ಹುಳಿಯಾರಿನಲ್ಲಿ 20 ಲಕ್ಷರೂಗಳ ಅಂದಾಜು ವೆಚ್ಚದ ಸುಸಜ್ಜಿತ ಬಸ್ ಶೆಲ್ಟರ್ ನಿರ್ಮಾಣಕ್ಕೆ ಶಾಸಕ ಸಿ.ಬಿ.ಸುರೇಶ್ ಬಾಬು ಸೋಮವಾರದಂದು ಗುದ್ದಲಿ ಪೂಜೆ ನೆರವೇರಿಸಿದರು.
ಹುಳಿಯಾರಿಗೊಂದು ಮಾದರಿ ಬಸ್ ಶೆಲ್ಟರ್ ನಿರ್ಮಿಸಹೊರಟಿರುವ ತಮ್ಮ ಉದ್ದೇಶದ ಬಗ್ಗೆ ಮಾತನಾಡಿದ ಶಾಸಕ ಸಿ.ಬಿ.ಸುರೇಶ್ ಬಾಬು ಹುಳಿಯಾರು ಜಿಲ್ಲೆಯಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದ್ದು ನೂರಾರು ಬಸ್ ಗಳು ಪ್ರತಿದಿನ ಬಂದುಹೋಗುತ್ತಿದ್ದು ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ಸೂಕ್ತ ತಂಗುದಾಣ ಇಲ್ಲದೆ ಜನತೆ ಬಿಸಿಲು-ಮಳೆಗೆ ತೊಂದರೆಗೀಡಾಗುತ್ತಿರುವುದನ್ನು ಮನಗಂಡು ಪ್ರಯಾಣಿಕರಿಗೆ ಹೆಚ್ಚಿನ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ಶಾಸಕರ ನಿಧಿಯಲ್ಲಿ ಸುಮಾರು 20 ಲಕ್ಷ ರು. ವೆಚ್ಚದಲ್ಲಿ ಚಿ.ನಾ.ಹಳ್ಳಿಯಲ್ಲಿನ ಮಾದರಿಯಂತೆ ನಿರ್ಮಿಸಲು ನೀಲನಕ್ಷೆ ಸಿದ್ಧಪಡಿಸಲಾಗಿದೆ ಎಂದರು.ಸಧ್ಯ 5 ಲಕ್ಷ ರೂ ಹಣ ಬಿಡುಗಡೆಮಾಡಲಾಗಿದ್ದು ನಾಳಿಯಿಂದಲೆ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ವಿವರಿಸಿದರು.
ಆತಂಕ ಬೇಡ: ನೂತನ ಬಸ್ ಶೆಲ್ಟರ್ ನಿರ್ಮಾಣ ಪ್ರಾರಂಭವಾಗುವುದರಿಂದ ಫುಟ್ ಪಾತ್ ವ್ಯಾಪಾರಿಗಳ ಅಂಗಡಿಗಳು ಸ್ಥಳಾಂತರ ಅನಿವಾರ್ಯವಾಗಿದ್ದು ಅಂಗಡಿದಾರರು ಆತಂಕಪಡುವ ಅವಶ್ಯಕತೆಯಿಲ್ಲ ಎಂದರು.ಬಸ್ ನಿಲ್ದಾಣದ ಫುಟ್ಪಾತ್ ನಲ್ಲಿ ದಶಕಗಳ ಕಾಲದಿಂದಲೂ ಪೆಟ್ಟಿಗೆ ಅಂಗಡಿ ವ್ಯಾಪಾರವನ್ನೇ ಆಶ್ರಯಿಸಿರುವ ಅಂಗಡಿದಾರರಿಗೆ ಬದಲಿ ವ್ಯವಸ್ಥೆ ಕಲ್ಪಸಲಾಗುವುದೆಂದ ಅವರು ಪ್ರಾರಂಭಿಕ ಹಂತದಲ್ಲಿ ಪಿಲ್ಲರ್ ಗಳನ್ನು ರ್ನಿರ್ಮಾಣ ಮಾಡುವುದಿದ್ದು ಇದರಿಂದ ಇಲ್ಲಿನ ವ್ಯಾಪಾರಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ನಂತರ ಸಣ್ಣ ನೀರಾವರಿ ಇಲಾಖೆ ಸಮ್ಮತಿ ಪಡೆದು ಅಂಗಡಿದಾರರೊಂದಿಗೆ ಚರ್ಚಿಸಿ ಇಲ್ಲಿನ ಕೆರೆ ದಡದಲ್ಲಿ ಇದೇ ಉದ್ದೇಶಕ್ಕೆ ಮೀಸಲಾಗಿಟ್ಟಿರುವ ಜಾಗದಲ್ಲಿ ಅಂಗಡಿಗಳನ್ನು ಇಟ್ಟುಕೊಳ್ಳಲು ಬದಲಿ ವ್ಯವಸ್ಥೆಯನ್ನು ಮಾಡುವದರ ಮೂಲಕ ಅನುಕೂಲ ಕಲ್ಪಿಸಿಕೊಡಲಾಗುವುದೆಂದರು.
ಹುಳಿಯಾರು ಗ್ರಾಮಪಂಚಾಯ್ತಿ ಶೀಘ್ರ ಪಟ್ಟಣ ಪಂಚಾಯ್ತಿಯಾಗಿ ಮೇಲ್ಧರ್ಜೆಗೇರಲಿದೆ ಎಂದ ಅವರು ರಾಜ್ಯದಲ್ಲಿ 2011 ರ ಜನಗಣತಿಯ ಕಾರ್ಯವು ಪ್ರಗತಿಯಲ್ಲಿರುವುದರಿಂದ 31 ಮಾರ್ಚ್ 2011 ರವರೆವಿಗೆ ಯಾವುದೇ ಪ್ರದೇಶವನ್ನು ಮೇಲ್ದರ್ಜೆಗೇರಿಸದಂತೆ ನಿರ್ಭಂದಿಸಲಾಗಿರುವುದರಿಂದ ಸದ್ಯ ಗ್ರಾಪಂ ಆಗೇ ಮುಂದುವರಿಯಲಿದೆ ಎಂದರು.
ಜಿ.ಪಂ.ಸದಸ್ಯ ಹೊನ್ನಪ್ಪ,ಹೊಯ್ಸಳಕಟ್ಟೆ ತಾ.ಪಂ.ಸದಸ್ಯ ರುದ್ರೇಶ್, ಇಂಜಿನಿಯರ್ ಶಿವಾನಂದ್, ಬಸ್ ಏಜೆಂಟರ ಸಂಘದ ಎಂ.ವಿ.ಲೋಕೇಶ್,ಹು.ಕೃ.ವಿಶ್ವನಾಥ್,ಏಜಂಟ್ ರಾಜಣ್ಣ,ಹಸಿರುಸೇನೆ ರಾಜ್ಯ ಸಂಚಾಲಕ ಕೆಂಕೆರೆ ಸತೀಶ್, ಜೆಡಿಸ್ ಮುಖಂಡರಾದ ಸೈಯದ್ ಜಲಾಲ್, ನಂದಿಹಳ್ಳಿ ಶಿವಣ್ಣ, ಪ್ರಸನ್ನ, ಹೂವಿನ ಬಸವರಾಜು, ಅಹಮದ್ ಖಾನ್, ದೇವರಾಜ್ ಗೌಡ, ಪುಟ್ಟಿಭಾಯಿ ನಾಗರಾಜ,ಪಾಳ್ಯ ಬೀರಪ್ಪ ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ