
ಹೊಸದುರ್ಗ ಸಮೀಪದ ಕೆಲ್ಲೋಡುವಿನ ನೇತ್ರಾವತಿ ನದಿ ನಾಲೆಯ ದಂಡೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಕನಕಪೀಠದಲ್ಲಿ ಕನಕದಾಸರ ಬೃಹತ್ ವಿಗ್ರಹ ಸ್ಥಾಪಿಸುವ ಸಲುವಾಗಿ ದೊಡ್ಡಬಳ್ಳಾಪುರದ ದೇವನಹಳ್ಳಿ ಬಂಡೆಯಿಂದ ಸಾಗಿಸುತ್ತಿರುವ ಏಕಶಿಲೆ ಹೊತ್ತ ವಾಹನವು ಮಾರ್ಗಮಧ್ಯೆ ಹುಳಿಯಾರಿಗೆ ಆಗಮಿಸಿದಾಗ ಕುರುಬರ ಸಂಘದ ಪ್ರತಿನಿಧಿಗಳು ಹಾಗೂ ನಾಗರೀಕರು ಕಂಸಾಳೆ, ನಗಾರಿ, ಡೊಳ್ಳು ವಾಧ್ಯದೊಂದಿಗೆ ಭವ್ಯವಾಗಿ ಸ್ವಾಗತಿಸಲಾಯಿತು.
380 ಟನ್ ತೂಕದ, 40 ಅಡಿ ಉದ್ದದ ಹಾಗೂ 8 ಅಡಿ ದಪ್ಪದಾದ 150 ಕ್ಕೂ ಹೆಚ್ಚು ಚಕ್ರವುಳ್ಳ ಭಾರಿ ವಾಹನದಲ್ಲಿ ಸಾಗಿಬಂದ ಏಕಶಿಲೆಯನ್ನು ಇಲ್ಲಿನ ಎಪಿಎಂಸಿ ಬಳಿ ಹೋಬಳಿ ಕುರುಬರ ಸಂಘದ ಬಸವಲಿಂಗೇಗೌಡ, ಕಾಯಿ ಕುಮಾರ್, ಲಿಂಗರಾಜು, ದಯಾನಂದ್, ಗೋವಿಂದಪ್ಪ, ರಾಮಯ್ಯ, ತಿಮ್ಮಯ್ಯ ಅವರುಗಳು ಪೂಜೆ ಸಲ್ಲಿಸಿ ಸ್ವಾಗತಿಸಿದರು.



ನೂರಕ್ಕೂ ಹೆಚ್ಚು ಬೈಕ್ ಗಳಲ್ಲಿ ರ್ಯಾಲಿ ನಡೆಸಿ ಜಯಘೋಷ, ಪಠಾಕಿ, ಅದ್ದೂರಿ ಮೆರವಣಿಗೆ ನಡೆಸಿ ಆತ್ಮೀಯತೆಯಿಂದ ಬೀಳ್ಕೊಟ್ಟರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ