

ಬೇಸಿಗೆಯ ಸುಡುಬಿಸಿಲನ್ನು ಲೆಕ್ಕಿಸದೆ ಮುಂಜಾನೆಯಿಂದಲೇ ಕಿಕ್ಕಿರಿದು ನೆರದಿದ್ದ ಭಕ್ತಾಧಿಗಳು ಜಯಘೋಷದೊಂದಿಗೆ ತೇರನ್ನೆಳದು ಸಂಭ್ರಮಿಸಿದರು. ಮಂಗಳವಾಧ್ಯದೊಂದಿಗೆ ಸಾಗಿಬಂದ ರಥಕ್ಕೆ ಬಾಳೆಹಣ್ಣು,ಧವನ ತೂರುವ ಮೂಲಕ ಭಕ್ತರು ತಮ್ಮ ಭಕ್ತಿಯನ್ನು ಹಾಗೂ ಹರಕೆಯನ್ನು ಸಮರ್ಪಿಸಿದರು.ನಂತರ ನೆರದಿದ್ದ ಭಕ್ತಾಧಿಗಳು ಹಾಗೂ ಹೆಣ್ಣುಮಕ್ಕಳು ಹಣ್ಣು ಕಾಯಿ ಮಾಡಿಸಿ ತಮ್ಮ ಇಷ್ಟ ದೈವವನ್ನು ಕಣ್ಣಿಗೆ ತುಂಬಿಕೊಂಡರು.ರಥೋತ್ಸವದ ಅಂಗವಾಗಿ ಪಾನಕ,ಕೋಸುಂಬರಿ ವಿತರಿಸಲಾಯಿತು.ಬೆಂಗಳೂರು ಕಾಡಿಗಾನಹಳ್ಳಿಯ ಸುಬ್ರಹ್ಮಣ್ಯ ಅವರಿಂದ ಭಕ್ತಾಧಿಗಳಿಗೆ ಹಾಗೂ ವಿಪ್ರಸಂಘದಿಂದ ಬ್ರಾಹ್ಮಣರಿಗೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ