ಹುಳಿಯಾರು ಸಮೀಪದ ತೊರೆಸೂರಗೊಂಡನಹಳ್ಳಿಯಲ್ಲಿ ನೆಲೆಸಿರುವ ಶ್ರೀ ಬಸವೇಶ್ವರಸ್ವಾಮಿ ಮತ್ತು ಶ್ರೀ ಚೌಡಮ್ಮನವರ ಜಾತ್ರಾ ಮಹೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು.
ಇದರಂಗವಾಗಿ ಧ್ವಜಾರೋಹಣ, ರುದ್ರಾಭಿಷೇಕ, ಮಹಾಮಂಗಳಾರತಿ, ಹೊಳೆಸೇವೆ, ಅಗ್ನಿಕುಂಡ, ಮದವಣಗಿತ್ತಿ ಸೇವೆ, ಕಳಸೋತ್ಸವ, ಆರತಿಬಾನ, ರಾಜಬೀದಿ ಉತ್ಸವ, ಓಕುಳಿ ಸೇವೆ ಮುಂತಾದ ಪೂಜಾ ಕೈಂಕರ್ಯಗಳು ಜರುಗಿದವು.
ಕಳಸ ಮಹೋತ್ಸವದ ಪ್ರಯುಕ್ತ ಹೊಳೆಯಿಂದ ಶ್ರೀ ಅಮ್ಮನವರ ಮೂಲ ಸ್ಥಾನಕ್ಕೆ ಟಿ.ಎಸ್.ಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ 44 ಮಂದಿ ಹೆಣ್ಣು ಮಕ್ಕಳು ಕಳಸಹೊತ್ತು ಮಂಗಳವಾದ್ಯದೊಂದಿಗೆ ನಡೆಮುಡಿಯಲ್ಲಿ ಆಗಮಿಸಿದರು.ನಂತರ ರಾತ್ರಿ ನಡೆದ ಅಗ್ನಿಕುಂಡ ಮಹೋತ್ಸವದಲ್ಲಿ ಐವತ್ತಕ್ಕೂ ಹೆಚ್ಚು ಭಕ್ತರು ಕೆಂಡ ಹಾಯ್ದು ಭಕ್ತಿಬಾವ ಸಮರ್ಪಿಸಿದರು.
ರಥೋತ್ಸವದ ಅಂಗವಾಗಿ ಮುಂಜಾನೆಯಿಂದಲೆ ಧಾರ್ಮಿಕ ವಿಧಿವಿಧಾನಗಳು ನಡೆದು ಅಸಂಖ್ಯಾತ ಭಕ್ತರ ಉದ್ಘೋಷದೊಂದಿಗೆ ಸರ್ವಾಲಂಕೃತ ರಥದಲ್ಲಿ ಶ್ರೀಸ್ವಾಮಿ ಹಾಗೂ ಅಮ್ಮನವರನ್ನು ಪ್ರತಿಷ್ಠಾಪಿಸಿ ನಾಸಿಕ್ ಡೋಲ್, ಡೊಳ್ಳು ಕುಣಿತ ಮಂಗಳವಾದ್ಯದೊಂದಿಗೆ ಬ್ರಹ್ಮ ರಥೋತ್ಸವ ನೆರವೇರಿಸಲಾಯಿತು. ನೆರದಿದ್ದ ಭಕ್ತಾಧಿಗಳು ರಥ ಎಳೆದು ಹಣ್ಣುಕಾಯಿ ಮಾಡಿಸಿಕೊಂಡು ಹರಕೆ ತೀರಿಸಿಕೊಂಡರು.
ಅನ್ನಸಂತರ್ಪಣೆ, ಆರ್ಕೇಸ್ಟಾ, ಹಿರಿಯರ ಕ್ರೀಡಾಕೂಟ ಹೀಗೆ ಅನೇಕ ಮನರಂಜನ ಕಾರ್ಯಕ್ರಮಗಳೂ ಸಹ ಜರುಗಿತು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ