ಮೊದ ಮೊದಲು ಮದುವೆಗಳು ಟೆಸ್ಟ್ ಮ್ಯಾಚ್ ರೀತಿ ಐದು ದಿನಗಳು ನಡೆಯುತ್ತಿದ್ದವು. ನಂತರ ಒನ್ ಡೇ ಮ್ಯಾಚ್ ರೀತಿ ಒಂದೇ ದಿನಕ್ಕೆ ಮುಗಿಸುವಂತಾಯಿತು. ಈಗ ಟ್ವೆಂಟಿ-20 ಮ್ಯಾಚ್ಗಳ ರೀತಿ ಮೂರ್ನಾಲ್ಕು ಗಂಟೆಗೆ ಸೀಮಿತವಾಗುತ್ತಿದ್ದು ವಸ್ತುಗಳ ಬೆಲೆ ಗಗನಕ್ಕೇರುತ್ತಿರುವ ಈ ಕಾಲದಲ್ಲಿ ಅನಗತ್ಯ ದುಂದುವೆಚ್ಚ ಆಗುವುದನ್ನು ತಡೆಯುವ ನಿಟ್ಟಿನಲ್ಲಿ ಇದು ಸ್ವಾಗತಾರ್ಹ ಬೆಳವಣಿಗೆ ಎಂದು ಕುಪ್ಪೂರು-ತಮ್ಮಡಿಹಳ್ಳಿ ವಿರಕ್ತ ಮಠಾಧ್ಯಕ್ಷ ಡಾ.ಅಭಿನವ ಮಲ್ಲಿಕಾರ್ಜುನ ದೇಶೀಕೇಂದ್ರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಹುಳಿಯಾರು ಸಮೀಪದ ಬೊಮ್ಮೇನಹಳ್ಳಿಯಲ್ಲಿ ಸುವರ್ಣಮುಖಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ರೈತ ಸಂಘದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಗ್ರಾಮೀಣ ಸಿದ್ಧರಾಮ ಸ್ಮರಣೋತ್ಸವ ಹಾಗೂ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಆಶೀರ್ವಚನ ನೀಡಿದ ಅವರು ಮದುವೆಗಳಿಗೆ ಆಡಂಭರ ಮುಖ್ಯವಲ್ಲ ಸತಿಪತಿಗಳ ಮನಸ್ಸುಗಳು ಪರಸ್ಪರ ಅರ್ಥಮಾಡಿಕೊಳ್ಳುವುದು ಮುಖ್ಯ ಎಂದರು.
ವ್ಯರ್ಥವಾಗಿ ಬದುಕು ಸವೆಸಿ ಮಣ್ಣಾಗುವ ಬದಲು ಸಾರ್ಥಕ ಜೀವನ ನಡೆಸಿ ಆದರ್ಶ ಬದುಕು ಬಾಳಿದಾಗ ಮಾತ್ರ ಮಾನವನಾಗಿ ಜನ್ಮ ಪಡೆದದಕ್ಕೂ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಬಸವಣ್ಣ, ಸಿದ್ಧಗಂಗಾಶ್ರೀ ಹಾಗೂ ಮದರ್ ತೆರೆಸ ಜೀವನ ಆದರ್ಶವಾಗಲಿ ಎಂದು ಕಿವಿಮಾತು ಹೇಳಿದರು.
ರೈತರ ಸೌಲಭ್ಯ ಕಡಿತಗೊಳ್ಳಿಸಬೇಡಿ: ಯಳನಡು-ಅರಸೀಕೆರೆ ಮಹಾಸಂಸ್ಥಾನದ ಶ್ರೀ ಜ್ಞಾನಪ್ರಭು ಸಿದ್ಧರಾಮ ದೇಶೀಕೇಂದ್ರ ಮಹಾಸ್ವಾಮಿ ತಮ್ಮ ಆಶೀರ್ವಚನದಲ್ಲಿ ರೈತ ಕೇವಲ ಒಂದೇ ಒಂದು ತಿಂಗಳು ಕೃಷಿ ಚಟುವಟಿಕೆಯಲ್ಲಿ ತೊಡಗದೆ ಕೈ ಕಟ್ಟಿ ಕುಳಿತಾದಲ್ಲಿ ಪಡಿತರ ಬೆಲೆಗಳು ಗಗನಕ್ಕೇರಿ ದೇಶದ ಜನಜೀವನವೇ ಅಸ್ಥವ್ಯಸ್ಥವಾಗುತ್ತವೆ. ಹಾಗಾಗಿ ಕೇವಲ ಕಷ್ಟಗಳನ್ನೇ ನುಂಗಿಕೊಂಡು ಅನ್ನ ಬೆಳೆಯುವ ರೈತರಿಗೆ ಸರ್ಕಾರ ನೀಡುವ ಯಾವುದೇ ಸೌಲಭ್ಯಗಳನ್ನು ಕಡಿತಗೊಳಿಸಬಾರದು ಎಂದರು.
ಅಧಿಕಮಾಸದಲ್ಲಿ ಮದುವೆ ಮಾಡುವುದು ಒಳ್ಳೆಯದಲ್ಲ ಎಂಬ ಮೂಡನಂಬಿಕೆಯನ್ನು ಬದಿಗಿಟ್ಟು ಉಚಿತ ಸರಳ ವಿವಾಹ ಮಾಡುವ ಮೂಲಕ ಸಂಘಟಕರು ಬಸವಣ್ಣನವರ ತತ್ವಗಳನ್ನು ಪ್ರತಿಪಾದಿಸ ಹೊರಟಿರುವುದು ಶ್ಲಾಘನೀಯ ಸಂಗತಿಯಾಗಿದ್ದು ಒಂದೇ ವೇದಿಕೆಯಲ್ಲಿ ಹತ್ತಿಪ್ಪತ್ತು ಮದುವೆಗಳನ್ನು ಮಾಡುವ ಕಾರ್ಯ ಕೇವಲ ಒಬ್ಬರಿಂದ ಸಾಧ್ಯವಾಗದು ಹಾಗಾಗಿ ಹಣ್ಣ ಉಳ್ಳವರು ಇಂತಹ ಕಾರ್ಯಗಳಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಮಕ್ಕಳನ್ನು ಸತ್ಪ್ರಜೆಯನ್ನಾಗಿ ಮಾಡಿ: ಕುಪ್ಪೂರು ಕ್ಷೇತ್ರದ ಗದ್ದಿಗೆ ಮಠದ ಶ್ರೀ ಯತೀಶ್ವರ ಶಿವಾಚಾರ್ಯ ಮಹಾಸ್ವಾಮಿ ಅವರು ತಮ್ಮ ಆಶೀರ್ವಚನದಲ್ಲಿ ಸತಿ ಪತಿಗಳು ನೋವು ನಲಿವುಗಳನ್ನು ಸಮಾನವಾಗಿ ಸ್ವೀಕರಿಸಿ, ಮೇಲು-ಕೀಳು ಎಂಬ ಬೇದಬಾವ ಬಿಟ್ಟು ಒಬ್ಬರಿಗೊಬ್ಬರು ನೆರವಾಗಿ ಸಂಸಾರದ ಬಂಡಿ ಸಾಗಿಸಿದಾಗ ಮಾತ್ರ ಯಶಸ್ವಿ ಜೀವನ ನಡೆಸಬಹುದಾಗಿದ್ದು ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಕಷ್ಟ ಎಂದು ಕೈಕಟ್ಟಿ ಕೂರದೆ ಸವಾಲಾಗಿ ಸ್ವೀಕರಿಸಿ ಎದುರಿಸಲು ಮುಂದಾದಾಗ ಮಾತ್ರ ಮಂಜಿನಂತೆ ಕರಗುತ್ತವೆ ಎಂದು ತಿಳಿಸಿದರು.
ಮಕ್ಕಳನ್ನು ಹುಟ್ಟಿಸುವುದು ಮುಖ್ಯವಲ್ಲ ಅವರಲ್ಲಿ ಮನವೀಯ ಮೌಲ್ಯಗಳನ್ನು ತುಂಬಿ ಒಳ್ಳೆಯ ನಡೆ-ನುಡಿಗಳನ್ನು ಕಲಿಸಿ ಬೆಳೆಸಿ ಸತ್ಪ್ರಜೆಯನ್ನಾಗಿ ಮಾಡಿದಾಗ ಮಾತ್ರ ತಂದೆ-ತಾಯಿಯರ ಕರ್ತವ್ಯ ಸಾರ್ಥಕವಾಗಿ ನಿರ್ವಹಿಸಿದಂತ್ತಾಗುತ್ತದೆ. ಈ ನಿಟ್ಟಿನಲ್ಲಿ ನೂತನ ವಧು-ವರರು ಮದುವೆಯ ದಿನವೇ ಮಕ್ಕಳನ್ನು ಸತ್ಪ್ರಜೆಯನ್ನಾಗಿ ಬೆಳೆಸುವ ಸಂಕಲ್ಪ ಮಾಡಬೇಕು ಎಂದು ಸಲಹೆ ನೀಡಿದರು.
ಗೋಡೇಕೆರೆ ಸುಕ್ಷೇತ್ರದ ಚರಪಟ್ಟಾಧ್ಯಕ್ಷ ಶ್ರೀ ಮೃತ್ಯುಂಜಯ ದೇಶೀಕೇಂದ್ರ ಮಹಾಸ್ವಾಮಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಉದ್ಘಾಟಿಸಿದರು. ಶಾಸಕ ಸಿ.ಬಿ.ಸುರೇಶ್ ಬಾಬು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ತಾ.ಪಂ.ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಬಿಜೆಪಿ ಮುಖಂಡ ಮೈಸೂರಪ್ಪ, ರಾಜ್ಯ ಹಸಿರು ಸೇನೆ ಸಂಚಾಲಕ ಕೆಂಕೆರೆ ಸತೀಶ್, ತಾ.ಪಂ.ಸದಸ್ಯ ಶಿವಕುಮಾರ್, ತರೀಕೆರೆ ಎಪಿಎಂಸಿ ಅಧ್ಯಕ್ಷ ಅಸುಂಡ್ಡಿ ಬಸವರಾಜು, ಸಿಪಿಐ ರವಿಪ್ರಸಾದ್, ಪಿಎಸ್ಐ ಪಾರ್ವತಮ್ಮಯಾದವ್, ಲಕ್ಷ್ಮೀಪತಿ, ಬಸವರಾಜ್ ಪಂಡಿತ್ ಮತ್ತಿತರರು ವೇಧಿಕೆಯಲ್ಲಿ ಉಪಸ್ಥಿತರಿದ್ದರು.
ಸುವರ್ಣಮುಖಿ ಸಂಸ್ಥೆಯ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ