ಹುಳಿಯಾರು ಶ್ರೀ ದುರ್ಗಾಪರಮೇಶ್ವರಿಯ 40 ನೇ ವರ್ಷದ ರಥೋತ್ಸವಕ್ಕೆ ಚಾಲನೆ
ಹುಳಿಯಾರು ಗ್ರಾಮ ದೇವತೆ ಶ್ರೀ ದುರ್ಗಾಪರಮೇಶ್ವರಿ ದೇವಿಯವರ 40 ನೇ ವರ್ಷದ ರಥೋತ್ಸವಕ್ಕೆ ಕೋಡಿಪಾಳ್ಯ ,ಲಿಂಗಪ್ಪನಪಾಳ್ಯ,ಕಾಮಶೆಟ್ಟಿಪಾಳ್ಯ ಮತ್ತು ಸೋಮಜ್ಜನಪಾಳ್ಯ ಗ್ರಾಮಸ್ಥರು ಶ್ರೀಅಮ್ಮನವರಿಗೆ ಮಡ್ಲಕ್ಕಿ ಸೇವೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.ಏಪ್ರಿಲ್ ೧೧ ರವರೆಗಿನ ಕಾರ್ಯಕ್ರಮಗಳು ಇಂತಿದೆ. ಏ.5 ರಂದು ಎಡೆ ಸೇವೆ, ಧ್ವಜಾರೋಹಣ ಮತ್ತು ಅಂಕುರಾರ್ಪಣೆ, ಏ.6 ರಂದು ಆರತಿ ಬಾನ, ಎಡೆ ಸೇವೆ, ಏ.7 ರಂದು ರಾತ್ರಿ ಶ್ರೀಹುಳಿಯಾರಮ್ಮನವರು, ಶ್ರೀಕೆಂಚಮ್ಮನವರು, ಹೊಸಹಳ್ಳಿ ಮತ್ತು ತಿರುಮಲಾಪುರದ ಶ್ರೀಕೊಲ್ಲಾಪುರದಮ್ಮನವರು ಹಾಗೂ ಗೌಡಗೆರೆ ಶ್ರೀದುರ್ಗಮ್ಮನವರ ಭೇಟಿ ನಂತರ ಹುಳಿಯಾರು ಕೆರೆಗೆ ದಯಮಾಡಿಸುವುದು. ಏ.8 ರಂದು ಬೆಳಗಿನಜಾವ ಕಳಸ ಸ್ಥಾಪನೆ, ಫಲಹಾರಸೇವೆ, ನಂತರ ಆರೀ ಅಮ್ಮನವರು ಕಳಸ ಸಮೇತ ಮೂಲಸ್ಥಾನಕ್ಕೆ ದಯಮಾಡಿಸುವುದು. ರಾತ್ರಿ ಶ್ರೀಅಮ್ಮನವರ ಉಯ್ಯಾಲೆ ಉತ್ಸವ. ಏ.9 ರಂದು ಮಧ್ಯಾಹ್ನ ಬ್ರಹ್ಮ ರಥೋತ್ಸವ ನಂತರ ವಸಂತ. ಏ.10 ರಂದು ಬೆಳಿಗ್ಗೆ ಸಿಡಿ, ಓಕಳಿ ಸೇವೆ, ಕಂಕಣ ವಿಸರ್ಜನೆ ನಂತರ ಮಡಲಕ್ಕಿ ಸೇವೆ. ಏ.11 ರಂದು ಗ್ರಾಮಸ್ಥರು ಮತ್ತು ಭಕ್ತಾಧಿಗಳಿಂದ ಮಡಲಕ್ಕಿ ಸೇವೆ ಸ್ವೀಕರಿಸುವ ಮೂಲಕ 9 ದಿನಗಳ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ. ಬ್ರಹ್ಮ ರಥೋತ್ಸವದಂದು ಮಧ್ಯಾಹ್ನ ಅನ್ನಸಂತರ್ಪಣೆ ರಾತ್ರಿ ಶ್ರೀದೇವಿ ಮಹತ್ಮೆ ಯಕ್ಷಗಾನ ನಾಟಕವಿದ್ದು ಎಲ್ಲಾ ಕಾರ್ಯಕ್ರಮಗಳಿಗೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಶ್ರೀ ಅಮ್ಮನವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನ ಸಮಿತಿಯವರು ಕೋರಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ