( ಹುಳಿಯಾರು ಸಮೀಪದ ಬೊಮ್ಮೇನಹಳ್ಳಿಯ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ವಿವಿಧ ಮಠದ ಶ್ರೀಗಳು ಹಾಜರಿರುವುದು ಶಾಸಕ ಸುರೇಶ್ ಬಾಬು,ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್, ಕೋಡಿಹಳ್ಳಿ ಚಂದ್ರಶೇಖರ್ ಮತ್ತಿತರರಿದ್ದಾರೆ.) ಮೊದ ಮೊದಲು ಮದುವೆಗಳು ಟೆಸ್ಟ್ ಮ್ಯಾಚ್ ರೀತಿ ಐದು ದಿನಗಳು ನಡೆಯುತ್ತಿದ್ದವು. ನಂತರ ಒನ್ ಡೇ ಮ್ಯಾಚ್ ರೀತಿ ಒಂದೇ ದಿನಕ್ಕೆ ಮುಗಿಸುವಂತಾಯಿತು. ಈಗ ಟ್ವೆಂಟಿ-20 ಮ್ಯಾಚ್ಗಳ ರೀತಿ ಮೂರ್ನಾಲ್ಕು ಗಂಟೆಗೆ ಸೀಮಿತವಾಗುತ್ತಿದ್ದು ವಸ್ತುಗಳ ಬೆಲೆ ಗಗನಕ್ಕೇರುತ್ತಿರುವ ಈ ಕಾಲದಲ್ಲಿ ಅನಗತ್ಯ ದುಂದುವೆಚ್ಚ ಆಗುವುದನ್ನು ತಡೆಯುವ ನಿಟ್ಟಿನಲ್ಲಿ ಇದು ಸ್ವಾಗತಾರ್ಹ ಬೆಳವಣಿಗೆ ಎಂದು ಕುಪ್ಪೂರು-ತಮ್ಮಡಿಹಳ್ಳಿ ವಿರಕ್ತ ಮಠಾಧ್ಯಕ್ಷ ಡಾ.ಅಭಿನವ ಮಲ್ಲಿಕಾರ್ಜುನ ದೇಶೀಕೇಂದ್ರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು. ಹುಳಿಯಾರು ಸಮೀಪದ ಬೊಮ್ಮೇನಹಳ್ಳಿಯಲ್ಲಿ ಸುವರ್ಣಮುಖಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ರೈತ ಸಂಘದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಗ್ರಾಮೀಣ ಸಿದ್ಧರಾಮ ಸ್ಮರಣೋತ್ಸವ ಹಾಗೂ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಆಶೀರ್ವಚನ ನೀಡಿದ ಅವರು ಮದುವೆಗಳಿಗೆ ಆಡಂಭರ ಮುಖ್ಯವಲ್ಲ ಸತಿಪತಿಗಳ ಮನಸ್ಸುಗಳು ಪರಸ್ಪರ ಅರ್ಥಮಾಡಿಕೊಳ್ಳುವುದು ಮುಖ್ಯ ಎಂದರು. ವ್ಯರ್ಥವಾಗಿ ಬದುಕು ಸವೆಸಿ ಮಣ್ಣಾಗುವ ಬದಲು ಸಾರ್ಥಕ ಜೀವನ ನಡೆಸಿ ಆದರ್ಶ ಬದುಕು ಬಾಳಿದಾಗ ಮಾತ್ರ ಮಾನವನಾಗಿ ಜನ್ಮ ಪಡೆದದಕ್ಕೂ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ...
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070