ನಡಿಗೆಯಿಂದಷ್ಟೇ ನಾವು ಎಲ್ಲ ವರ್ಗದವರ ಸಂಬಂಧವನ್ನು ಬೆಳೆಸಬಹುದು:ವಾಕ್ ಆಫ್ ಜಾಯ್ ಖ್ಯಾತಿಯ ಬ್ರಿಟನ್ ಪ್ರಜೆ ಡೇವಿಡ್ ಅಥೋವಾ
ಹುಳಿಯಾರು: ವಾಕ್ ಆಫ್ ಜಾಯ್ ಖ್ಯಾತಿಯ ಬ್ರಿಟನ್ ಪ್ರಜೆ ಡೇವಿಡ್ ಅಥೋವಾ ಅವರು ಸೋಮವಾರ ಬೆಳಗ್ಗೆ ಹುಳಿಯಾರಿಗೆ ಆಗಮಿಸಿದ್ದು ಅವರನ್ನು ಕಲ್ಪತರು ಆಗ್ರೋ ಕೇಂದ್ರದ ಬಳಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಚಿಕ್ಕನಾಯಕನಹಳ್ಳಿಯಿಂದ ಬೆಳಗುಲಿ,ಗೂಬೇಹಳ್ಳಿ ಮಾರ್ಗವಾಗಿ ಹುಳಿಯಾರಿಗೆ ಆಗಮಿಸಿದ ಅವರೊಂದಿಗೆ ಪಟ್ಟಣದೆಲ್ಲಡೆ ರೈತ ಸಂಘದ ಪ್ರತಿನಿಧಿಗಳು,ವಿವಿಧ ಸಂಘ ಸಂಸ್ಥೆಯವರು ನಡಿಗೆಯ ಹೆಜ್ಜೆ ಹಾಕಿದರು. ತಾವು ಆರಂಭಿಸಿರುವ ವಾಕ್ ಆಫ್ ಜಾಯ್ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ನಡಿಗೆಯ ಮುಖಾಂತರವೇ ತಾವು ದೇಶ ವಿದೇಶ ಸಂಚರಿಸಿದ್ದು , ನಡಿಗೆಯಿಂದಾಗುವ ಲಾಭ ಹಾಗೂ ಸುಸ್ಥಿರಕೃಷಿ,ಸಿರಿಧಾನ್ಯದ ಬಗ್ಗೆ ತಮ್ಮ ಸಂಚಾರ ಸಮಯದಲ್ಲಿ ಕಂಡುಕೊಂಡ ಅನುಭವದ ಬಗ್ಗೆ ವಿವರಿಸಿದರು. ಆಧುನಿಕ ಸಂಪರ್ಕ ಸಾಧನಗಳಲ್ಲಿ ಇತ್ತೀಚೆಗೆ ಮೊಬೈಲ್ ಎಲ್ಲರಿಗೂ ಸರ್ವಸ್ವವಾಗಿದ್ದು ಅವುಗಳಿಂದ ಎಲ್ಲಾ ವರ್ಗದ ಜನರನ್ನು ತಲುಪಲು ಸಾಧ್ಯವಿಲ್ಲ.ನಾವು ವೇಗವಾದ ಬೆಳವಣಿಗೆಯಿಂದಲೇ ಹಾಳಾಗುತ್ತಿದ್ದು ನಡಿಗೆಯಿಂದಷ್ಟೇ ನಾವು ಎಲ್ಲ ವರ್ಗದವರ ಸಂಬಂಧವನ್ನು ಬೆಳೆಸಬಹುದು ಎಂದು ಅಭಿಪ್ರಾಯಪಟ್ಟರು. ನಡಿಗೆ ನಮಗೆ ಸಮಾಧಾನ,ಸಾವಧಾನ ಕಲಿಸುತ್ತದೆ, ಸಂಬಂಧ ಬೆಳೆಸುತ್ತದೆ.ಸಂಚಾರ ಸಂದರ್ಭದಲ್ಲಿ ನಾನಾ ರೀತಿಯ ಜನಗಳೊಂದಿಗೆ ಬೇರೆಯುವುದ...