ಹುಳಿಯಾರು: ವರಮಹಾಲಕ್ಷ್ಮೀ ಹಬ್ಬಕ್ಕೆ ಹೂವು, ಹಣ್ಣು ಬೆಲೆ ಗಗನಕ್ಕೇರಿದ್ದು ಸಾರ್ವಜನಿಕರಿಗೆ ಈ ಬಾರಿ ಹಬ್ಬ ದುಬಾರಿಯಾಗಿ ಪರಿಣಮಿಸಿದೆ.
ಹುಳಿಯಾರಿನಲ್ಲಿ ಗುರುವಾರದ ಸಂತೆಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಹೂವಿನ ವ್ಯಾಪಾರ ಜೋರಾಗಿ ಸಾಗಿತ್ತು. |
ಪಟ್ಟಣದಲ್ಲಿ ಗುರುವಾರ ನಡೆದ ಸಂತೆಯಲ್ಲಿ ಹೂವು, ಹಣ್ಣಿನ ಬೆಲೆಗಳು ದುಬಾರಿಯಾಗಿದ್ದರೆ ತರಕಾರಿ ಬೆಲೆ ಮಧ್ಯಮವಾಗಿತ್ತು. ಕಾಕಡ ಮಾರಿಗೆ ೫೦ ರೂ ಇದ್ದರೆ ಶಾವಂತಿಗೆ ಹೂ ಮಾರೊಂದಕ್ಕೆ ೧೦೦ ರೂ,ಬಟನ್ಸ್ ಮಾರಿಗೆ ೮೦ ಇತ್ತು. ಇನ್ನು ಬಿಡಿ ಹೂವಿನ ಬೆಲೆ ಕೆಜಿಗೆ ಇನ್ನೂರಕ್ಕೂ ಹೆಚ್ಚಿತ್ತು .ಡೇರಾ ಹೂವಿಗೆ 10 ರೂ ಇದ್ದರೆ ತಾವರೆ ಹೂವಿಗೆ ಕೆರೆಗಳಲ್ಲಿ ಹುಡುಕಾಟ ನಡೆದಿತ್ತು..ಯಾರು ಕೊಳ್ಳಲೊಲ್ಲದೆ ಕೇಜಿಗೆ ೩೦ರೂ ಆಸುಪಾಸಿನಲ್ಲಿರುತ್ತಿದ್ದ ಚೆಂಡು ಹೂವು ಕೂಡ ಕೆಜೆ ೬೦.ರೂ ನಂತೆ ಮಾರಾಟವಾಯಿತು.
ಹೂವಿನೊಂದಿಗೆ ಹಣ್ಣಿನೆ ಬೆಲೆಯೂ ಏರಿ ಗ್ರಾಹಕರನ್ನು ಕಂಗಾಲಾಗಿಸಿತ್ತು.ಸೇಬಿನ ಬೆಲೆ ಕೇಜಿ 100-120 ರೂ ಇದ್ದರೆ ಕರಿ ದ್ರಾಕ್ಷಿ ೧೨೦ ರೂ,ಸೀಡ್ ಲೆಸ್ ದ್ರಾಕ್ಷಿ ಕೇಜಿ ೧೬೦ ರೂ. ದಾಟಿತ್ತು. ಸೀಬೆ ಕೆಜಿಗೆ ೮೦ ರೂ ,ಮೋಸುಂಬೆ ೫೦-೬೦ ರೂ,ಮರಸೇಬು ಕೇಜಿಗೆ ೧೦೦ ರೂ,ಕಿತ್ತಳೆ ಕೂಡ ಕೇಜಿಗೆ ೧೦೦ ರೂ ತಲುಪಿತ್ತು. ಪಚ್ಚಬಾಳೆ ಕೆಜಿಗೆ ೫೦-೬೦ ಇದ್ದರೆ ಪುಟ್ಟಬಾಳೆ ೮೦ ರೂ ಇತ್ತು.
ತರಕಾರಿಗಳ ಬೆಲೆ ಕೇಜಿಗೆ ಸರಾಸರಿ ೩೦-೪೦ ಇದ್ದರೆ ಸೊಪ್ಪಿನ ಬೆಲೆ ಮಾತ್ರ ತಳಕಚ್ಚಿತ್ತು.
ಹಬ್ಬದ ನಿಮಿತ್ತ ಎಲ್ಲಾ ವಸ್ತುಗಳ ಬೆಲೆಗಳು ದುಬಾರಿಯಾಗಿರೂ ವರ್ಷಕ್ಕೊಮ್ಮೆ ಹಿಂದಿನಿಂದಲೂ ಆಚರಿಸುತ್ತಿರುವ ಹಬ್ಬಗಳನ್ನು ಆಚರಿಸದೆ ಬಿಡಬಾರೆದಂಬ ಸಂಪ್ರದಾಯದ ನೆರಳಲ್ಲಿ ವರಮಹಾಲಕ್ಷ್ಮೀ ಹಬ್ಬಕ್ಕಾಗಿ ದುಬಾರಿ ಹಣ ತೆತ್ತು ಹೂ, ಹಣ್ಣು, ತರಕಾರಿಯನ್ನು ಕೊಂಡೊಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ