

ಹುಳಿಯಾರು ಎಂಪಿಎಸ್ ಮೈದಾನದಲ್ಲಿ ಭಾನುವಾರ ರಾತ್ರಿ ರೈತ ಸಂಘ, ಹಸಿರು ಸೇನೆ, ಪತ್ರಿಕಾ ವರದಿಗಾರರು ಹಾಗೂ ಏಜೆಂಟರ ಸಂಘ, ಸಿಬಿಎಸ್ ಅಭಿಮಾನಿಗಳ ಸಂಘ, ಕೆಂಕೆರೆ ಬಸವ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಚಿತ್ರದುರ್ಗ ಶ್ರೀಮುರುಘಾಮಠದ ಜಮುರಾ ಕಲಾ ಲೋಕದ ಹೂಗನಸು ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
1962 ರಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಪರಕೀಯರ ಕಾಲ್ತುಳಿತಕ್ಕೆ ಸಿಕ್ಕಿ ನಲುಗುತ್ತಿದ್ದ ಸಂದರ್ಭದಲ್ಲಿ ಹುಳಿಯಾರಿನಲ್ಲಿ ಕನ್ನಡ ಸಂಘ ಸ್ಥಾಪಿಸಿ ರಾಜ್ಯದ ಮೂಲೆ ಮೂಲೆಗಳಲ್ಲಿ ಪೌರಾಣಿಕ, ಸಾಮಾಜಿಕ, ಚಾರಿತ್ರಿಕ ನಾಟಕಗಳನ್ನು ಪ್ರದರ್ಶಿಸಿ ಕನ್ನಡಿಗರಿಗೆ ಕನ್ನಡದ ಕಿಚ್ಚು ಹಚ್ಚುಲಾಗುತ್ತಿತ್ತು ಎಂದು ಹಿಂದಿನ ಸಾಧನೆಗಳನ್ನು ಮೆಲುಕು ಹಾಕಿ ನಾಟಕಗಳು ಸಮಾಜದ ಅಂಕು ಡೊಂಕುಗಳನ್ನು ತಿದ್ದಬಹುದಾಗಿದ್ದು ಯುವ ಜನತೆ ನಾಟಕಗಳನ್ನು ಸ್ವತಃ ಅಭಿನಯಿಸುವ, ನೋಡುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದರು.

ಕೆನರಾಬ್ಯಾಂಕ್ ಮ್ಯಾನೇಜರ್ ಸತೀಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ನರಸಿಂಹಮೂರ್ತಿ, ರಂಗಕಲಾವಿದ ಶ್ಯಾನಬೋಗ್ ರಾಜಣ್ಣ, ಕೆಂಕೆರೆ ಸತೀಶ್, ಸೈಯದ್ ಜಲಾಲ್, ಶ್ರೀಮತಿ ಚಂದ್ರಕಲಾ ಸತೀಶ್, ಕೆ.ಪಿ.ಮಲ್ಲೇಶ್, ಡಿ.ಆರ್.ನರೇಂದ್ರಬಾಬು, ರಂಗನಕೆರೆ ಮಹೇಶ್ ಮತ್ತಿತರರು ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಶ್ರೀ ದೇವಿ ಭವನ್ ಮಾಲೀಕ ಬೋಜರಾಜ್ ಅವರನ್ನು ಕಾಯಕ ರತ್ನ ಪ್ರಶಸ್ತಿಯೊಂದಿಗೆ ಗೌರವಿಸಲಾಯಿತು. ಗಾಣಧಾಳು ವೀರಭದ್ರಪ್ಪ ಅವರು ಸನ್ಮಾನಿತರ ಪರಿಚಯ ಮಾಡಿದರು. ಪತ್ರಕರ್ತ ಎಚ್.ಬಿ.ಕಿರಣ್ ಕುಮಾರ್ ಅವರು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ