ಹುಳಿಯಾರು: ಅಗತ್ಯ ಮೂಲಭೂತ ಸೌಕರ್ಯ ಹಾಗೂ ಕೊಠಡಿ ಕೊರತೆ ಎದುರಿಸುತ್ತಿದ್ದ ಪಟ್ಟಣದ ಬಾಲಕಿಯರ ಸರಕಾರಿ ಪದವಿ ಪೂರ್ವಕಾಲೇಜಿಗೆ ೪೯ ಲಕ್ಷ ವೆಚ್ಚದಲ್ಲಿ ಶೌಚಾಲಯ ಹಾಗೂ ೨ ನೂತನ ಕೊಠಡಿ ನಿರ್ಮಾಣಕ್ಕೆ ಶಾಸಕ ಸಿ.ಬಿ.ಸುರೇಶ್ ಬಾಬು ಗುರುವಾರದಂದು ಗುದ್ದಲಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು ಮಕ್ಕಳ ಉತ್ತಮ ವಿದ್ಯಾಭ್ಯಾಸ ದೃಷ್ಟಿಯಿಂದ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿದ್ದು ,ಕಾಲೇಜ್ ಕೊಠಡಿ ನಿರ್ಮಾಣದ ಕಾಮಗಾರಿಯೂ ಸಹ ಪಾಠಪ್ರವಚನಕ್ಕೆ ತೊಂದರೆಯಾಗದಂತೆ ಬೇಗನೆ ಪೂರ್ತಿಗೊಳಿಸಲಾಗುವುದು ಎಂದರು.ಶೀಘ್ರವಾಗಿ ಪೂರ್ತಿಮಾಡಿಕೊಡುವಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಿದರು.
ಇಲ್ಲಿನ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ನೀರಿನ ಸಮಸ್ಯೆಯಿರುವುದನ್ನು ಮನಗಂಡ ಅವರು ಬೋರ್ ವೆಲ್ ಕೊರಿಸಿಕೊಡುವುದಾಗಿ ಹೇಳಿದರಲ್ಲದೆ ಇದೇ ಆವರಣದಲ್ಲಿ ಶುದ್ಧ ಶುದ್ದ ನೀರಿನ ಘಟಕ ಸ್ಥಾಪಿಸುವುದಾಗಿ ಭರವಸೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಹುಳಿಯಾರು ತಾಪಂ ಸದಸ್ಯರಾದ ಹೆಚ್.ಎನ್.ಕುಮಾರ್,ಯಳನಾಡು ತಾಪಂ ಸದಸ್ಯರಾದ ಯತೀಶ್, ದಸೂಡಿ ತಾಪಂ ಸದಸ್ಯರಾದ ಪ್ರಸನ್ನಕುಮಾರ್,ಹುಳಿಯಾರು ಗ್ರಾಪಂ ಉಪಾಧ್ಯಕ್ಷ ಗಣೇಶ್, ಸದಸ್ಯರುಗಳಾದ ಗೀತಾಬಾಬು, ಅಹ್ಮದ್‌ಖಾನ್, ಪುಟ್ಟಮ್ಮ,ಚಿ.ನಾ.ಹಳ್ಳಿ ಪುರಸಭೆ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಕಾಲೇಜ್ ಪ್ರಾಂಶುಪಾಲ ನಂಜುಂಡಪ್ಪ, ಶಿಕ್ಷಕರಾದ ನಂದವಾಡಗಿ, ಕಿರುತೆರೆಯ ಕಲಾವಿದ ಗೌಡಿ ಸೇರಿದಂತೆ ಕಾಲೇಜಿನ ಉಪನ್ಯಾಸಕರು ,ವಿದ್ಯಾರ್ಥಿನಿಯರು ಇತರೆ ಮುಖಂಡರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ