ಹುಳಿಯಾರು ಗ್ರಾ.ಪಂ.ಗೆ ತಹಸೀಲ್ದಾರ್ ಭೇಟಿ
-------------------------------------
ಅವಧಿ ಮುಗಿದಿರುವ ಹುಳಿಯಾರು ಗ್ರಾಮ ಪಂಚಾಯ್ತಿಗೆ ಆಡಳಿತಾಧಿಕಾರಿಯಾಗಿ ನೇಮಕಗೊಂಡಿರುವ ತಹಸೀಲ್ದಾರ್ ಟಿ.ಸಿ.ಕಾಂತರಾಜು ಅವರು ಶುಕ್ರವಾರ ಸಂಜೆ ಗ್ರಾಮ ಪಂಚಾಯ್ತಿಗೆ ದಿಡೀರ್ ಭೇಟಿ ನೀಡಿ ಕಾರ್ಯದರ್ಶಿಯೊಂದಿಗೆ ಇಲ್ಲಿನ ಸಮಸ್ಯೆಗಳ ಬಗ್ಗೆ ಹಾಗೂ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಕುರಿತು ಚರ್ಚಿಸಿದರು. ನೈರ್ಮಲ್ಯ, ಕರವಸೂಲಿ ಹಾಗೂ ಕುಡಿಯುವ ನೀರು ಸರಭರಾಜು ಸಂಬಂಧ ಅಗತ್ಯ ಸಲಹೆ ಸೂಚನೆ ನೀಡಿದರು.
ಜಮಾಖರ್ಚಿನ ಪುಸ್ತಕ ಪರಿಶೀಲಿಸಿದ ತಹಸೀಲ್ದಾರ್ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿದ್ದರೂ ಸಹ ಈ ಹಿಂದೆ ಲಕ್ಷಾಂತರ ರು.ಗಳಿಗೆ ಚೆಕ್ ಗಳನ್ನು ನೀಡಿರುವ ಬಗ್ಗೆ ಕೆಂಡಮಂಡಲವಾಗಿ ಯಾವ ಆಧಾರದ ಮೇಲೆ ಚೆಕ್ ನೀಡಿರುವಿರಿ, ಸಭಾ ನಡಾವಳಿಕೆ ಆಗಿದೆಯೆ, ಹಣವಿಲ್ಲದಿದ್ದರೂ ಚೆಕ್ ನೀಡುವ ಅಗತ್ಯತೆ ಏನಿತ್ತು ಎಂದು ಕಾರ್ಯದರ್ಶಿ ಗೋಪಾಕೃಷ್ಣ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರಲ್ಲದೆ ಕೂಡಲೆ ಬ್ಯಾಂಕ್ ಗಳಿಗೆ ಹಿಂದಿನ ಚೆಕ್ ಗಳಿಗೆ ಹಣ ಪಾವತಿಸದೆ ತಡೆಹಿಡಿಯಲು ಪತ್ರ ಬರೆಯುವಂತೆ ಆದೇಶಿಸಿದರು.
ಬೇಸಿಗೆಯ ಈ ದಿನದಲ್ಲಿ ನೀರಿನ ಸಮಸ್ಯೆ ತೀವ್ರವಾಗಿರಿವುದನ್ನು ಮನಗಂಡ ತಹಸಿಲ್ದಾರ್ ಕಾಂತರಾಜು ಅವರು ನೀರಿಗೆ ಮೊದಲ ಆದ್ಯತೆ ನೀಡುವುದಾಗಿ ತಿಳಿಸಿದರಲ್ಲದೆ ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಬೋರನಕಣಿವೆ ಜಲಾಶಯದಿಂದ ಶುದ್ಧ ಕುಡಿಯುವ ನೀರು ಸರಬರಾಜುವಿಗೆ ವ್ಯವಸ್ಥೆ, ಪೈಪ್ ಲೈನ್ ದುರಸ್ಥಿ, ಅಗತ್ಯಗಳೆಡೆ ಸಿಸ್ಟ್ರನ್ ಅಳವಡಿಸುವುದು ಹಾಗೂ ನಿಷ್ಕ್ರೀಯವಾಗಿರುವ ಕೊಳವೆ ಬಾವಿಗೆ ಮೋಟರ್ ಅಳಡಿಸಲು ಉದ್ದೇಶಿಸಲಾಗಿದ್ದು ಈ ಬಗ್ಗೆ ಶೀಘ್ರದಲ್ಲಿಯೇ ವರದಿ ಸಿದ್ಧಪಡಿಸುವಂತೆ ಸೂಚಿಸಿದರು.
ಜನರಲ್ ಲೈಸೆನ್ಸ್ ಹೆಸರಿನಲ್ಲಿ ಸಣ್ಣಪುಟ್ಟ ಅಂಗಡಿಗಳಿಗೂ ಬೇಕಾಬಿಟ್ಟಿ ಕರ ವಸೂಲಿ ಮಾಡುತ್ತಿದ್ದಾರೆ ಎಂಬ ಆಕ್ಷೇಪ ಕೇಳಿ ಬಂದ ಹಿನ್ನಲೆಯಲ್ಲಿ 2005-06 ನೇ ಸಾಲಿನಿಂದ 2009-10 ನೇ ಸಾಲಿನವರೆವಿಗೆ ವಸೂಲಿಯಾಗಿರುವ ಕರದ ಸಂಪೂರ್ಣ ಮಾಹಿತಿ ನೀಡುವಂತೆ ತಿಳಿಸಿದರು. ಜನರಲ್ ಲೈಸೆನ್ಸ್ ಪಡೆಯಲು ನಿಗದಿಮಾಡಿರುವ ಮಾನದಂಡದ ವಿವರ ಕೋರಿದ ಅವರು ಈ ಬಗ್ಗೆ ಮಾಡಿರುವ ಸಭಾ ಸಭಾನಡಾವಳಿಕೆಗಳೇನು ಎಂದು ಪ್ರಶ್ನಿಸಿದರು.
ಪಟ್ಟಣದ ಸಮಸ್ಯೆ ಬಗ್ಗೆ ಗಮನ ಹರಿಸುವಂತೆ ಕಾರ್ಯದರ್ಶಿಗೆ ಸೂಚಿಸಿದ ಅವರು ಬೆಳಿಗ್ಗೆ 5-30 ರಿಂದಲೇ ಗ್ರಾಮ ಸ್ವಚ್ಚತಾ ಕಾರ್ಯ ಆರಂಭಿಸಬೇಕು ಹಾಗೂ ಗ್ರಾಮ ನೈರ್ಮಲ್ಯದ ಬಗ್ಗೆ ಆಗಿಂದಾಗೆ ಪರಿಶೀಲಿಸುತ್ತಿರಬೇಕು ಎಂದು ಹೇಳಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ