ನಮ್ಮ ಅಮೋಘ ಸಾಧನೆಗೆ ಗುರುಗಳ ಪ್ರೋತ್ಸಾಹವೇ ಕಾರಣ ಎಂದ ಮಕ್ಕಳು
ಹುಳಿಯಾರು: ತಮ್ಮ ಸಾಧನೆಗೆ ಗುರುಗಳ ಪ್ರೋತ್ಸಾಹ ಹಾಗೂ ಶ್ರೀ ರಕ್ಷೆಯೇ ಕಾರಣವಾಗಿದ್ದು ,ಇಂದು ನಮ್ಮ ತಂಡ ಪಡೆದ ಗೆಲುವು ಅವರಿಗಾಗಿ ಸಮರ್ಪಣೆ ಎಂದು ಬೆಳ್ಳಾರ ಶಾಲೆಯ ವಿದ್ಯಾರ್ಥಿಗಳು ತಮ್ಮ ಸಾಧನೆಯ ಹಿಂದಿನ ಕರ್ತೃವಾದ ಕಳೆದ ವಾರವಾಷ್ಟೆ ಅಗಲಿದ ದೈಹಿಕ ಶಿಕ್ಷಕ ತ್ಯಾಗರಾಜ್ ಗೆ ಸಮರ್ಪಿಸಿದ ಘಟನೆ ಹುಳಿಯಾರಿನಲ್ಲಿ ಬುಧವಾರ ಜರುಗಿದೆ .
ಹುಳಿಯಾರಿನಲ್ಲಿ ದೈಹಿಕ ಶಿಕ್ಷಕ ತ್ಯಾಗರಾಜ್ ಅವರ ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ಇವರ ಪ್ರೋತ್ಸಾಹದಿಂದಲೇ ನಾವು ಗೆಲುವು ಸಾಧಿಸಿದ್ದು ಎಂದ ಮಕ್ಕಳು ಪದಕವಿಟ್ಟು ಭಾಷ್ಪಾಂಜಲಿ ಸಮರ್ಪಿಸಿದರು |
ಗುರುಗಳ ನಮ್ಮಲ್ಲಿ ಗೆಲ್ಲಲೇ ಬೇಕಂಬ ಸ್ಫೂರ್ತಿಯ ಸೆಲೆ ತುಂಬಿದ್ದು ನಮ್ಮ ಗೆಲುವಿಗೆ ಕಾರಣವೆಂದ ಮಕ್ಕಳು ಇಂದು ತಾವು ಪಡೆದ ಪದಕಗಳೆನೆಲ್ಲಾ ದೂರದ ಊರಿನಿಂದ ಹುಳಿಯಾರಿನ ಅಂತ್ಯಕ್ರಿಯೆ ನಡೆದಿದ್ದ ಸ್ಥಳಕ್ಕೆ ಆಗಮಿಸಿ ಗುಡ್ಡೆ ಮುಂದೆ ಪದಕಗಳನಿಟ್ಟು ಪೂಜೆ ಸಲ್ಲಿಸಿ ಸಮರ್ಪಿಸಿದ ಘಟನೆ
ಅಲ್ಲಿದ್ದವರ ಕಣ್ಣಂಚಿನಲ್ಲಿ ನೀರು ತಂದಿದಂತೂ ಸತ್ಯ.ದೈಹಿಕ ಶಿಕ್ಷಕ ತ್ಯಾಗರಾಜುವಿಗೆ ಮಕ್ಕಳ ಬಗ್ಗೆಗಿದ್ದ ಅಂತಕರಣ,ಮಮಕಾರಕ್ಕೆ ಈ ಘಟನೆ ಸಾಕ್ಷಿಯಾಯಿತು.
ಬೆಳ್ಳಾರ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ದೈಹಿಕ ಶಿಕ್ಷಕ ತ್ಯಾಗರಾಜ್ ಕಳೆದ ಬುಧವಾರ ರಾತ್ರಿ ಹುಳಿಯಾರಿನ ತಮ್ಮ ಸ್ವಗೃಹದಲ್ಲಿ ಹೃದಯಘಾತದಿಂದ ಅಕಾಲಿಕವಾಗಿ ಸಾವನ್ನಪಿದರು.
ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಿ, ಬೆಳಸಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸುವಂತೆ ಮಾಡಿ ಬಹುಮಾನ ತಂದೆ ತರುವಂತಹ ತಾಕತ್ತು ತುಂಬುತ್ತಿದ್ದ ಇವರ ವಿಶಿಷ್ಟ ಶೈಲಿಯ ತರಬೇತಿ ಈ ಭಾಗದಲ್ಲಿ ಹೆಸರಾಗಿತ್ತು.
ಇದಕ್ಕೆ ನಿದರ್ಶನವೆನ್ನುವಂತೆ ಇವರ ಕೈಕೆಳಗೆ ಕ್ರೀಡೆಗೆ ಸಿದ್ಧವಾಗಿದ್ದ ಬೆಳ್ಳಾರ ಶಾಲೆಯ ಮಕ್ಕಳು ಆ.೧ ಮತ್ತು೨ ರಂದು ದಸೂಡಿಯಲ್ಲಿ ನಡೆಯುತ್ತಿದ್ದ ಹೋಬಳಿ ಮಟ್ಟದ ಬಿ ಗ್ರೂಪಿನ ಕ್ರೀಡಾಕೂಟದಲ್ಲಿ ಎಲ್ಲಾ ಗುಂಪು ಕ್ರೀಡೆ,ಅಥ್ಲೆಟಿಕ್ಸ್ ಮತ್ತಿತರ ಕ್ರೀಡೆಗಳ್ಳಲೂ ವಿತೇತರಾಗಿ ಸಮಗ್ರ ಬಹುಮಾನಕ್ಕೆ ಭಾಜನರಾದರು.
ಇದರ ಖ್ಯಾತಿ ನಮ್ಮನಗಲಿದ ಶಿಕ್ಷಕರಿಗೆ ಸಲ್ಲಬೇಕೆಂದ ಮಕ್ಕಳು ಇಂದು ಅವರ ಅಂತ್ಯಕ್ರಿಯೆ ನಡೆದ ಸ್ಥಳಕ್ಕಾಮಿಸಿ ನಮ್ಮ ಅಮೋಘ ಸಾಧನೆಗೆ ನಿಮ್ಮ ಪ್ರೇರಣ ಶಕ್ತಿಯೇ ಕಾರಣ ಎಂದು ಭಾಷ್ಪಾಂಜಲಿ ಸಮರ್ಪಿಸಿದರು.ತಾಲ್ಲೂಕ್ ಹಾಗೂ ಜಿಲ್ಲಾ ಮಟ್ಟದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಸಹ ಗೆಲುವು ದೊರಕುವಂತೆ ಆಶೀರ್ವದಿಸಿ ಎಂದು ಬೇಡಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ