(ಹುಳಿಯಾರು ಶಂಕರಪುರದಲ್ಲಿ ಹನುಮಜಯಂತಿ ಅಂಗವಾಗಿ ನಡೆದ ರಾಮ ಭಜನೆಯ ಒಂದು ನೋಟ.) (ಹುಳಿಯಾರಿನಲ್ಲಿ ಹನುಮಜಯಂತಿ ಅಂಗವಾಗಿ ಏರ್ಪಡಿಸಿದ್ದ ಶ್ರೀಸ್ವಾಮಿಯವರ ಉತ್ಸವದಲ್ಲಿ ಪಾಲ್ಗೊಂಡ ಶಿವಮೊಗ್ಗ ಜಿಲ್ಲೆ ಹೆಗ್ಗೋಡಿನ ರಾಜ್ಯ ಪ್ರಶಸ್ತಿ ವಿಜೇತ ಮಹಿಳಾ ಡೊಳ್ಳು ಕುಣಿತ ತಂಡ ನೋಡುಗರನ್ನು ಆಕಷಿ೯ಸಿತ್ತು.) (ಹುಳಿಯಾರಿನಲ್ಲಿ ಹನುಮಜಯಂತಿ ಅಂಗವಾಗಿ ಸೋಮವಾರ ರಾತ್ರಿ ನಡೆದ ಶ್ರೀಸ್ವಾಮಿಯವರ ವಿಜೃಂಭಣೆಯಿಂದ ನಡೆದ ರಾಜಬೀದಿ ಉತ್ಸವ ಮಾಡಲಾಯಿತು. ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಟಿ.ಆರ್.ಶ್ರೀನಿವಾಸ ಶ್ರೇಷ್ಠಿ, ಅಧ್ಯಕ್ಷ ಎಸ್ಆರ್ಎಸ್ ದಯಾನಂದ್, ಆರ್.ಮಂಜುನಾಥ್, ಎಚ್.ವಿ.ಧನಂಜಯಮೂತಿ೯, ಟಿ.ಆರ್.ರಂಗನಾಥಶೆಟ್ಟಿ, ಕೆ.ಎಂ.ರಾಮಯ್ಯ, ಮೀಸೆ ರಂಗಪ್ಪ, ಎಂ.ಅಶೋಕ್ ಬಾಬು, ಎಚ್.ಎಸ್.ಪ್ರದೀಪ್, ಡಾಬಾ ಸುರೇಶ್ ಇನ್ನಿತರರಿದ್ದಾರೆ.) ಪಟ್ಟಣದ ವಿವಿಧ ದೇವಾಲಯಗಳಲ್ಲಿ ಇಂದು ಹನುಮ ಜಯಂತಿ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಮಾರುತಿ ನಗರದ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀ ಆಂಜನೇಯಸ್ವಾಮಿ ಜೀಣೋ೯ದ್ಧಾರ ಸಮಿತಿಯಿಂದ ಹನುಮಂತ ದೇವರಿಗೆ ಅಭಿಷೇಕ, ರಾಮಚಂದ್ರ ಭಟ್ಟರ ನೇತೃತ್ವದಲ್ಲಿ ಪವಮಾನ ಹೋಮ, ಪೂ೯ಣಾ೯ಹುತಿ, ಮಹಾಮಂಗಳಾರತಿ ಮುಂತಾದ ಧಾಮಿ೯ಕ ಕಾರ್ಯಕ್ರಮ ನಡೆಸಿ ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು.ನೂರಾರು ಭಕ್ತಾಧಿಗಳು ದೇವಾಲಯಕ್ಕೆ ಭೇಟಿ ನೀಡಿ ಶ್ರೀ ಸ್ವಾಮಿಯವರ ದರ್ಶನ ಪಡೆದು ಧನ್ಯತೆ ಮೆರೆದರು....
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070