ಹುಳಿಯಾರು: ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ
ಹುಳಿಯಾರು: ಐ.ಟಿ.ಅಧಿಕಾರಿಗಳನ್ನು ತನ್ನ ಕೈಗೊಂಬೆಮಾಡಿಕೊಂಡಿರುವ ಕೇಂದ್ರಸರಕಾರ ಕರ್ನಾಟಕ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ಸಚಿವ ಡಿ.ಕೆ.ಶಿವಕುಮಾರ್ ಮನೆಮೇಲೆ ವಿನ:ಕಾರಣ ದಾಳಿಮಾಡಿಸುವ ಮುಲಕ ಕಿರುಕುಳ ನೀಡಿತ್ತಿದ್ದಾರೆಂದು ಆರೋಪಿಸಿ ಹುಳಿಯಾರಿನಲ್ಲಿ ಕಾಂಗ್ರೆಸ್ ಮುಖಂಡರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ಹಾಗೂ ಜಿ.ಪಂ. ಸದಸ್ಯ ವೈ.ಸಿ.ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರದಂದು ಪ್ರತಿಭಟನೆ ನಡೆಸಿದರು.
ಹುಳಿಯಾರಿನ ಪರಿವೀಕ್ಷಣಾಮಂದಿರದಿಂದ ಪ್ರತಿಭಟನಾ ಮೆರವಣಿಗೆಯ ಮೂಲಕ ನಾಡಕಚೇರಿ ತಲುಪಿ ಉಪತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಈ ವೇಳೆ ಜಿಪಂ ಸದಸ್ಯ ವೈ.ಸಿ.ಸಿದ್ದರಾಮಯ್ಯ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿವೃದ್ಧಿ ಕಾರ್ಯ ಹಾಗೂ ಜನಪ್ರಿಯತೆ ಸಹಿಸದ ಕೇಂದ್ರದ ಬಿಜೆಪಿ ಸರಕಾರವು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸೋಲುತ್ತೆವೆ ಎಂಬ ಭಯದಿಂದ ಕಂಗಾಲಾಗಿ ಕಾಂಗ್ರೆಸ್‌ನ ಸಚಿವರ ಮನೆಮೇಲೆ ಐ.ಟಿ.ಅಧಿಕಾರಿಗಳನ್ನ ಕಳಿಸಿ ದಾಳಿಮಾಡಿಸಿ ಭಯದ ವಾತವರಣ ಸೃಷ್ಟಿಸಲು ಮುಂದಾಗಿರುವುದು ನಾಚಿಕೆಗೇಡಿತನವಾಗಿದೆ ಎಂದು ಕಿಡಿಕಾರಿದರು.
ರೈತರ ಪರ ಸ್ವಲ್ಪವು ಕನಿಕರವಿಲ್ಲದ ಪ್ರಧಾನ ಮಂತ್ರಿಗಳು ರೈತರ ಬೆಳೆದ ತೆಂಗಿನ ಕೊಬ್ಬರಿ, ಅಡಕೆಯ ಬೆಳೆಗೆ ನ್ಯಾಯಯುತವಾದ ಬೆಲೆ ದೊರಕಿಸಿಕೊಡಲು ಮುಂದಾಗುತ್ತಿಲ್ಲ. ಸಂಸತ್ ಅಧಿವೇಶನಗಳಿಗೂ ಸರಿಯಾಗಿ ಭಾಗವಯಿಸದ ಇವರು ಕೇವಲ ದೇಶಗಳನ್ನು ಸುತ್ತಿಕೊಂಡಿದ್ದಾರೆ. ಹೀಗಾಗಿ ಇವರಿಗೆ ರೈತರ, ಸಾಮಾನ್ಯ ಜನರ ಸಂಕಷ್ಟಗಳು ಅರ್ಥವಾಗುತ್ತಿಲ್ಲ ಎಂದರು.
ಈ ಕೂಡಲೇ ಕೇಂದ್ರ ಸರಕಾರ ಐಟಿ ಅಧಿಕಾರಿಗಳನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಒತ್ತಾಯಿಸಿದರು. ಇಲ್ಲವಾದರೆ ಈ ಪ್ರತಿಭಟನೆಯು ಉಗ್ರರೂಪ ತಾಳಲಿದೆ ಎಂದು ಎಚ್ಚರಿಸಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜೆ.ವೆಂಕಟೇಶ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಪಿ.ಎಲ್. ಡಿ.ಬ್ಯಾಂಕ್ ನಿರ್ದೇಶಕ ಶಿವಕುಮಾರ್, ರಾಜ್ಯ ಕುರಿ ಅಭಿವೃದ್ಧಿ ಮಂಡಳಿ ಸದಸ್ಯ ಅಫ್ಜಲ್,ರಹಮತ್, ದಶರತ್, ಜಯಣ್ಣ ,ರಾಮಚಂದ್ರಯ್ಯ,ಕರಿಯಣ್ಣ,ಮಂಜುನಾಥ್,ಕೆಂಚಪ್ಪ ಮಧು ಇತರರು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ