ಏಳನೇ ವೇತನ ಆಯೋಗದ ಜಾರಿಗೆ ಒತ್ತಾಯಿಸಿ ಗ್ರಾಮೀಣ ಅಂಚೆ ನೌಕರರು ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಬೈಕ್ ರ್ಯಾಲಿ ನಡೆಸಿದರು.
ಕೇಂದ್ರ ಸಂಘದ ಆದೇಶದಂತೆ ದೇಶಾದ್ಯಂತ ಗ್ರಾಮೀಣ ಅಂಚೆನೌಕರರಿಂದ ಇಂದು ಬೈಕ್ ರ್ಯಾಲಿ ನಡೆದಿದೆ. ಈ ನಿಟ್ಟನಲ್ಲಿ ತಾಲ್ಲೂಕಿನ ಗ್ರಾಮೀಣ ಅಂಚೆನೌಕರರು ಇಂದು ಇಲ್ಲಿನ ಅಂಚೆ ಕಚೇರಿ ಮುಂಭಾಗದಿಂದ ಊರಿನ ಮುಖ್ಯರಸ್ತೆಯಲ್ಲಿ ಬೈಕ್ ರ್ಯಾಲಿ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಅಂಚೆ ನೌಕರರ ಸಂಘದ ಅಧ್ಯಕ್ಷ ಪಂಚಾಕ್ಷರಯ್ಯ ಮಾತನಾಡಿ ಕಳೆದ ಒಂದು ವರ್ಷದಿಂದ ಏಳನೇ ವೇತನ ಆಯೋಗ ರಚನೆಯಾದರೂ ಜಾರಿಗೊಳಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ಇದರಿಂದ ದೇಶಾದ್ಯಂತ ಇರುವ 2.5 ಲಕ್ಷ ಗ್ರಾಮೀಣ ಅಂಚೆ ನೌಕರರು ಶೋಷಣೆ ಅನುಭವಿಸುತ್ತಿದ್ದಾರೆ. ಪ್ರಾಮಾಣಿಕವಾಗಿ ಅಂಚೆ ಇಲಾಖೆಯಲ್ಲಿ ಎಲ್ಲಾ ಋತುಗಳಲ್ಲೂ ಸಮಯ ಪ್ರಜ್ಞೆಯಿಂದ ಕಾರ್ಯನಿರ್ವಹಿಸುತ್ತಿರುವ ನಮಗೆ ನ್ಯಾಯಯುತ ವೇತನದಲ್ಲಿ ತಾರತಮ್ಯವಿದೆ ಕೂಡಲೇ ಏಳನೇ ವೇತನ ಅಯೋಗ ಜಾರಿಗೆ ತರುವಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕಿದೆ. ಇದೇ ಆಗಷ್ಟ್ 16 ರಂದು ದೇಶಾದ್ಯಂತ ಅನಿರ್ದಾಷ್ಟಾವಧಿ ಮುಷ್ಕರ ನಡೆಸಲಾಗುವುದೆಂದರು.
ರ್ಯಾಲಿಯಲ್ಲಿ ನೌಕರರ ಸಂಘದ ಕಾರ್ಯದರ್ಶಿ ಹರೀಶ್, ರಾಜಣ್ಣ, ವೆಂಕಟೇಶ್, ಮಂಜುನಾಥ್ ಇತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ