ದೊಡ್ಡಪ್ರಮಾಣದಲ್ಲಿ ಅಕ್ರಮ ಸಾಗುವಳಿದಾರರ ಅರ್ಜಿಗಳನ್ನು ಪರಿಶೀಲಿಸಿ ವಿತರಿಸುತ್ತಿರುವುದು ಜಿಲ್ಲೆಯಲ್ಲಿಯೇ ಪ್ರಥಮ
----------------------
ಚಿಕ್ಕನಾಯಕನಹಳ್ಳಿ;ಹಲವಾರು ವರ್ಷಗಳಿಂದ ಇತ್ಯರ್ಥವಾಗದ ಬಗರಹುಕುಂ ಸಾಗುವಳಿದಾರರ ಅರ್ಜಿಗಳ ಪೈಕಿ ಈಗ ತಾಲ್ಲೂಕಿನ 288 ಫಲಾನುಭವಿಗಳಿಗೆ ಸಾಗುವಳಿ ಚೀಟಿಯನ್ನು ವಿತರಿಸಲಾಗಲಿದೆ ಎಂದು ಉಸ್ತುವರಿ ಸಚಿವ ಟಿ.ಬಿ ಜಯಚಂದ್ರ ತಿಳಿಸಿದರು.
ಅವರು ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬಹರ್‌ಹುಕುಂ ಸಮಿತಿಯ ಮುಂದೆ ಹಲವಾರು ವರ್ಷಗಳಿಂದ ಇತ್ಯರ್ಥವಾಗದ ೯೦೦ ಅರ್ಜಿಗಳ ಪೈಕಿ ೨೮೮ ಅರ್ಜಿದಾರರಿಗೆ ಇಂದು ಸಾಗುವಳಿ ಚೀಟಿ ವಿತರಿಸಿ ಮಾತನಾಡಿದರು.
ಗೋಮಾಳದಲ್ಲಿ ಅರ್ಜಿ ಹಾಕಿದ್ದ ರೈತರಿಗೆ ಉಚ್ಚನ್ಯಾಯಾಲಯದ ಆದೇಶದನ್ವಯ ಕೆಲವನ್ನು ವಿಲೆ ಇಡಲಾಗಿದೆ. ಉಳಿದಂತೆ ತಾಲ್ಲೂಕಿನ ಎಲ್ಲಾ ಭಾಗದಲ್ಲಿನ ಜಮೀನುಗಳನ್ನು ಸಮಿತಿಯ ಮೂಲಕ ಸ್ಥಳ ಪರಿಶೀಲನೆ ನಡೆಸಿ ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. ಫಾರಂನಂ.೫೦ ರಲ್ಲಿ ಯಾವುದೇ ಅರ್ಜಿ ಉಳಿದಿಲ್ಲ, ಫಾರಂ ನಂ. ೫೩ರಲ್ಲಿ ೯೦೦ ಪ್ರಕರಣಗಳಲ್ಲಿ 288 ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದು, ಇದರಲ್ಲಿ 164 ಪ್ರಕರಣಗಳಲ್ಲಿ ಸರ್ಕಾರಕ್ಕೆ ಕಿಮ್ಮತ್ತು ಕಟ್ಟಬೇಕಿದೆ. 540 ಪ್ರಕರಣಗಳಲ್ಲಿ ಈಗ 288 ಅರ್ಜಿದಾರರಿಗೆ ಇಂದು ಸಾಗುವಳಿ ಚೀಟಿ ವಿತರಿಸಲಿದ್ದು ಉಳಿದ 220 ಮಂದಿಗೆ ಇಪ್ಪತ್ತು ದಿನದೊಳಗೆ ವಿತರಿಸಲಾಗುವುದೆಂದರು. ಇಷ್ಟೊಂದು ದೊಡ್ಡಪ್ರಮಾಣದಲ್ಲಿ ಅಕ್ರಮ ಸಾಗುವಳಿದಾರರ ಅರ್ಜಿಗಳನ್ನು ಪರಿಶೀಲಿಸಿ ವಿತರಿಸುತ್ತಿರುವುದು ಜಿಲ್ಲೆಯಲ್ಲಿಯೇ ಈ ತಾಲ್ಲೂಕು ಪ್ರಥಮವಾಗಿದೆ ಎಂದರು.
ಕಳೆದ ನಲವತ್ತು ವರ್ಷದ ಅವಧಿಯ ನನ್ನ ರಾಜಕೀಯ ಜೀವದಲ್ಲಿ ಈ ಕ್ಷೇತ್ರದಲ್ಲಿನ ಒಂದು ಭಾಗದಲ್ಲಿ ೨೦ ವರ್ಷ ಪ್ರತಿನಿಧಿಸಿದ್ದು ತಾಲ್ಲೂಕಿನ ಅನುದಾನದಲ್ಲಿಯಾಗಲಿ, ಅಭಿವೃದ್ದಿಯಲ್ಲಾಗಲಿ ಕಡೆಗೆಣಿಸಿಲ್ಲವೆಂದರು. ಜನರ ಪ್ರತಿನಿಧಿಯಾಗಿ ಕಾನೂನಿನ ಚೌಕಟ್ಟಿನಲ್ಲಿ ನಾನು ಸಂಯಮದಿಂದ ಕೆಲಸಮಾಡಿಕೊಂಡು ಬಂದವನಾಗಿದ್ದೇನೆ ನನ್ನ ಬಗ್ಗೆ ಮಾಜಿ ಶಾಸಕರು ಆಡಿದಂತಹ ಅಸಹ್ಯಕರ ಪದಪ್ರಯೋಗ ಹಾಗೂ ಅಸಂವಿಧಾನ ನಡೆಗಳನ್ನು ನಾನು ನಿರ್ಲ್ಯಕ್ಷಿಸುತ್ತೆನೆ ಎಂದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಬಗರಹುಕುಂ ಅರ್ಜಿದಾರರಿಗೆ ಸಾಗುವಳಿ ಚೀಟಿ ವಿತರಿಸಿ ಮಾತನಾಡಿದರು. ಶಾಸಕ ಸಿ.ಬಿ. ಸುರೇಶ್‌ಬಾಬು, ತಹಸೀಲ್ದಾರ್ ಗಂಗೇಶ್ ಇದ್ದರು. |
ಈ ಸಂದರ್ಭದಲ್ಲಿ ಶಾಸಕ ಸಿ.ಬಿ. ಸುರೇಶ್‌ಬಾಬು ಹಾಗೂ ಬಗರಹುಕುಂ ಸಮಿತಿಯ ಸದಸ್ಯರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ