ಸತತ ಪ್ರಯತ್ನಗಳಿಂದ ಸೋತವರು ಗೆಲುವು ಸಾಧಿಸಬಹುದು : ಪಿಎಸೈ ವೈ.ವಿ. ರವೀಂದ್ರ
ಹುಳಿಯಾರು: ಶಿಕ್ಷಣ ಮತ್ತು ಕ್ರೀಡೆ ನಾಣ್ಯದ ಎರಡು ಮುಖವಿದ್ದಂತೆ .ಆಟದಲ್ಲಿ ಸೋಲು ಗೆಲುವು ಸಹಜ .ಆದರೆ ಸತತ ಪ್ರಯತ್ನಗಳಿಂದ ಸೋತವರು ಗೆಲುವು ಸಾಧಿಸಬಹುದು. ಆದ್ದರಿಂದ ಯಾರೂ ಸೋಲಿಗೆ ನಿರಾಶರಾಗದೆ ಕ್ರೀಡಾ ಸ್ಫೂರ್ತಿ ಹಾಗೂ ಆತ್ಮವಿಶ್ವಾಸದಿಂದ ಭಾಗವಹಿಸಿ ಗೆಲುವಿನ ನಗೆ ಬೀರಿ ಎಂದು ಹುಳಿಯಾರು ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ವೈ.ವಿ. ರವೀಂದ್ರ ಕರೆ ನೀಡಿದರು.
ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದವತಿಯಿಂದ ಬುಧವಾರ ನಡೆದ ಎರಡು ದಿನಗಳ ಕಾಲದ ಹುಳಿಯಾರು ಹೋಬಳಿ ಎ ವಿಭಾಗದ ಪ್ರೌಢ ಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಪಿಎಸೈ ವೈ.ವಿ. ರವೀಂದ್ರ ಮಾತನಾಡಿದರು |
ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದವತಿಯಿಂದ ಬುಧವಾರ ನಡೆದ ಎರಡು ದಿನಗಳ ಕಾಲದ ಹುಳಿಯಾರು ಹೋಬಳಿ ಎ ವಿಭಾಗದ ಪ್ರೌಢ ಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಬಾಲ್ ಚಿಮ್ಮುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು .
ಕ್ರೀಡಾ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಸಿ. ಸಿದ್ದರಾಮಯ್ಯ ಮಾತನಾಡಿ ಸೋಲು ಗೆಲುವು ಕ್ರೀಡೆಯ ಎರಡು ಮುಖವಿದ್ದಂತೆ.ಆಟದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವುದನ್ನು ಕಲಿತಲ್ಲಿ ಬಾಳಿನಲ್ಲಿ ಸಮಚಿತ್ತವಾಗಿರುವುದನ್ನು ಕಲಿತಂತೆ ಎಂದರು . ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಹುಳಿಯಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪ್ರದೀಪ್ ಮಾತನಾಡಿ ಮಕ್ಕಳಲ್ಲಿ ಓದುವುದರಲ್ಲಿ,ಆಡುವುದರಲ್ಲಿ, ಹಾಡುವುದರಲ್ಲಿ ಸೇರಿದಂತೆ ಎಲ್ಲಾ ರೀತಿಯ ಪ್ರತಿಭೆ ಇರುತ್ತದೆ .ಅವರಲ್ಲಿನ ಪ್ರತಿಭೆಯನ್ನು ಹೊರತೆಗೆಯುವ ಕೆಲಸ ಶಿಕ್ಷಕರಿಂದ ಆಗಬೇಕು ಎಂದರು .ಮಕ್ಕಳು ತಮ್ಮ ಪ್ರತಿಭೆಯ ಮೂಲಕ ಕ್ರೀಡೆಯಲ್ಲಿ ತಾಲೂಕು ಜಿಲ್ಲಾ ಹಾಗೂ ರಾಜ್ಯ ಮಟ್ಟವನ್ನು ಪ್ರತಿನಿಧಿಸಿ ಉತ್ತಮ ಸ್ಥಾನ ಪಡೆದಲ್ಲಿ ಮುಂದೆ ಅವರ ವಿದ್ಯಾಭ್ಯಾಸದಲ್ಲಿ ಹಾಗೂ ಉದ್ಯೋಗದಲ್ಲೂ ಕೂಡ ಸಹಕಾರಿಯಾಗಲಿದೆ.ಗುರಿ ಹಾಗೂ ಛಲದಲ್ಲಿ ಯಾವುದೂ ಅಸಾಧ್ಯವಲ್ಲ ,ಗೆಲುವು ನಿಶ್ಚಿತ ಎಂದು ಕಿವಿಮಾತು ಹೇಳಿದರು .
ಕ್ರೀಡಾಕೂಟದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಸನ್ನಕುಮಾರ್ ಮಾತನಾಡಿದರು . |
ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಸನ್ನಕುಮಾರ್ ಮಾತನಾಡಿ ಓದುವುದು ಮಾನಸಿಕವಾಗಿ ನಡೆಯುವ ಒಂದು ಕ್ರಿಯೆ .ಹಾಗೆಯೇ ದೈಹಿಕವಾಗಿ ಆರೋಗ್ಯ ಕಾಪಾಡಿಕೊಳ್ಳಬೇಕೆಂದರೆ ಕ್ರೀಡೆ ಅಷ್ಟೇ ಅವಶ್ಯಕತೆ ಎಂದರು .ಕ್ರೀಡೆಯಲ್ಲಿ ಸೋಲುವುದು ಬೇರೆ. ಇವತ್ತು ನಾವು ಸೋತರೆ ಅದನ್ನು ಧನಾತ್ಮಕವಾಗಿ ತೆಗೆದುಕೊಂಡಲ್ಲಿ ಮುಂದಿನ ದಿನದಲ್ಲಿ ಗೆಲುವು ಸಾಧಿಸಬಹುದು.ಸೋಲೇ ಗೆಲುವಿನ ಮೆಟ್ಟಿಲು ಹಾಗಾಗಿ ಪಾಸಿಟಿವ್ ಆಗಿ ಯೋಚಿಸುವುದನ್ನು ಕಲಿಯಿರಿ ಎಂದರು.
ಸರ್ಕಾರ ಗ್ರಾಮಾಂತರ ಪ್ರದೇಶದಲ್ಲಿ ಸಾಕಷ್ಟು ವ್ಯಾಯಾಮ ಹಾಗೂ ಕ್ರೀಡಾ ಶಾಲೆಗಳನ್ನು ತೆರೆಯುವುದರ ಮುಖಾಂತರ ಕ್ರೀಡೆಗೆ ಪ್ರೋತ್ಸಾಹ ನೀಡಬೇಕಿದೆ ಎಂದರು .
ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲೆ ಡಿ ಇಂದಿರಾ ಅಧ್ಯಕ್ಷತೆ ವಹಿಸಿದ್ದರು .ತಾಲ್ಲೂಕ್ ದೈಹಿಕ ಶಿಕ್ಷಣಾಧಿಕಾರಿ ಜಗನ್ನಾಥ್ ಕ್ರೀಡಾಳುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು .
ಎಸ್ಡಿಎಂಸಿ ಉಪಾಧ್ಯಕ್ಷ ರಂಗನಕೆರೆ ಮಹೇಶ್ ಸದಸ್ಯ ಶೌಕತ್,ಹೋಬಳಿ ವ್ಯಾಪ್ತಿಯ ವಿವಿಧ ಶಾಲೆಗಳ ಕ್ರೀಡಾಳುಗಳು ಹಾಗೂ ದೈಹಿಕ ಶಿಕ್ಷಕರು ಮತ್ತಿತರರು ಪಾಲ್ಗೊಂಡಿದ್ದರು .
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ