ಹುಳಿಯಾರು: ಶಂಕಿತ ಡೆಂಗ್ಯೂ ಜ್ವರದಿಂದ ಮೊನ್ನೆಯಷ್ಟೆ ಚಿಕ್ಕನಾಯಕನಹಳ್ಳಿಯಲ್ಲಿ ಸುಷ್ಮಿತಾ ಸಾವನ್ನಪ್ಪಿರುವ ಘಟನೆ ಇನ್ನು ಹಸಿಯಾಗಿರುವಾಗಲೇ ಮತ್ತದೇ ಜ್ವರದ ಭಾಧೆಯಿಂದ ಹತ್ತನೇ ತರಗತಿಯ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ಗುರುವಾರ ಸಂಜೆ ನಡೆದಿದೆ.
ಸಮೀಪದ ದೊಡ್ಡೇಣ್ಣೇಗೆರೆಯ ನಿವಾಸಿ ಶಿಕ್ಷಕ ವೈ.ನಾಗರಾಜು ಇವರ ಮೂರನೇ ಪುತ್ರ ಒ.ಎನ್.ವಿಶ್ವನಾಥ್ (೧೬)ವರ್ಷ ಶಂಕಿತ ಡೆಂಗ್ಯುಗೆ ಬಲಿಯಾದ ದುರ್ದೈವಿಯಾಗಿದ್ದಾನೆ.
ಕಳೆದ ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಈತನಿಗೆ ಹುಳಿಯಾರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗಿರಲಿಲ್ಲ.ಗುರುವಾರ ಮಧ್ಯಾಹ್ನ ಜ್ವರ ಹೆಚ್ಚಾದ ಕಾರಣ ಆತನನ್ನು ಚಿಕ್ಕನಾಯಕನಹಳ್ಳಿ ಆಸ್ಪತ್ರೆಗೆ ಕರೆತರುವಾಗ ಮಾರ್ಗ ಮಧ್ಯದಲ್ಲಿ ನಿಧನ ಹೊಂದಿದ್ದಾನೆ. ವಿಶ್ವನಾಥ್ ಹುಳಿಯಾರು- ಕೆಂಕೆರೆ ಪ್ರೌಢಶಾಲೆಯಲ್ಲಿ ೧೦ನೇತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.
ಮೃತ ಬಾಲಕನ ಅಂತ್ಯಸಂಸ್ಕಾರ ಪಾವಗಡ ತಾಲ್ಲೂಕಿನ ಪೋಷಕರ ಗ್ರಾಮದಲ್ಲಿ ನಡೆಯಿತು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ