ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮಾಜಿ ಶಾಸಕರ ಭರವಸೆ :ಪ್ರತಿಭಟನೆ ಹಿಂತೆಗೆದುಕೊಂಡ ಕೆರೆ ಅಂಗಳದ ನಿರಾಶ್ರಿತರು

ಮಾಜಿ ಶಾಸಕರ ಭರವಸೆ :ಪ್ರತಿಭಟನೆ ಹಿಂತೆಗೆದುಕೊಂಡ ನಿರಾಶ್ರಿತರು ----------------------- ನಿರಾಶ್ರಿತರಿಗೆ ಸ್ಪಂದಿಸಿದ ತಹಸಿಲ್ದಾರ್ -------------------------- ನಿರಾಶ್ರಿತರಿಗಾಗಿ ಗಂಜಿ ಕೇಂದ್ರ ತೆರೆದ ತಾಲೂಕು ಆಡಳಿತ ----------------- ಹುಳಿಯಾರು:ಹುಳಿಯರು ಅಮಾನಿಕೆರೆ ದಡದಲ್ಲಿ ಕಳೆದ ಮೂರ್ನಾಲ್ಕು ದಶಕಗಳಿಂದಗಳಿಂದಲೂ ವಾಸವಿರುವ ಅಲೆಮಾರಿ ನಿರ್ಗತಿಕ ನಿವಾಸಿಗಳ ಗುಡಿಸಿಲುಗಳು ಇದೀಗ ಕೆರೆ ತುಂಬುತ್ತಿರುವ ಹಿನ್ನೆಲೆಯಲ್ಲಿ ಜಲಾವೃತಗೊಳ್ಳುತ್ತಿದ್ದು 120ಕ್ಕೂ ಹೆಚ್ಚು ಕುಟುಂಬಗಳು ಬೀದಿ ಪಾಲಾಗಲಿದ್ದು ತಮಗೆ ಶಾಶ್ವತ ಪುನರ್ ವಸತಿ ಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಕಳೆದ ಎರಡು ದಿನಗಳಿಂದಲೂ ಪಟ್ಟಣ ಪಂಚಾಯ್ತಿ ಕಛೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದು ,ಇಂದು ಶುಕ್ರವಾರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ತಹಸಿಲ್ದಾರ್ ಅವರೊಂದಿಗೆ ಚರ್ಚಿಸಿ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಅಂತ್ಯಗೊಂಡಿತು. ಹುಳಿಯಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಶಂಕರಾಪುರ ಬಡಾವಣೆಯಲ್ಲಿನ ಅಮಾನಿಕೆರೆ ಅಂಗಳದಲ್ಲಿ ಅಲೆಮಾರಿಗಳು,ಹಕ್ಕಿಪಿಕ್ಕಿ ಜನಾಂಗದವರು,ನಿರ್ಗತಿಕರು,ಕೂಲಿ ಕಾರ್ಮಿಕರು, ಅಲ್ಪಸಂಖ್ಯಾತರು, ಕಡುಬಡವರು ಕಳೆದ 30-40 ವರ್ಷಗಳಿಂದಲೂ ಜೋಪಡಿ ಕಟ್ಟಿಕೊಂಡು ವಾಸಿಸುತ್ತಿದ್ದು, ಇದೀಗ ಕೆರೆ ತುಂಬುತ್ತಿರುವ ಹಿನ್...

ಹುಳಿಯಾರು ಅಮಾನಿಕೆರೆಯಲ್ಲಿರುವ ಅಲೆಮಾರಿ ನಿರ್ಗತಿಕರಿಗೆ ತುರ್ತು ಶಾಶ್ವತ ವಸತಿ ಕಲ್ಪಿಸಿ ಕೆರೆ ಅಂಗಳದಿಂದ ತೆರವುಗೊಳಿಸಿ ಜೀವ ಕಾಪಾಡುವಂತೆ ಮನವಿ

  🖋🖊ವರದಿ : ಮಲ್ಲಿಕಾರ್ಜುನ ಭಟ್ಟರಹಳ್ಳಿ. ತುಮಕೂರು ಜಿಲ್ಲೆˌಚಿಕ್ಕನಾಯಕನಹಳ್ಳಿ ತಾಲ್ಲೂಕ್ ಹುಳಿಯಾರು ಪಟ್ಟಣಪಂಚಾಯ್ತಿಗೆ ಹೊಂದಿಕೊಂಡಿರುವ ಸಣ್ಣನೀರಾವರಿ ಇಲಾಖೆಯ ನಿರ್ವಹಣೆಯಲ್ಲಿರುವ ಹುಳಿಯಾರು ಅಮಾನಿಕೆರೆಗೆ ಈ ಭಾಗದಲ್ಲಿ ವ್ಶಾಪಕ ಮಳೆಯಾಗುತ್ತಿರುವುದರಿಂದ ಯಥೇಚ್ಛ ನೀರು ಹರಿದುಬರುತ್ತಿದ್ದು ಸಂತಸದ ಜೊತೆಗೆ ಅಧಿಕಾರಿಗಳ ನಿರ್ಲಕ್ಷ್ಯದ ಕಾರಣದಿಂದಾಗಿ ಆತಂಕಕ್ಕೂ ಕಾರಣವಾಗಿದೆ ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಅಧ್ಯಕ್ಷ ಭಟ್ಟರಹಳ್ಳಿ ಮಲ್ಲಿಕಾರ್ಜುನ್ ದೂರಿದ್ದಾರೆ . ಈ ಬಗ್ಗೆ ಸರ್ಕಾರದ ಎಲ್ಲಾ ಅಧಿಕಾರಿಗಳಿಗೂ ದೂರು ಸಲ್ಲಿಸಿರುವ ಅವರು ಸಮಸ್ಯೆ ಬಗ್ಗೆ ವಿವರಣೆ ನೀಡಿದ್ದಾರೆ. ಸಾರಾಂಶ : ಮೇಲ್ಕಂಡ ಕೆರೆಯಂಗಳದಲ್ಲಿ ಹಲವಾರು ವರ್ಷಗಳಿಂದ ಸುಮಾರು 50ಕ್ಕೂ ಹೆಚ್ಚು ನಿರ್ಗತಿಕ ಅಲೆಮಾರಿ ಕುಟುಂಬಗಳು ಗುಡಿಸಲು ಹಾಕಿಕೊಂಡು ಬದುಕುತ್ತಿದ್ದಾರೆ. ತಾವೂ ಸಹ ಎಲ್ಲರಂತೆ ಗೌರವದಿಂದ ಬದುಕಲು ಸರ್ಕಾರ ಮೂಲಭೂತ(ನಿವೇಶನˌಮನೆˌವ್ಶವಸಾಯಕ್ಕಾಗಿ ಭೂಮಿ) ಅವಶ್ಶಕತೆಗಳನ್ನು ಕಲ್ಪಿಸಿಕೊಂಡಬೇಕೆಂದು ಹಲವಾರು ವರ್ಷಗಳಿಂದ ನಿರಂತರ ಧ್ವನಿ ಎತ್ತಿ ಅಹೋರಾತ್ರಿ ಧರಣಿ ಸೇರಿದಂತೆ ಸಂವಿಧಾನಿಕ ಹಕ್ಕುಗಳಿಗಾಗಿ ಶಾಂತಿಯಿಂದ ಎಲ್ಲಾ ರೀತಿಯ ಪ್ರತಿಭಟನೆ ˌಮನವಿ ಸಲ್ಲಿಸಿದ್ದಾರೆ. ಹುಳಿಯಾರಿನ ಧರಣಿ ಸ್ಥಳಕ್ಕೆ ಅಂದಿನ ಜಿಲ್ಲಾಧಿಕಾರಿ ಮತ್ತು ಹಾಲೀ ರಾಜ್ಶ ಸಮಾಜಕಲ್ಶಾಣ ಇಲಾಖೆ ಆಯುಕ್ತರಾದ ಡಾ.ರಾಕೇಶ್ ಕುಮಾರ್ ಒಂದು ತಿಂಗಳೊಳಗೆ ಸೂಕ್...

ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ 'ಕೈಗಾರಿಕಾ ಭೇಟಿ

ಹುಳಿಯಾರು-ಕೆಂಕೆರೆಯ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಬಿಕಾಂ ವಿದ್ಯಾರ್ಥಿಗಳಿಗೆ 'ಕೈಗಾರಿಕಾ  ಭೇಟಿ'  ಕಾರ್ಯಕ್ರಮವನ್ನು ದಿನಾಂಕ 23-08-2022 ರಂದು ಹಮ್ಮಿಕೊಳ್ಳಲಾಗಿತ್ತು. ಹುಳಿಯಾರಿನ ಕೇಶವಾಪುರದ ಟಿ.ಎಸ್.ರಂಗನಾಥ ಆಂಡ್ ಕಂಪನಿಯ ಕಲ್ಪತರು ಬ್ರಿಕ್ಸ್ ಅಂಡ್ ಟೈಲ್ಸ್ ಗೆ ಭೇಟಿ ನೀಡಲಾಯಿತು.              ಸುಮಾರು ಐದು ಎಕರೆ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೈಗಾರಿಕೆಗೆ ಭೇಟಿ ನೀಡಿದ ವಿದ್ಯಾರ್ಥಿಗಳು ಇಲ್ಲಿನ ಇಟ್ಟಿಗೆ ಹೆಂಚು ಮತ್ತು ಟೈಲ್ಸ್ ಇವುಗಳ ಉತ್ಪಾದನಾ ಪ್ರಕ್ರಿಯೆ,ಅಗತ್ಯವಾದ ಕಚ್ಚಾ ವಸ್ತುಗಳು, ಅವುಗಳ ನಿರ್ವಹಣೆ,ದಾಸ್ತಾನು, ಮಾರಾಟ, ಒಟ್ಟು ಉತ್ಪಾದನಾ ವೆಚ್ಚ,ಯಂತ್ರೋಪಕರಣಗಳ ನಿರ್ವಹಣೆ,ಕಾರ್ಮಿಕರು ಹಾಗೂ ಅವರಿಗಿರುವ ಸೌಲಭ್ಯಗಳ ಕುರಿತು ವಿವರವಾದ ಮಾಹಿತಿಯನ್ನು ಪಡೆದುಕೊಂಡರು. ನಂತರ ಸೌರ ಶಕ್ತಿ ಸ್ಥಾವರಕ್ಕೆ ಭೇಟಿ ನೀಡಲಾಯಿತು . ಆ ಸಂಸ್ಥೆಯ ವ್ಯವಸ್ಥಾಪಕರಾದ ಶ್ರೀ ಗಿರೀಶ್ ಅವರು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಕಲ್ಪತರು ಬ್ರಿಕ್ಸ್ ಅಂಡ್ ಟೈಲ್ಸ್ ಸಂಸ್ಥೆಯ ಮುಖ್ಯಸ್ಥರು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಪರವಾಗಿ ಕೃತಜ್ಞತೆ ಸಲ್ಲಿಸಲಾಯಿತು. ಕೈಗಾರಿಕಾ ಭೇಟಿಯ ಪೂರ್ವಭಾವಿ ಮಾಹಿತಿ ಸಭೆ : ಕೈಗಾ...

ಹರ್ ಘರ್ ಜಲೋತ್ಸವ ಅಭಿಯಾನದಡಿ ಚಿಕ್ಕಬಿದರೆ ಗ್ರಾಮವನ್ನು ಹರ್ ಘರ್ ಜಲ್ ಗ್ರಾಮವಾಗಿ ಘೋಷಣೆ

ಹುಳಿಯಾರು:ಚಿಕ್ಕನಾಯಕನಹಳ್ಳಿ ತಾಲೂಕಿನ ದೊಡ್ಡಬಿದರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕಬಿದರೆ ಗ್ರಾಮವನ್ನು ಜಲ ಜೀವನ್ ಮಿಷನ್ ಯೋಜನೆಯಡಿ ಹರ್ ಘರ್ ಜಲ್ ಗ್ರಾಮವಾಗಿ ಘೋಷಣೆ ಮಾಡಲಾಯಿತು. ಜಲ ಜೀವನ್ ಮಿಷನ್ ಯೋಜನೆಯಡಿ ಜಿಲ್ಲಾ ಪಂಚಾಯತ್ ತುಮಕೂರು , ಜಿಲ್ಲಾ  ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ತುಮಕೂರು , ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಚಿಕ್ಕನಾಯಕನಹಳ್ಳಿ, ಸ್ನೇಹ ಜೀವನ ಸಂಸ್ಥೆಯ ಸಹಯೋಗದೊಂದಿಗೆ, ಹುಳಿಯಾರು ಹೋಬಳಿ ಚಿಕ್ಕಬಿದರೆ ಗ್ರಾಮದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ  ದೊಡ್ಡಬಿದರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕಬಿದರೆ ಗ್ರಾಮವನ್ನು ಹರ್ ಘರ್ ಜಲ್ ಗ್ರಾಮವಾಗಿ ಘೋಷಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಾನೂನು ಸಂಸದೀಯ ಶಾಸನ ರಚನಾ ಹಾಗೂ ಸಣ್ಣ ನೀರಾವರಿ ಸಚಿವರಾದ ಜೆ.ಸಿ.ಮಾಧುಸ್ವಾಮಿಯವರು ಮಾತನಾಡಿ ಜಲಜೀವನ್ ಮಿಷನ್ ಯೋಜನೆ ಪ್ರಧಾನಮಂತ್ರಿಗಳ ಮಹತ್ತರ ಯೋಜನೆಯಾಗಿದ್ದು ಪ್ರತೀ ಮನೆ ಮನೆಗೆ ಕಾರ್ಯಾತ್ಮಕ ನಳ ಸಂಪರ್ಕ ಮಾಡಬೇಕು ಹಾಗೂ ಯಾವ ಹಳ್ಳಿಗಳಲ್ಲಿ ಓವರ್ ಹೆಡ್ ಟ್ಯಾಂಕ್ ಇಲ್ಲ ಅಲ್ಲಿ ಟ್ಯಾಂಕ್ ನಿರ್ಮಾಣ ಮಾಡಬೇಕು ಹಾಗೂ ಕುಡಿಯಲು ಯೋಗ್ಯವಾದ ನೀರನ್ನು ಕೊಡಬೇಕು ಎಂಬ ಉದ್ದೇಶ ಆಗಿದ್ದು ಚಿಕ್ಕನಾಯಕನಹಳ್ಳಿ ತಾಲ್ಲೋಕಿನಲ್ಲಿ ದೊಡ್ಡಬಿದರೆ ಪಂಚಾಯತಿ ಚಿಕ್ಕಬಿದರೆ ಗ್ರಾಮದಲ್ಲಿ ಈ ಯೋಜನೆ ಪೂರ್ಣಗೊಂಡಿದ್ದು ಎಲ್ಲಾ ಮನೆಗಳಿಗೆ ನಲ್ಲಿ ಕಲ್ಪಿಸಲಾಗಿದೆ.ಇನ್ನು ಜನ...

ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಹರ್ ಘರ್ ತಿರಂಗ ಅಭಿಯಾನಕ್ಕೆ ಚಾಲನೆ

ಹುಳಿಯಾರು:75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವದ ಅಂಗವಾಗಿ ಹುಳಿಯಾರು ಹಾಗೂ ಚಿಕ್ಕನಾಯಕನಹಳ್ಳಿಯ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಾವುಟವನ್ನು ವಿತರಿಸುವುದರ ಮೂಲಕ ಹರ್ ಘರ್ ತಿರಂಗ ಅಭಿಯಾನಕ್ಕೆ ಸಂಸ್ಥೆಯ ಅಧ್ಯಕ್ಷರು ಮತ್ತು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಲಿ ಅಧ್ಯಕ್ಷರು ಹಾಗೂ ಮಾಜಿ ಶಾಸಕರು ಆದ ಕೆ.ಎಸ್. ಕಿರಣ್ ಕುಮಾರ್ ಚಾಲನೆ ನೀಡಿದರು. ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಕವಿತಾ ಕಿರಣ್ ಕುಮಾರ್ ಮಾತನಾಡಿ ಜನರಲ್ಲಿ ಸ್ವಾತಂತ್ರ್ಯ ಹಾಗೂ ದೇಶಾಭಿಮಾನ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಧಾನಿಯವರ ಆಶಯದಂತೆ ಹರ್ ಘರ್ ತಿರಂಗ ಅಭಿಯಾನ ಆರಂಭಿಸಲಾಗಿದೆ. ಈ ನಿಟ್ಟಿನಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಮನೆಮನೆಯಲ್ಲೂ ಹಾರಿಸಲು ಬಾವುಟವನ್ನು ವಿತರಿಸಲಾಗಿದ್ದು ಪ್ರತಿಯೊಬ್ಬರು ನಾಳೆ ಆ.13ರಿಂದ ಆ.15ವರೆಗೆ ಮೂರು ದಿನಗಳ ಕಾಲ ಬಾವುಟವನ್ನು ಹಾರಿಸುವುದರ ಮೂಲಕ ಅಭಿಯಾನ ಯಶಸ್ವಿಗೊಳಿಸುವಂತೆ ಕರೆನೀಡಿದರು. ಈ ವೇಳೆ ವಿದ್ಯಾಸಂಸ್ಥೆಯ ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕರು ಹಾಜರಿದ್ದರು.

ಎನ್.ಎಸ್.ಎಸ್.ಶಿಬಿರದಲ್ಲಿ ಯೋಗ ತರಬೇತಿ

ಹುಳಿಯಾರಿನ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕ-೧ ಮತ್ತು ೨ರ ವತಿಯಿಂದ ಗುರುವಾಪುರ ಗ್ರಾಮದಲ್ಲಿ ಹಮ್ಮಿಕೊಂಡಿರುವ  ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದಲ್ಲಿ ಯೋಗ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು.  ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ,ತುಮಕೂರು, ಹುಳಿಯಾರು ಮತ್ತು ಕೆಂಕೆರೆ ಶಾಖೆ ಇಲ್ಲಿನ ಸಿಬ್ಬಂದಿಗಳಾದ ಶ್ರೀ ದುರ್ಗರಾಜ್ ಮತ್ತು ಶ್ರೀ ರವಿ ಇವರ ತಂಡ ಶಿಬಿರಾರ್ಥಿಗಳಿಗೆ ಮತ್ತು ಗ್ರಾಮಸ್ಥರಿಗೆ ಯೋಗ ತರಬೇತಿಯನ್ನು ನೀಡಿದರು .  ಈ ಸಂದರ್ಭದಲ್ಲಿ ಸೂರ್ಯ ನಮಸ್ಕಾರ ಸೇರಿದಂತೆ‌ ಯೋಗದ ವಿವಿಧ ಆಸನಗಳನ್ನು ಪರಿಚಯ ಮಾಡಿಕೊಟ್ಟರು.  ಶಿಬಿರಾಧಿಕಾರಿಗಳಾದ ಡಾ.ಮೋಹನ್ ಕುಮಾರ್ ಮಿರ್ಲೆ ಮತ್ತು ಡಾ. ಜಯಶ್ರೀ ಬಿ. ಕದ್ರಿ ಹಾಗೂ ಸಹ ಶಿಬಿರಾಧಿಕಾರಿಗಳಾದ ಶ್ರೀ ಸೋಮಶೇಖರಪ್ಪ ಎಂ., ಶ್ರೀ ಕುಮಾರಸ್ವಾಮಿ ಕೆ.ಸಿ. ಮತ್ತು ಶ್ರೀ ಶಂಕರ್ ಕೆ.ಎಂ. ಈ ಕಾರ್ಯಕ್ರಮದ ನೇತೃತ್ವವನ್ನು ವಹಿಸಿಕೊಂಡಿದ್ದರು.

ಹುಳಿಯಾರಿನಲ್ಲಿ ಇಂದು ಪ್ರತಿಭಟನೆ

ಹುಳಿಯಾರು ಪಟ್ಟಣದ BH ರಸ್ತೆಯ ಅಕ್ಕಪಕ್ಕದಲ್ಲಿ, ಹೊಸದಾಗಿ ಹೆದ್ದಾರಿ ನಿರ್ಮಾಣ ಮಾಡಿರುವ ಸಮಯದಲ್ಲಿ ಒಳಚರಂಡಿಗಳ ಮೇಲ್ಬಾಗದಲ್ಲಿ  ಸ್ಲಾಬ್ ಹಾಕದಿರುವುದು, ಅವೈಜ್ಞಾನಿಕ ಚರಂಡಿಗಳ ನಿರ್ಮಾಣದಿಂದಾಗಿ ಕೊಳಚೆ ನೀರು ಸರಿಯಾಗಿ ಹರಿಯದೆ, ಕೊಳಚೆ ನೀರು ನಿಂತು ಸೊಳ್ಳೆಗಳು ಹೆಚ್ಚಾಗಿ ರೋಗ ರುಜಿನಗಳು ಹೆಚ್ಚಾಗಲು ಕಾರಣವಾಗಿರುವುದು, ಸ್ವಚ್ಚತಾ ಕಾರ್ಯ ಸಮರ್ಪಕವಾಗಿ ನಡೆಯದಿರುವುದು....‌ ಹೀಗೆ ಹತ್ತು ಹಲವಾರು ಸಮಸ್ಯೆಗಳನ್ನು ಸರಿಪಡಿಸುವಂತೆ  ಸರಿಪಡಿಸುವಂತೆ ಒತ್ತಾಯಿಸಿ ಹುಳಿಯಾರು ಪಟ್ಟಣದಲ್ಲಿ 10-8-22  ಬುಧವಾರ ಬೆಳಿಗ್ಗೆ 11.30ಕ್ಕೆ ಹುಳಿಯಾರಿನ ರಾಂಗೋಪಾಲ್ ವೃತ್ತದಲ್ಲಿ ರೈತಸಂಘ, ಕನ್ನಡ ಪರಸಂಘಟನೆಗಳು, ಮಹಿಳಾ ಸಂಘಟನೆಗಳು, ನಾನಾ ಸಂಘಸಂಸ್ಥೆಗಳ ಹಾಗೂ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರ ಸಹಯೋಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ  ಭಾಗವಹಿಸುವಂತೆ, ಪ್ರತಿಭಟನಾಕಾರರ ಪರವಾಗಿ ರಾಜ್ಯರೈತಸಂಘದ ಅಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಹಾಗೂ ಹುಳಿಯಾರು ಜಿ.ಪಂ.ಮಾಜಿ ಸದಸ್ಯ ವೈಸಿ ಸಿದ್ದರಾಮಯ್ಯ‌ ಮನವಿ ಮಾಡಿದ್ದಾರೆ.