ಹುಳಿಯಾರು: ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ರಾಷ್ಟ್ರವ್ಯಾಪ್ತಿ ಅನಿರ್ದಿಷ್ಟ ಅವಧಿ ಮುಷ್ಕರ ಬೆಂಬಲಿಸಿ, ಜಿಡಿಎಸ್ ಸಮಿತಿಯಿಂದ ಶಿಫಾರಸ್ಸು ಮಾಡಿದ ಬೇಡಿಕೆಗಳನ್ನು ಈಡೇರಿಸುವುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಟ್ಟಣದ ಅಂಚೆ ಕಚೇರಿ ಎದುರು ಹುಳಿಯಾರು ಹೋಬಳಿ ವ್ಯಾಪ್ತಿಯ ಗ್ರಾಮೀಣ ಅಂಚೆ ನೌಕರರು ಮುಷ್ಕರ ನಡೆಸಿದರು.
![]() |
ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ರಾಷ್ಟ್ರವ್ಯಾಪ್ತಿ ಅನಿರ್ದಿಷ್ಟ ಅವಧಿ ಮುಷ್ಕರ ಬೆಂಬಲಿಸಿ ಹುಳಿಯಾರು ಹೋಬಳಿ ವ್ಯಾಪ್ತಿಯ ಗ್ರಾಮೀಣ ಅಂಚೆ ನೌಕರರು ಮುಷ್ಕರ ನಡೆಸಿದರು. |
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಗ್ರಾಮೀಣ ಅಂಚೆ ನೌಕರರ ಸಂಘದ ಅಧ್ಯಕ್ಷ ಪಂಚಾಕ್ಷರಯ್ಯ ಏಳನೇ ವೇತನ ಆಯೋಗ ರಚನೆಯಾದರೂ ಜಾರಿಗೊಳಿಸುವಲ್ಲಿ ಕೇಂದ್ರಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ.ಇದರಿಂದ ದೇಶಾದ್ಯಂತ 2.5ಲಕ್ಷಕ್ಕೂ ಹೆಚ್ಚು ಗ್ರಾಮೀಣ ಅಂಚೆ ನೌಕರರು ಶೋಷಣೆಗೆ ಒಳಗಾಗಿದ್ದಾರೆ.ಆದ್ದರಿಂದ ತ್ವರಿತವಾಗಿ ಆಯೋಗದ ವರದಿಯನ್ನು ಜಾರಿಗೊಳಿಸಲು ಒತ್ತಾಯಿಸಿ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸುವುದಾಗಿ ತಿಳಿಸಿದರು.
ಯಳನಾಡು ಬಿಒ ರಂಗಯ್ಯ ಮಾತನಾಡಿ ನಮ್ಮ ಬೇಡೆಕೆಗಳ ಬಗ್ಗೆ ಗಮನ ಸೆಳೆಯಲು ಅನೇಕ ಬಾರಿ ಡಿವಿಷನ್ ಲೆವೆಲ್, ಸರ್ಕಲ್ ಲೆವೆಲ್ ಹಾಗೂ ಆಯಾಯ ತಾಲೂಕು ಮಟ್ಟದಲ್ಲಿ ಬೈಕ್ ರ್ಯಾಲಿ ಮಾಡುವ ಮೂಲಕ ಕೂಡಾ ಸರ್ಕಾರವನ್ನು ಎಚ್ಚರಿಸಿದ್ದೆವು.ಆದರೂ ಕೂಡ ಸರಕಾರ ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿದ್ದರಿಂದ ಅನಿವಾರ್ಯವಾಗಿ ನಮ್ಮ ನಾಲ್ಕು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಇಂದಿನಿಂದ ದೇಶಾದ್ಯಂತ ಮುಷ್ಕರ ಅನಿರ್ಧಿಷ್ಟ ಅವಧಿಯ ಮುಷ್ಕರ ಪ್ರಾರಂಭಿಸುವುದಾಗಿ ತಿಳಿಸಿದರು .
ಈ ಸಂದರ್ಭದಲ್ಲಿ ಗಾಣದಾಳುವಿನ ಶಶಿಧರ್ ,ಬೆಳ್ಳಾರದ ಕೃಷ್ಣಪ್ಪ, ಗಾಣದಾಳುವಿನ ಮೂರ್ತಿ, ಕೆಂಕೆರೆಯ ವೀರಭದ್ರಯ್ಯ ಹಾಗೂ ಉಮಾಪತಿ ,ತಿರುಮಲಾಪುರದ ಶಾಂತರಾಜು,ದಸೂಡಿಯ ಬಸವರಾಜು ಹಾಗೂ ಕೃಷ್ಣಮೂರ್ತಿ,ಹುಳಿಯಾರಿನ ಶ್ರೀನಿವಾಸ್ ಹಾಗೂ ಶಿವನಂಜಯ್ಯ, ಯಳನಾಡು ಚಂದ್ರಶೇಖರ ಶಾಸ್ತ್ರಿ ,ಹೊಯ್ಸಳಕಟ್ಟೆಯ ರಂಗಯ್ಯ ಹಾಗೂ ಬಸವಲಿಂಗಯ್ಯ, ದಬ್ಬಗುಂಟೆಯ ನಾಗರಾಜು ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು
-------
ನಾಲ್ಕು ಪ್ರಮುಖ ಬೇಡಿಕೆಗಳು
-------
1.ಮಾರ್ಪಾಡು ಮಾಡಲ್ಪಟ್ಟಿರುವ ಕಮಲೇಶ್ ಚಂದ್ರ ವರದಿಯನ್ನು ಸಂಪೂರ್ಣವಾಗಿ ಜಾರಿಗೊಳಿಸಬೇಕು.
2.ನಮ್ಮನ್ನು ಎಂಟು ಗಂಟೆ ಕೆಲಸದ ನೌಕರರು ಎಂದು ಪರಿಗಣಿಸಬೇಕು.
3.ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ ಮದ್ರಾಸು ಮತ್ತು ನವದೆಹಲಿಯ 4.ನಿರ್ದೇಶನದಂತೆ ಎಲ್ಲಾ ಗ್ರಾಮೀಣ ಅಂಚೆ ನೌಕರರಿಗೆ ನಿವೃತ್ತಿ ವೇತನ ಜಾರಿಗೊಳಿಸಬೇಕು.
ಎಲ್ಲಾ ಗ್ರಾಮೀಣ ಅಂಚೆ ನೌಕರರಿಗೆ ಒತ್ತಾಯಪೂರ್ವಕವಾಗಿ ಮತ್ತು ಅಮಾನವೀಯ ಚಟುವಟಿಕೆಯಿಂದ ಗುರಿ ಮುಟ್ಟಲು ಒತ್ತಡ ಹೇರುವುದನ್ನು ನಿಷೇಧಿಸಬೇಕು.
-------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ