗಳನ್ನು ಸಲ್ಲಿಸಿದರೆ, ಅವರಿಗೆ ಮನೆ ನಿರ್ಮಿಸಲು 7 ಲಕ್ಷ ರೂಪಾಯಿವರೆಗೆ ಹಣ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಜಿಪಿಎಸ್ ಆಗುವುದರಿಂದ ಕಟ್ಟಿರುವ ಮನೆಗಳಿಗೆ ಈ ಸೌಲಭ್ಯ ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಕಾರ್ಯಕ್ರಮದಿಂದ ವೃದ್ಧಾಪ್ಯ ವೇತನಗಳಂತಹ ಅರ್ಜಿಗಳ ಸಂಖ್ಯೆ ಕಡಿಮೆಯಾಗಿದ್ದು, ಜನರ ಸಮಸ್ಯೆಗಳು ನೇರವಾಗಿ ಪರಿಹಾರವಾಗುತ್ತಿವೆ.ಕಂದಾಯ ಇಲಾಖೆಗೆ ಸಂಬಂಧಿಸಿದ ಮಂಜೂರಾತಿ, ಖಾತೆ ಮುಂತಾದ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತಿ ಸೋಮವಾರ ಮಧ್ಯಾಹ್ನ 2:30 ರಿಂದ 4:00 ಗಂಟೆಯವರೆಗೆ ತಾಲ್ಲೂಕು ಕಚೇರಿಯಲ್ಲಿಯೇ ಕುಳಿತು ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು.ಇದರಿಂದ ಜನರ ಅಲೆದಾಟ ತಪ್ಪಲಿದೆ ಎಂದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ