20 ವರ್ಷಗಳ ನಂತರ ಮೈಲಾರಪುರದ ಏಳುಕೋಟಿ ಮೈಲಾರಲಿಂಗನ ಬ್ರಹ್ಮರಥೋತ್ಸವ.
------------------------------------------
ಹರಿದು ಬಂತು ಭಕ್ತ ಸಾಗರ
-------------------
ಹೊಸದುರ್ಗ ತಾಲೂಕಿನ ಶ್ರೀರಾಂಪುರ ಹೋಬಳಿ ಮೈಲಾರಪುರದ ಬೆಟ್ಟದಲ್ಲಿ ತಪ್ಪಲಿನಲ್ಲಿ ಏಳುಕೋಟಿ ಮೈಲಾರಲಿಂಗನ ಬ್ರಹ್ಮರಥೋತ್ಸವ ಶನಿವಾರದಂದು ಸಹಸ್ರಾರು ಭಕ್ತಾಧಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.19 ವರ್ಷಗಳ ನಂತರ ನಡೆಯುತ್ತಿರುವ ಬ್ರಹ್ಮರಥೋತ್ಸವವಾದ್ದರಿಂದ ಉರಿವ ಬಿಸಿಲನ್ನು ಲೆಕ್ಕಿಸದೆ ಹರಿದು ಬಂದ ಸಹಸ್ತ್ರಾರು ಸಂಖ್ಯೆಯ ಭಕ್ತ ಸಾಗರದಿಂದ ಏಳುಕೋಟಿ,ಏಳುಕೋಟಿ ಎಂಬ ಉದ್ಘೋಷ ಮುಗಿಲು ಮುಟ್ಟಿತು.
ರಥೋತ್ಸವದ ಅಂಗವಾಗಿ ಮುಂಜಾನೆಯಿಂದಲೇ ಆಗಮಿಕರ ಉಪಸ್ಥಿತಿಯಲ್ಲಿ ದಾರ್ಮಿಕ ವಿಧಿವಿಧಾನಗಳು ಪ್ರಾರಂಭಗೊಂಡಿತು. ನೂಥನವಾಗಿ ಸಮರ್ಪಣೆಗೊಂಡಿದ್ದ ರಥಕ್ಕೆ ರಥಾದಿ ದೇವತಾ ಹೋಮ,ರಥ ಸಂಪ್ರೋಕ್ಷಣೆ, ನಿತ್ಯ ಹೋಮ, ಬಲಿ ಪ್ರಧಾನ, ಕೃಷ್ಣಗಂಧೋತ್ಸವ ಮುಂತಾದ ಧಾರ್ಮಿಕ ಕೈಂಕರ್ಯಗಳು ನಡೆಯಿತು.ಬೆಟ್ಟದ ಮೇಲಿನ ಮೂಲ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಕುರುಬರಳ್ಳಿ ಶ್ರೀ ಕಪ್ಪಕರಿಯಮ್ಮದೇವಿ,ಸೂಜಿಕಲ್ಲು ಶ್ರೀ ಕೆಂಚಾಬಿಕೆ ದೇವಿ, ಮೈಲಾರಪುರದ ದೊಡ್ಡಬಿಲ್ಲು ಶ್ರೀ ಚೌಡಮ್ಮದೇವಿ ಉಪಸ್ಥಿತಿಯಲ್ಲಿ ರಥಕ್ಕೆ ಕಳಸ ಸ್ಥಾಪಿಸಲಾಯಿತು. ರಂಗು ರಂಗಿನ ಬಾವುಟಗಳು, ಎಳನೀರು ಗೊನೆಗಳು ಹಾಗೂ ಹೂವಿನ ಹಾರಗಳಿಂದ ಅಲಂಕಾರದೊಂದಿಗೆ ಸಿಂಗಾರಗೊಂಡಿದ್ದ ಹೊಚ್ಚ ಹೊಸ ರಥದಲ್ಲಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಮಂಗಳ ವಾದ್ಯ,ಸಹಸ್ರಾರು ಭಕ್ಥಾಧಿಗಳ ಜಯಗೋಷ ಹಾಗೂ ಗೊರವಯ್ಯಗಳ ಡಮರು ನಿನಾದದೊಂದಿಗೆ ಕರೆತರಲಾಯಿತು. ಬ್ರಾಹ್ಮಣ ಸಮೂಹ ಹಾಗೂ ದೇವಸ್ಥಾನ ಸಮಿತಿ ಸದಸ್ಯರು ಪ್ರಥಮ ಪೂಜೆ ಸಲ್ಲಿಸಿದ ನಂತರ ನೆರದಿದ್ದ ಭಕ್ತಸಾಗರ ರಥ ಎಳೆಯುವ ಮೂಲಕ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ಇಷ್ಟದೈವಕ್ಕೆ ಬಾಳೆಹಣ್ಣು ಎಸೆಯುವ ಮೂಲಕ ಭಕ್ತಿಬಾವ ಸಮರ್ಪಿಸಿದರು.

ಮೈಲಾರಪುರದಲ್ಲಿ ನಡೆವ ಬ್ರಹ್ಮರಥೋತ್ಸವ ವಿಶಿಷ್ಠವಾಗಿದ್ದು ಇದು ಕೇವಲ ಬೆಳಿಗ್ಗೆ ಬಂದು ರಥೋತ್ಸವ ನಂತರ ಹಿಂದಿರುಗುವ ಜಾತ್ರೆಯಲ್ಲ, ವಕ್ಕಲುಗಳು ಬಂದು ಬಳಗ ಸಮೇತ ಗುಡಾರ, ಟೆಂಟ್ ನಿರ್ಮಿಸಿಕೊಂಡು ನಾಲ್ಕಾರು ದಿನ ಅಲ್ಲಿಯೇ ಉಳಿದು ಸ್ವಾಮಿಯ ಜಾತ್ರಾ ಕೈಂಕರ್ಯ ಮುಗಿಸಿ ಹೊರಡುವುದು ವಿಶೇಷ. ಈ ಜಾತ್ರೆಗೆ ರಾಜ್ಯ ಹಾಗೂ ಹೊರರಾಜ್ಯದಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ನಂತರ ಹಣ್ಣು ಕಾಯಿ ಮಾಡಿಸಿಕೊಂಡು ವಿವಿಧ ಊರುಗಳ ಭಕ್ತರು ಮಾಡಿಸಿದ್ದ ಪ್ರಸಾದ ಸ್ವೀಕರಿಸಿ ಬ್ರಹ್ಮರಥೋತ್ಸವದ ಚಿತ್ರಣವನ್ನು ಕಣ್ಮನ ತುಂಬಿಕೊಂಡು ಹಿಂದಿರುಗಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ