ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಎಲ್ಲಾ ಧರ್ಮಿಯರ ಮಧ್ಯೆ ಸೇತುವ ಕಟ್ಟುವ ಕೆಲಸವಾಗಬೇಕು:ಪ್ರೊ.ಕೆ.ಎಸ್.ನಿಸಾರ್ ಅಹ್ಮದ್

: ಹುಳಿಯಾರಿನ ಟಿಪ್ಪುಸುಲ್ತಾನ್ ಸಂಘದ ಸದಸ್ಯರೊಂದಿಗೆ ಕವಿ ಕೆ.ಎಸ್.ನಿಸಾರ್ ಅಹಮದ್ ಹಾಗೂ ರಂಗಭೂಮಿ ಕಲಾವಿದರಾದ ಮಾಸ್ಟರ್ ಹಿರಣಯ್ಯ ಕನ್ನಡ ನೆಲದಲ್ಲಿರುವ ಎಲ್ಲಾ ಧರ್ಮಿಯರು ಕನ್ನಡಿಗರು.ಇವರುಗಳನ್ನು ಹಿಂದೂ, ಮುಸ್ಲಿಮ್,ಕ್ರಿಶ್ಚಿಯನ್ ಹೀಗೆ ಅನೇಕ ಧರ್ಮಗಳ ಹೆಸರಿನಲ್ಲಿ ಪ್ರತ್ಯೇಕವಾಗಿ ನೋಡುವುದನ್ನು ಕೈ ಬಿಟ್ಟು ಎಲ್ಲಾ ಧರ್ಮ ಧರ್ಮಗಳ ಮಧ್ಯೆ ಸೇತುವೆ ಕಟ್ಟುವ ಕಾರ್ಯ ಮಾಡಬೇಕು, ಹೃದಯಗಳನ್ನು, ಮನಸ್ಸುಗಳನ್ನು ಕಟ್ಟುವ ಪ್ರಯತ್ನ ಮಾಡಬೇಕು ಎಂದು ನಿತ್ಯೋತ್ಸವ ಕವಿ ನಾಡೋಜ ಪ್ರೊ.ಕೆ.ಎಸ್.ನಿಸಾರ್ ಅಹ್ಮದ್ ಅಭಿಪ್ರಾಯಪಟ್ಟರು ಹುಳಿಯಾರಿನ ಟಿಪ್ಪುಸುಲ್ತಾನ್ ಸಂಘದ ಆತಿಥ್ಯ ಸ್ವೀಕರಿಸಿ ಸದಸ್ಯರುಗಳನ್ನು ಉದ್ದೇಶಿಸಿ ಮಾತನಾಡಿದ ಡಾ.ಕೆ.ಎಸ್.ನಿಸಾರ್ ಅಹ್ಮದ್ ಸಮನ್ವಯ,ಸಾಮರಸ್ಯ,ಸೌಹಾದ೯ತೆ,ಧಮ೯ಸಹಿಷ್ಣುತೆ ಕನ್ನಡಿಗರ ಹುಟ್ಟುಗುಣವಾಗಿದ್ದು, ಟಿಪ್ಪುಸಂಘಟನೆಯವರು ಇಲ್ಲಿನ ಎಲ್ಲಾ ಸಂಘಸಂಸ್ಥೆಗಳೊಂದಿಗೆ ಒಟ್ಟಾಗಿ ಜನಪರವಾಗಿ ಕಾಯ೯ನಿವ೯ಹಿಸಿ, ಜನರ ಮನಸ್ಸಿನಲ್ಲಿ ಚಿರವಾಗಿ ನೆಲೆಸಬೇಕು ಎಂದರು. ಕೆಲವೇ ಮಂದಿಯ ಸ್ವಾರ್ಥದಿಂದ ಮುಸ್ಲಿಂಮರ ಬಗ್ಗೆ ಜನಮಾನಸದಲ್ಲಿ ಇಸ್ಲಾಂ ಧರ್ಮದ ಬಗ್ಗೆ ಅಪಾರ್ಥಕ್ಕೆಡೆಮಾಡಿಕೊಟ್ಟಿದೆ.ಇದಕ್ಕೆ ಹೊರಗಿನವರು ಕಾರಣರಲ್ಲ ಮುಸ್ಲಿಮರ ಒಳಗಿನ ಒಳಸುಳಿಗಳೇ ಕಾರಣ.ಉಳಿದ ಧರ್ಮಗಳಷ್ಟೆ ಶ್ರೇಷ್ಠ ಉದಾತ್ತ ಧ್ಯೇಯಗಳನ್ನು ಹೊಂದಿರುವ ಇಸ್ಲಾಂ ಧರ್ಮದ ಬಗ್ಗೆ ಎಲ್ಲರಲ್ಲೂ ಅಪನಂಬಿಕೆ ಹೆಚ್ಚುತ್ತಿದೆತ್ತಿದೆ.ಯುವಜನತೆ ಈ ಬಗ್ಗ

ಕನ್ನಡನಾಡಲ್ಲಿ ಕನ್ನಡಿಗರಿಗಾಗಿ ಶೋಧ :ಮಾಸ್ಟರ್ ಹಿರಣ್ಣಯ್ಯ ಕಳವಳ

ಇಂಗ್ಲೀಷು,ತಮಿಳು,ತೆಲುಗು ಸೇರಿದಂತೆ ಅನೇಕ ಅನ್ಯ ಭಾಷೆಗಳ ಮಧ್ಯೆ ಇಂದು ನಮ್ಮ ಕನ್ನಡಭಾಷೆ ನಲುಗಿ ಹೋಗಿ ಕರ್ನಾಟಕದಲ್ಲೇ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ ನಗರಪ್ರದೇಶಗಳಲ್ಲಿ ಸೃಷ್ಥಿಯಾಗಿದೆ .ಪರಭಾಷಾ ವ್ಯಾಮೋಹದಿಂದಾಗಿ ಕನ್ನಡನಾಡಲ್ಲಿ ಕನ್ನಡ ಮಾತನಾಡುವ ಕನ್ನಡಿಗರಿಗಾಗಿ ಶೋಧ ಕಾರ್ಯ ನಡೆಸುವಂತಾಗಿದೆ. ಕನ್ನಡ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ ಎಂದರೆ ಅದು ಹೆಚ್ಚಿನದಾಗಿ ಗ್ರಾಮೀಣ ಭಾಗದಲ್ಲಿ ಮಾತ್ರ,ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಮೂಲಕ ಕರ್ನಾಟಕದಲ್ಲಿ ಕನ್ನಡ ಭಾಷೆಯ ನೆಲೆಯನ್ನು ಭದ್ರಗೊಳಿಸಲು ಎಲ್ಲರೂ ಕೈಜೋಡಿಸಬೇಕೆಂದು ಮಾಸ್ಟರ್ ಹಿರಣ್ಣಯ್ಯ ಕರೆ ನೀಡಿದರು. ಹುಳಿಯಾರಿನ ವಿವಿಧ ಸಂಘಟನೆಗಳ ಸದಸ್ಯರೊಂದಿಗೆ ಕವಿ ಕೆ.ಎಸ್.ನಿಸಾರ್ ಅಹಮದ್ ಹಾಗೂ ರಂಗಭೂಮಿ ಕಲಾವಿದರಾದ ಮಾಸ್ಟರ್ ಹಿರಣಯ್ಯ ಖ್ಯಾತ ಕವಿ ನಿಸಾರ್ ಅಹಮದ್ ಅವರೊಂದಿಗೆ ಹುಳಿಯಾರಿಗೆ ಆಗಮಿಸಿದ್ದ ಅವರು ಕನ್ನಡ ಸಾಹಿತ್ಯ ಪರಿಷತ್ ನ ಸಂಚಾಲಕರು ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರೊಂದಿಗೆ ತಮ್ಮ ಸಂತಸದ ಕ್ಷಣ ಹಂಚಿಕೊಂಡು ಮಾತನಾಡಿದರು. ಪ್ರೋ||ನಿಸಾರ್ ಅಹ್ಮದ್ ಮಾತನಾಡಿ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳ ಬದಲಿಗೆ ಹೋಬಳಿ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಲು ಹೊರಟಿರುವುದು ಉತ್ತಮ ಬೆಳವಣಿಗೆಯಾಗಿದೆ.ಈ ಸಮ್ಮೇಳನಗಳಲ್ಲಿ ಉದಯೋನ್ಮುಖ ಯುವ ಬರಹಗಾರರಿಗೆ ಅವಕಾಶ ಕಲ್ಪಿಸಿ ಅವರು ರಚಿಸಿರುವ ಸಾಹಿತ್ಯ ಕೃತಿಗ

ಪೋಟೊ ಕ್ಯಾಪ್ಷನ್

  ಹುಳಿಯಾರಿನ ಕರ್ನಾಟಕ ರಕ್ಷಣಾ ವೇದಿಕೆಯವರು ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹಮದ್ ಅವರಿಗೆ ನೆನೆಪಿನ ಕಾಣಿಕೆ ನೀಡಿ ಗೌರವಿಸಿದರು.  ಹುಳಿಯಾರಿಗೆ ಬುಧವಾರ ಆಗಮಿಸಿದ್ದ ರಂಗಭೂಮಿ ಕಲಾವಿದ ಮಾಸ್ಟರ್ ಹಿರಣ್ಣಯ್ಯ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆಯವರು ನೆನೆಪಿನ ಕಾಣಿಕೆ ನೀಡಿ ಗೌರವಿಸಿದರು.ಕರವೇ ಅಧ್ಯಕ್ಷ ಶ್ರೀನಿವಾಸ್ ಸೇರಿದಂತೆ ಕಾರ್ಯಕರ್ತರು ಇದ್ದಾರೆ. 

ಕಸಾಪ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸುವಂತೆ ನಿತ್ಯೋತ್ಸವ ಕವಿಗೆ ಮನವಿ

ಚಿಕ್ಕನಾಯಕನಹಳ್ಳಿ ತಾಲ್ಲೂಕು ಕನ್ನಡಸಾಹಿತ್ಯ ಪರಿಷತ್ ವತಿಯಿಂದ ತಾಲ್ಲೂಕಿನ ಪ್ರತಿ ಹೋಬಳಿಗಳಲ್ಲೂ ಕನ್ನಡ ಸಾಹಿತ್ಯ ಸಮ್ಮೇಳನನ ಸೇರಿದಂತೆ ಅನೇಕ ಸಾಂಸ್ಕೃತಿಕಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಲಾಗಿದ್ದು ,ಅಂತೆಯೇ ಹುಳಿಯಾರಿನಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸುವಂತೆ ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮದ್ ಅವರಿಗೆ ತಾಲ್ಲುಕು ಕಸಾಪದವರು ಮನವಿ ಮಾಡಿದರು. ಹುಳಿಯಾರಿನಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸುವಂತೆ ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮದ್ ಅವರಿಗೆ ತಾಲ್ಲುಕು ಕಸಾಪದವರು ಮನವಿ ಮಾಡಿದರು. ಹುಳಿಯಾರಿನಲ್ಲಿ ಪತ್ರಕರ್ತ ನರೇಂದ್ರ ಬಾಬು ಅವರ ಮನೆಗೆ ಆಗಮಿಸಿದ್ದ ಕೆ.ಎಸ್. ನಿಸಾರ್ ಅಹಮದ್ ಹಾಗೂ ಮಾಸ್ಟರ್ ಹಿರಣ್ಣಯ್ಯ ಅವರನ್ನು ಭೇಟಿ ಮಾಡಿದ ಚಿಕ್ಕನಾಯಕನಹಳ್ಳಿ ತಾಲ್ಲೂಕು ಕನ್ನಡಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ರವಿಕುಮಾರ್ ಹಾಗೂ ಸಂಚಾಲಕರು ಪರಿಷತ್ ನ ಉದ್ದೇಶಿತ ತಾಲ್ಲೂಕ್ ಮತ್ತು ಹೋಬಳಿ ಸಮ್ಮೇಳನದ ಕಾರ್ಯಕ್ರಮಗಳಲ್ಲದೆ ಕನ್ನಡ ಭವನ ನಿರ್ಮಾಣದ ಯೋಜನೆಗಳನ್ನು ವಿವರಿಸಿದರು, ತಾವುಗಳು ಆಗಮಿಸಿ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸುವಂತೆ ವಿನಂತಿಸಿದರು.ಇದೇ ಸಂದರ್ಭದಲ್ಲಿ ಈರ್ವರನ್ನು ಸನ್ಮಾನಿಸಲಾಯಿತು.ತಾಲ್ಲೂಕ್ ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್,ಬೆಳಗುಲಿ ಶಶಿಭೂಷಣ್,ಎಪಿಪಿ ಭಾಗ್ಯಲಕ್ಷ್ಮಿ,ಮಂಜುನಾಥ್ ಅರಸ್,ಪತ್ರಕರ್ತ ಕಿರಣ್ ಕುಮಾರ್,ಹೆಚ್.ಎ.ರಮೇಶ್,ಶ

ಕರ್ನಾಟಕದ ಪ್ರತಿಯೊಬ್ಬರಲ್ಲೂ ನಾವೆಲ್ಲಾ ಒಂದೇ ಎಂಬ ಭಾವನೆ ಮೂಡಬೇಕು: ಮಾಜಿ ಶಾಸಕ ಕೆ.ಎಸ್.ಕೆ.

 ಹುಳಿಯಾರು ಹೋಬಳಿ ಕರ್ನಾಟಕ ರಕ್ಷಣಾ ವೇದಿಕೆಯವರು ಬುಧವಾರ ಸಂಜೆ ಎಂಪಿಎಸ್ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ 57ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿರುವ ಮಾಜಿಶಾಸಕ ಕೆ.ಎಸ್.ಕಿರಣ್ ಕುಮಾರ್, ರೈತಸಂಘದ ಕೆಂಕೆರೆ ಸತೀಶ್,ತಾಪಂ ಸದಸ್ಯ ನವೀನ್  ಕರ್ನಾಟಕ ರಾಜ್ಯದಲ್ಲಿರುವ ಪ್ರತಿಯೊಬ್ಬರು ಕನ್ನಡ ನಮ್ಮ ಮಾತೃಭಾಷೆ,ಅದನ್ನು ಪೋಷಿಸಿ,ಬೆಳೆಸಬೇಕು ಹಾಗೂ ನಮ್ಮಲ್ಲಿಯೇ ಸ್ಥಳೀಯ ಸಮಸ್ಯೆಗಳನ್ನೇ ದೊಡ್ಡದು ಮಾಡಿ ನೆರೆಹೊರೆ ರಾಜ್ಯದವರು ಬೆರಳಿಟ್ಟು ತೋರಿಸುವಂತೆ ಮಾಡದೇ ಕನ್ನಡ ನಾಡಿನ ಪ್ರಜೆಗಳೆಲ್ಲಾ ಒಂದೇ ಭಾವನೆ ನಮ್ಮಲ್ಲಿ ಮೂಡಲಿ ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ತಿಳಿಸಿದರು. ಹುಳಿಯಾರು ಹೋಬಳಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಮಹಿಳಾ ಕರವೇ ಘಟಕ,ಹೋಬಳಿಯ ಕನ್ನಡಪರ ಸಂಘಟನೆಗಳ ಸಹಯೋಗದೊಂದಿಗೆ ಬುಧವಾರ ಸಂಜೆ ಎಂಪಿಎಸ್ ಶಾಲಾ ಮೈದಾನದಲ್ಲಿ ನಡೆದ 57ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯೋತ್ಸವವನ್ನು ನವಂಬರ್ ಒಂದರಿಂದ ತಿಂಗಳಾಂತ್ಯದವರೆಗೆ ಅನೇಕ ಕನ್ನಡಪರ ಸಂಘಟನೆಯವರು ಆಚರಿಸುತ್ತಾರೆ ಇದರಿಂದ ಕನ್ನಡಭಾಷೆಯ ಸ್ಥಾನ ಎಂತಹದ್ದು ಎಂಬುದು ತಿಳಿಯುತ್ತದೆ.ಕರ್ನಾಟಕಕ್ಕೆ ಇಂದು ನೆರಹೊರೆಯ ರಾಜ್ಯಗಳ ಹಾವಳಿ ಹೆಚ್ಚಿ, ಗಡಿ ಭಾಗಗಳಲ್ಲಿ ಅನೇಕ ಸಮಸ್ಯೆ ಉಲ್ಭಣವಾಗುತ್ತಿವೆ,ಇದನ್ನು ನಾವು ಮಾಧ್ಯಮಗಳ ಮೂಲಕ ತಿಳಿಯುತ್ತೇವೆ .ಆದರೆ ಅಲ್ಲಿನ ಜನ ಅನುಭವಿಸುವಂತಹ ತೊಂದರೆಗ

ನಿತ್ಯೋತ್ಸವ ಕವಿಯ ಭೇಟಿ ಶಾಲಾ ಮಕ್ಕಳಲ್ಲಿ ಹರುಷ

ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲಾ ವಿಭಾಗಕ್ಕೆ ಬುಧವಾರದಂದು ಭೇಟಿ ನೀಡಿದ ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹಮದ್ ಮಾತನಾಡಿದರು.ರಂಗಭೂಮಿ ಕಲಾವಿದರಾದ ಮಾಸ್ಟರ್ ಹಿರಣಯ್ಯ ,ಉಪಪ್ರಾಂಶುಪಾಲರಾದ ಇಂದಿರಾ ಇದ್ದಾರೆ. ಹೋಬಳಿ ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲಾ ವಿಭಾಗಕ್ಕೆ ಬುಧವಾರದಂದು ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹಮದ್ ಹಾಗೂ ರಂಗಭೂಮಿ ಕಲಾವಿದರಾದ ಮಾಸ್ಟರ್ ಹಿರಣಯ್ಯ ಅವರು ಭೇಟಿ ನೀಡಿದ್ದು ಶಾಲಾ ಮಕ್ಕಳಲ್ಲಿ ಹರುಷವನ್ನುಂಟು ಮಾಡಿತ್ತು. ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹಮದ್ ಮಾತನಾಡಿ ಮಕ್ಕಳ ಮನಸ್ಸೆಂಬುದು ಮುಗ್ದತೆಯಿಂದ ಕೂಡಿರುವ ಹೂವಿನಂತಹದ್ದು,ಅದನ್ನು ಯಾವರೀತಿಗೆ ಬೇಕಾದರೂ ಬಾಗಿಸಬಹುದಾಗಿದೆ. ಈಗಿನಿಂದಲೇ ಮಕ್ಕಳು ತಮಗೆ ಸಿಗುವಂತಹ ಉತ್ತಮ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಬೆಳೆಯಿರಿ.ಕಠಿಣ ಪರಿಶ್ರಮವಿದ್ದರೆ ಜಯ ಶತಸಿದ್ದ ಚೆನ್ನಾಗಿ ಓದಿ ಉತ್ತಮ ಅಂಕಗಳನ್ನು ಗಳಿಸಿ ತಂದೆ-ತಾಯಿ ಹಾಗೂ ಶಾಲೆಗೆ ಹೆಸರು ತಂದು ಕೊಡಿ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು. ರಂಗಭೂಮಿ ಕಲಾವಿದರಾದ ಮಾಸ್ಟರ್ ಹಿರಣಯ್ಯ ಮಾತನಾಡಿ, ಇಂದು ಅನೇಕರು ಉತ್ತಮ ಸ್ಥಾನಕ್ಕೆ ಬಂದರೆ ಸಾಕು ಹಿಂದೆ ತಾವಿದ್ದ ಸ್ಥಿತಿಯನ್ನು ಮರೆಯುತ್ತಾರೆ.ಆದರೆ ಅದನ್ನು ಮರೆತರೆ ನಮ್ಮನ್ನು ನಾವೇ ಮರೆತಂತೆ ಎಂದರು.ಜ್ಞಾನ,ವಿದ್ಯೆಯಲ್ಲಿ ಮುಂದೆ ಮುಂದೆ ಹೋಗುತ್ತಾ ಇತರರೊಂದಿಗೆ ಯಾವರೀತಿ ಬೆರೆಯ ಬೇಕೆಂಬುದನ್ನು ಕಲಿಯುತ್ತಾ ಸಾಗಿ ಉತ್ತಮ ಪ್ರ

ಕನ್ನಡನಾಡಿನ ನೆಲ,ನುಡಿಯ ಋಣವನ್ನು ಪ್ರತಿಯೊಬ್ಬರು ತೀರಿಸಬೇಕಿದೆ : ಮಾಧುಸ್ವಾಮಿ

ಕರ್ನಾಟಕದಲ್ಲಿ ಜನಿಸಿರುವಂತಹ ಕನ್ನಡಾಂಬೆಯ ಮಕ್ಕಳಾದ ಪ್ರತಿಯೊಬ್ಬ ಪ್ರಜೆಯೂ ಕನ್ನಡನಾಡಿನ ನೆಲ,ನುಡಿ,ಜಲ,ಸಂಸ್ಕೃತಿಯನ್ನು ಪುಕ್ಕಟ್ಟೆಯಾಗಿ ಬಳಸಿಕೊಳ್ಳುತ್ತಿದ್ದೇವೆ ಅದರಂತೆಯೇ ಕನ್ನಡನಾಡಿನ ಬಗೆಗೆ ಗೌರವಹೊಂದಿ ಕನ್ನಡ ಭಾಷೆಗೆ ನೆಲ,ಜಲಕ್ಕೆ ಧಕ್ಕೆಯಾಗದಂತೆ ನಡೆದುಕೊಂಡು,ಕನ್ನಡನಾಡು ನಮ್ಮದು ಎಂಬ ಅಭಿಮಾನದಿಂದ ಕನ್ನಡ ನಾಡಿನ ಋಣವನ್ನು ತೀರಿಸಬೇಕಿದೆ ಮಾಜಿ ಶಾಸಕ ಜಿ.ಸಿ.ಮಾಧುಸ್ವಾಮಿ ತಿಳಿಸಿದರು.  ಹುಳಿಯಾರು ಹೋಬಳಿ ಕರ್ನಾಟಕ ರಕ್ಷಣಾ ವೇದಿಕೆಯವರು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಮಾಜಿ ಶಾಸಕ ಜಿ.ಸಿ.ಮಾಧುಸ್ವಾಮಿ ಉದ್ಘಾಟಿಸಿದರು. ತಾ.ಪಂ.ಸದಸ್ಯ ಜಯಣ್ಣ,ತಾ.ಪಂ.ಮಾಜಿ ಸದಸ್ಯ ಮಲ್ಲಿಕಾರ್ಜುನಯ್ಯ,ಮೆಡಿಕಲ್ ದೇವಣ್ಣ,ಗ್ರಾ.ಪಂ.ಸದಸ್ಯ ಬಡ್ಡಿ ಪುಟ್ಟರಾಜು,ಮಹಿಳಾ ಘಟಕದ ಅಧ್ಯಕ್ಷೆ ರತ್ನರಂಜನಿ ಇತರರು.             ಹುಳಿಯಾರು ಹೋಬಳಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಮಹಿಳಾ ಕರವೇ ಘಟಕ,ಹೋಬಳಿಯ ಕನ್ನಡಪರ ಸಂಘಟನೆಗಳ ಸಹಯೋಗದೊಂದಿಗೆ ಬುಧವಾರ ಬೆಳಿಗ್ಗೆ ನಡೆದ 57ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.                ಕರ್ನಾಟಕ ಏಕೀಕರಣಗೊಂಡು 57ವರ್ಷಗಳು ಕಳೆದಿದ್ದು ಅದರ ಆಚರಣೆ ಅಂದಿನಿಂದ ಇಂದಿನವರೆಗೂ ನಡೆಸಿಕೊಂಡು ಬಂದಿರುವುದು ಸಂತಸವನ್ನುಂಟುಮಾಡಿದೆ.ಇಂದು ನಾವು ಅಭಿವೃದ್ದಿಯಾಗದೇ ಬರಿ ನಮ್ಮ ರಕ್ಷಣೆಯಲ್ಲಿಯೇ ಸಾಗುತ್ತಿದ್ದೇವೆ,ಏಕೀಕರಣ ಸಂಧರ್ಭದಲ್ಲಿ ಅನೇಕ ವಿರೋಧ ವ್ಯಕ್ತವ

ಎಪಿಯಂಸಿ ಚುನಾವಣೆ ವಿಜಯೋತ್ಸವ

              ಇಲ್ಲಿನ ಎಪಿಯಂಸಿಗೆ ನಡೆದಿದ್ದ ಚುನಾವಣೆಯ ಫಲಿತಾಂಶ ಮಂಗಳವಾರದಂದು ಹೊರಬಿದಿದ್ದು ವ್ಯವಸಾಯಗಾರರ ಹುಳಿಯಾರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಆರ್.ಪಿ.ವಸಂತಯ್ಯ ಹಾಗೂ ವ್ಯವಸಾಯಗಾರರ ಯಳನಡು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ವೈ.ಸಿ.ಸಿದ್ರಾಮಯ್ಯ ವಿಜೇತರಾಗಿದ್ದು ಇಂದು ತಮ್ಮ ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿಕೊಂಡರು.ಮೊದಲಿಗೆ ಬಿಜೆಪಿ ಅಭ್ಯರ್ಥಿ ಆರ್.ಪಿ.ವಸಂತಯ್ಯ ವಿಜೇತರಾದ ಸುದ್ದಿ ಹೊರಬೀಳುತ್ತಿದ್ದಂತೆ ಕಾರ್ಯಕರ್ತರುಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ವಾದ್ಯದೊಂದಿಗೆ ಪಟ್ಟಣದ ಎಲ್ಲಾ ಬೀದಿಗಳಲ್ಲೂ ಬಿಜೆಪಿ ಪರ ಘೋಷಣೆ ಕೂಗುತಾ ಸಂಭ್ರಮಿಸಿದರು.ತಾ.ಪಂ.ಸದಸ್ಯ ನವೀನ್,ಯುಸಿ ಗೌಡ,ಪ್ರಸನ್ನ ಕುಮಾರ್,ರಾಘವೇಂದ್ರ ,ರಾಮಣ್ಣ ಮುಂತಾದವರಿದ್ದರು.ಕಾಂಗ್ರೆಸ್ ಅಭ್ಯರ್ಥಿ ವೈ.ಸಿ.ಸಿದ್ರಾಮಯ್ಯ 614 ಮತ ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಲಕ್ಷ್ಮಯ್ಯನಿಗಿಂತ 129 ಮತಗಳ ಅಂತರದಿಂದ ಜಯಗಳಿಸಿದ ಸುದ್ದಿ ತಿಳಿಯುತಿದ್ದಂತೆ ಕಾರ್ಯಕರ್ತರುಗಳು ಪ್ರಮುಖ ಬಿದಿಗಳಲ್ಲಿ ಮೆರವಣಿಗೆ ಮಾಡಿದರು. ಯುವ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್,ಅಶೋಕ್,ರಂಗನಾಥ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಒಟ್ಟಾರೆ ಹುಳಿಯಾರು ಎ.ಪಿ.ಎಂ.ಸಿ ಯ ಚುನಾವಣೆಯ ಒಟ್ಟು 12 ಕ್ಷೇತ್ರ ಗಳಲ್ಲಿನ ಸ್ಪರ್ಧಿಗಳು ಪಡೆದ ಮತಗಳಿಕೆ ಈಗಿದೆ. 1)ಹುಳಿಯಾರು ಕ್ಷೇತ್ರ:-ಆರ್.ಪಿ.ವಸಂತಯ್ಯ-842, ಕೆ.ಎಮ್.ರಾಜಶೇಖರಪ್ಪ-687, ಸೈಯದ್ ಜಲಾಲ್-257,

ಕರವೇಯಿಂದ ಕನ್ನಡ ರಾಜ್ಯೋತ್ಸವ ಆಚರಣೆ

ಹುಳಿಯಾರು: ಹೋಬಳಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಮಹಿಳಾ ಕರವೇ ಘಟಕ,ಹೋಬಳಿಯ ಕನ್ನಡಪರ ಸಂಘಟನೆಗಳ ಸಹಯೋಗದೊಂದಿಗೆ ಇಂದು(ತಾ.28)ರ ಬುಧವಾರ 57ನೇ ಕನ್ನಡ ರಾಜ್ಯೋತ್ಸವ ಹಾಗೂ ಪ್ರತಿಭಾಪುರಸ್ಕಾರ ಸಮಾರಂಭವನ್ನು ಹಮ್ಮಿಕೊಂಡಿದ್ದಾರೆ. ಇಂದು ಬೆಳಿಗ್ಗೆ 9 ಗಂಟೆಗೆ ಹುಳಿಯಾರಿನ ಕರವೇ ವೃತ್ತದಲ್ಲಿ ಧ್ವಜಾರೋಹಣ ಕಾರ್ಯ ನಡೆಯಲಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಧ್ವಾಜಾರೋಹಣ ನೆರವೇರಿಸುವರು.ಕರವೇ ಜಿಲ್ಲಾಧ್ಯಕ್ಷ ಎನ್.ಎಸ್.ವಿಷ್ಣುವರ್ಧನ ಉದ್ಘಾಟನೆಯನ್ನು,ಉಪನ್ಯಾಸಕ ಹಾಲಪ್ಪ ಪ್ರಾಸ್ತಾವಿಕ ನುಡಿ ನುಡಿಯುವರು.ಚಿ.ನಾ.ಹಳ್ಳಿ ತಾಲ್ಲೂಕು ಕರವೇ ಅಧ್ಯಕ್ಷ ಗುರುಮೂರ್ತಿ,ಪಿಎಸೈ ರಾಜು,ತಾ.ಪಂ.ಸದಸ್ಯ ಜಯಣ್ಣ,ಹುಳಿಯಾರು ಕರವೇ ಗೌರವಾಧ್ಯಕ್ಷ ರಂಗಸ್ವಾಮಿ,ಮಹಿಳಾ ಘಟಕದ ಅಧ್ಯಕ್ಷೆ ರತ್ನರಂಜನಿ,ತಾ.ಪಂ.ಮಾಜಿ ಸದಸ್ಯ ಮಲ್ಲಿಕಾರ್ಜುನಯ್ಯ,ಕೊಬ್ಬರಿ ವರ್ತಕ ಚಂದ್ರಣ್ಣ,ಮೆಡಿಕಲ್ ದೇವಣ್ಣ,ಗ್ರಾ.ಪಂ.ಸದಸ್ಯ ಬಡ್ಡಿ ಪುಟ್ಟರಾಜು ಅತಿಥಿಗಳಾಗಿ ಆಗಮಿಸುವರು. ಇದೇ ದಿನ ಮಧ್ಯಾಹ್ನ ನಡೆಯುವ ಶ್ರೀ ಭುವನೇಶ್ವರಿದೇವಿಯ ಭವ್ಯ ಮೆರವಣಿಗೆಯಲ್ಲಿ ನಾಸಿಕ್ ಡೋಲು,ವೀರಗಾಸೆ,ಡೋಳ್ಳುಕುಣಿತ,ಮದ್ದುಗುಂಡು,ಸ್ತಬ್ದಚಿತ್ರಗಳು ಹಾಗೂ ಜಾನಪದ ಕಲಾತಂಡಗಳು ಪಾಲ್ಗೊಳಲ್ಲಿವೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು,ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಉದ್ಘಾಟನೆ ನೆರವೇಸುವರು.ಶಾಸಕ ಸಿ.ಬಿ.ಸುರೇಶ್ ಬಾಬು ಅಧ್ಯಕ್ಷತೆವಹಿಸುವರು.ಉಪನ್ಯಾಸಕ ಕಣ್ಣಯ್ಯ ಪ್ರಾಸ್ತ

ಲಾವಣಿ,ಜಾನಪದ ಸಾಹಿತ್ಯದಿಂದ ಕನ್ನಡ ಭಾಷೆ ಅಚ್ಚಳಿಯದೇ ಉಳಿದಿದೆ : ಕಸಾಪ ಅಧ್ಯಕ್ಷ ರವಿಕುಮಾರ್

ಜಾನಪದ ಸಾಹಿತ್ಯವಾದ ಲಾವಣಿ,ಜಾನಪದ ಗೀತೆಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಜೀವಂತವಾಗಿದ್ದು, ಕನ್ನಡ ಭಾಷೆ ಉಳಿದು ಬಾಳಬೇಕಾದರೆ ಕರ್ನಾಟಕದ ಕಟ್ಟ ಕಡೆಯ ಪ್ರಜೆಗೂ ಕನ್ನಡ ಸಾಹಿತ್ಯ ಹಾಗೂ ಸಂಗೀತ ತಲುಪಿದಾಗ ಮಾತ್ರ ಸಾಧ್ಯವೆಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ರವಿಕುಮಾರ್ ತಿಳಿಸಿದರು ಹುಳಿಯಾರು ಹೋಬಳಿ ಕಟ್ಟಡ ನಿರ್ಮಾಣ ಕಾರ್ಮಿಕ ಸಂಘದವರು ಸೋಮವಾರದಂದು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಕನ್ನಡ ಭಾಷೆ,ಸಾಹಿತ್ಯದ ಮಹತ್ವವನ್ನು ಎಲ್ಲರೂ ತಿಳಿದು,ಇತರರಿಗೂ ತಿಳಿಸುವ ಕಾರ್ಯ ನಡೆಯಬೇಕಿದೆ. ಅನ್ಯಭಾಷೆಗಳ ಹಾವಳಿ ನಡುವೆ ಕನ್ನಡ ಭಾಷೆ ಹಾಗೂ ಸಂಸ್ಕೃತಿ ಜೀವಂತವಾಗಿದೆ ಎಂದರು. ಹುಳಿಯಾರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಚ್.ಕೆ.ರಾಮಯ್ಯ ಮಾತನಾಡಿ,ಪ್ರಸ್ತುತ ಕನ್ನಡ ನಾಡಿನ ಅನೇಕ ಪ್ರದೇಶಗಳು ಇತರ ರಾಜ್ಯದವರ ಪಾಲಾಗುವಂತ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಕನ್ನಡ ಜನತೆ ಎಚ್ಚೆತ್ತುಕೊಂಡು ಯಾವುದೇ ಹೋರಾಟ ಮಾಡಲು ಸಿದ್ದವಾಗಿರ ಬೇಕು ಎಂದರು. ಸೋಮವಾರ ಬೆಳಿಗ್ಗೆ ಸಂಘದ ಕಛೇರಿ ಆವರಣದಲ್ಲಿ ಧ್ವಜಾರೋಹಣವನ್ನು ನಡೆಸಿ,ನಂತರ ಭುವನೇಶ್ವರಿ ದೇವಿ,ರಾಷ್ಟ್ರಕವಿ ಕುವೆಂಪು, ವಿಶ್ವೇಶ್ವರಯ್ಯ,ಸಿ.ವಿ.ರಾಮನ್,ಟಿಫ್ಫು ಸುಲ್ತಾನ್ ಅವರ ಭಾವಚಿತ್ರಗಳನ್ನು ಅಲಂಕರಿಸಿ ಪಟ್ಟಣದ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಸೂಕ್ತ ವೇದಿಕೆ ಪ್ರತಿಭಾಕಾರಂಜಿ : ಇಸಿಓ ತಿಮ್ಮಾಬೋವಿ

ಗ್ರಾಮೀಣ ಭಾಗದ ಮಕ್ಕಳಲ್ಲಿ ಅಡಕವಾಗಿರುವ ಸುಪ್ತ ಪ್ರತಿಭೆಯನ್ನು ಗುರ್ತಿಸಲು ಹಾಗೂ ಮಕ್ಕಳನ್ನು ಉತ್ತೇಜಿಸಿ ಅವರ ಸೃಜನಶೀಲತೆಯ ಮಟ್ಟವನ್ನು ಹೆಚ್ಚಿಸಿ,ಅವರ ಪ್ರತಿಭೆಯನ್ನು ಹೊರಹುಮ್ಮುವಂತೆ ಮಾಡಲು ಪ್ರತಿಭಾ ಕಾರಂಜಿ ಸ್ಪರ್ಧೆಯು ಒಂದು ಸೂಕ್ತ ವೇದಿಕೆಯಾಗಿದೆ ಎಂದು ತಾಲ್ಲೂಕು ಇಸಿಓ ತಿಮ್ಮಾಬೋವಿ ಅಭಿಪ್ರಾಯಪಟ್ಟರು. ಹುಳಿಯಾರಿನ ಎಂಪಿಎಸ್ ಶಾಲಾ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಹುಳಿಯಾರು ಹೋಬಳಿ ಕ್ಲಸ್ಟರ್ ಮಟ್ಟದ ಪ್ರತಿಭಕಾರಂಜಿ ಸ್ಪರ್ಧೆಯ ಉದ್ಘಾಟನೆ ನೆರವೇಸಿದ ಅವರು ಮಾತನಾಡಿದರು. ಪ್ರತಿಯೊಂದು ಮಕ್ಕಳು ತಮ್ಮದೇ ಆದ ಪ್ರತಿಭೆಯನ್ನು ಹೊಂದಿರುತ್ತಾರೆ ಆದರೆ ಅದನ್ನು ಪ್ರದರ್ಶಿಸಲಾಗದೇ ಆ ಪ್ರತಿಭೆ ನಶಿಸುತ್ತದೆ,ಇಂತಹದನ್ನು ತಡೆಯುವ ನಿಟ್ಟಿನಲ್ಲಿ ಶಾಲಾ ಸಂಕಿರ್ಣದಲ್ಲಿ ವಿವಿಧ ಸಹಪಠ್ಯಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ ಎಂದರು.ಪ್ರತಿಭಾಕಾರಂಜಿ ಸ್ಪರ್ಧೆಯಲ್ಲಿ ಸೋಲು,ಗೆಲುವು ಮುಖ್ಯವಲ್ಲ ಸ್ಪರ್ಧೆ ಮುಖ್ಯವಾಗಿದ್ದು ಪ್ರತಿಯೊಂದು ಶಾಲೆಯ ಎಲ್ಲಾ ಮಕ್ಕಳು ಪಾಲ್ಗೊಳ್ಳುವುದು ಅಗತ್ಯವಾಗಿದೆ.ಸ್ಪರ್ಧೆಯಲ್ಲಿ ಜಯಶೀಲರಾದ ಮಕ್ಕಳು ತಾಲ್ಲೂಕು,ಜಿಲ್ಲಾ ಮಟ್ಟಗಳಲ್ಲಿ ಭಾಗವಹಿಸಿ ತಂದೆ-ತಾಯಿ,ಶಿಕ್ಷರಿಗೆ ಹೆಸರು ತಂದು ಕೊಡಿ ಎಂದು ಆಶಿಸಿದರು. ಪ್ರತಿಭಕಾರಂಜಿ ಸ್ಪರ್ಧೆಯಲ್ಲಿ ಸ್ಪರ್ಧಿಸಲು ಬಂದಿದ್ದ ಹೋಬಳಿಯ ವಿವಿಧ ಶಾಲೆಯ ಮಕ್ಕಳು ಬಗೆ ಬಗೆಯ ವೇಷಭೂಷಣಗಳನ್ನು ತೊಟ್ಟು ನೋಡುಗರನ್ನು ಆಕರ್ಷಿಸುತ್ತಿದ್ದರು. ಪ್ರತಿಭಾ ಕಾರಂಜಿ ಕಾರ್ಯಕ್

)ಶ್ರೀರಾಮ ಮಂದಿರದ ನೂತನ ವಿಮಾನ ಗೋಪುರ,ಕಳಸ,ಗರುಡಗಂಬ ಸ್ಥಾಪನೆ

ಹೋಬಳಿ ಲಿಂಗಪ್ಪನಪಾಳ್ಯದ ಇತಿಹಾಸ ಪ್ರಸಿದ್ದ ಶ್ರೀರಾಮದೇವರ ದೇವಾಲಯದ ನೂತನ ವಿಮಾನ ಗೋಪುರ,ಕಳಸ,ಗರುಡಗಂಬ ಸ್ಥಾಪನಾ ಕಾರ್ಯ ಹೊಸದುರ್ಗ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ತಾ.23ರ ಶುಕ್ರವಾರ ಮತ್ತು ತಾ.24ರ ಶನಿವಾರ ನಡೆಯಲಿದೆ. ತಾ.23ರ ಶುಕ್ರವಾರ ಸಂಜೆ ಹೊಸದುರ್ಗ ತಾಲ್ಲೂಕು ಗರಗದ ಶ್ರೀರಾಮಾಂಜನೇಯಸ್ವಾಮಿ,ಹುಳಿಯಾರು ಶ್ರಿ ಆಂಜನೇಯಸ್ವಾಮಿ,ದುರ್ಗಾಪರಮೇಶ್ವರಿ,ಹುಳಿಯಾರಮ್ಮ,ಗೌಡಗೆರೆ ದುರ್ಗಮ್ಮ ದೇವರುಗಳ ಆಗಮನ.ನಂತರ ಗಂಗಾಪ್ರವೇಶ,ಪುಣ್ಯಾಹ,ದೇವನಾಂದಿ,ಕಳಸಸ್ಥಾಪನೆ,ನವಗ್ರಹ ಆರಾಧನೆ,ಹುಳಿಯಾರಿನ ಶ್ರೀ ಡಿ.ಆರ್.ನರೇಂದ್ರಬಾಬು ಶ್ರೀಮತಿ ಹೆಚ್.ಎನ್.ನಾಗಲಕ್ಷ್ಮಿ ಅವರಿಂದ ಶ್ರೀರಾಮದೇವರ ಉತ್ಸವಮೂರ್ತಿಯ ಸೇವಾ ಕಾರ್ಯ,ನೇತ್ರೋನ್ಮಿಲನ,ಬಿಂಬಶುದ್ದಿ,ಅಧಿವಾಸ ಪೂಜೆ,ಕಳಹೋಮ,ದಿಗ್ಬಲಿ ಕೈಂಕರ್ಯಗಳು,ಶ್ರೀ ಎಲ್.ರಾಮಯ್ಯ ಶ್ರೀಮತಿ ಪುಷ್ಪಲತ ಅವರಿಂದ ಗರುಡಗಂಬ ಸೇವಾಕಾರ್ಯ ಹಾಗೂ ವಿವಿಧ ಪೂಜಾ ಕಾರ್ಯ ನಡೆಯಲಿವೆ.ಇದೇದಿನ ಸಂಜೆ ಹುಳಿಯಾರಿನ ಮುಖ್ಯಪ್ರಾಣ ಭಜನಾ ಮಂಡಳಿ ಅವರಿಂದ ಭಜನಾ ಕಾಎಯಕ್ರಮ ಜರುಗಲಿದೆ. ತಾ.24ರ ಶನಿವಾರ ಬೆಳಿಗ್ಗೆ ಶ್ರಿಗಣಪತಿಹೋಮ,ನವಗ್ರಹಹೋಮ,ರಾಮತಾರಕಹೋಮ, ಮೃತ್ಯುಂಜಯಹೋಮ,ಶ್ರೀಆಂಜನೇಯಹೋಮ,ಮಹಾಲಕ್ಷ್ಮಿಹೋಮ, ವಾಸ್ತುಹೋಮ,ದುರ್ಗಾಹೋಮ, ಪೂರ್ಣಾಹುತಿ ಕಾರ್ಯ ನಡೆದು,ನಂತರ ಹುಳಿಯಾರಿನ ಶ್ರೀಅಂಜನಾದ್ರಿ ಮಹಿಳಾ ಸಂಘದವರಿಂದ ಭಜನೆ ಕಾರ್ಯ,ನಂತರ ಮೂಲವಿಗ್ರಹ ಶ್ರೀರಾಮಚಂದ್ರಸ್ವಾಮಿಗೆ ಪಂಚಾಂಮ

ಪೋಟೋ ಕ್ಯಾಪ್ಷನ್

  ಹುಳಿಯಾರಿನ ವಾಲ್ಮಿಕಿ ಸೇನೆಯವರು ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮಿಕಿ ಜಯಂತ್ಯೋತ್ಸವ ಹಾಗೂ ಗುರುವಂದನಾ ಸಮಾರಂಭದಲ್ಲಿ ರಾಜನಹಳ್ಳಿ ಶ್ರೀ ವಾಲ್ಮಿಕಿ ಸಂಸ್ಥಾನದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಪ್ರಸನ್ನಾನಂದಸ್ವಾಮಿಜಿಯವರನ್ನು ವಾಲ್ಮೀಕಿ ಸೇನೆಯವರು ಸನ್ಮಾನಿಸಿದರು.  ಹುಳಿಯಾರಿನ ಮುಸ್ಲಿಂ ಯುವಮುಖಂಡ ಹಾಗೂ ಎಬಿವಿಪಿಯ ಮಾಜಿ ಸದಸ್ಯ ಇಮ್ರಾಜ್ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಅಜ್ಮಲ್ ಕಸಬ್ ಗೆ ಗಲ್ಲು:ಹುಳಿಯಾರಿನಲ್ಲಿ ಸಂಭ್ರಮಾಚರಣೆ

ಮುಂಬೈನ ದಾಳಿ ಪ್ರಕರಣದ ಉಗ್ರ ಅಜ್ಮಲ್ ಅಮೀರ್ ಕಸಬ್ ನನ್ನು ಬುಧವಾರ ಬೆಳಿಗ್ಗೆ 7.30 ಕ್ಕೆ ಪೂನಾದ ಯರವಾಡ ಜೈಲಿನಲ್ಲಿ ಗಲ್ಲಿಗೇರಿಸಿರುವುದನ್ನು ಸ್ವಾಗತಿಸಿದ ಹುಳಿಯಾರಿನ ಹಿಂದೂಜಾಗರಣ ವೇದಿಕೆ ,ಎಬಿವಿಪಿ ,ಜಯಕರ್ನಾಟಕ ಮುಂತಾದ ಸಂಘಟನೆಗಳು ಹಾಗೂ ಸಾರ್ವಜನಿಕರು ಪಟ್ಟಣದ ಬಸ್ ನಿಲ್ದಾಣದಲ್ಲಿ ಕಸಬ್ ನ ಪ್ರತಿಕೃತಿಗೆ ಬೆಂಕಿಹಚ್ಚಿ,ಪಟಾಕಿ ಸಿಡಿಸಿ,ಸಿಹಿ ಹಂಚಿ ಸಂಭ್ರಮ ಆಚರಿಸಿದರು. 26/11 ರ ಮುಂಬೈನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಬದುಕುಳಿದಿದ್ದ ಉಗ್ರ ಅಜ್ಮಲ್ ಅಮೀರ್ ಕಸಬ್ ನನ್ನು ವಿಚಾರಣೆಗಾಗಿ ಸರ್ಕಾರ ಇದುವರೆವಿಗೂ ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸಿದ್ದಲ್ಲದೆ ಶಿಕ್ಷೆ ವಿಧಿಸಲು ಸರ್ಕಾರ ಮುಂದೂಡಿಕೊಂಡು ಬಂದಿದ್ದು ಸಾರ್ವಜನಿಕರ ತೀವ್ರ ಅಸಮಾದಾನಕ್ಕೆ ಕಾರಣವಾಗಿತ್ತು. ಕಸಬ್ ನಿಗೆ ಶಿಕ್ಷೆ ಆಗುತ್ತೋ,ಇಲ್ಲವೋ ಎಂಬ ಅನುಮಾನದಲ್ಲಿದ್ದ ಜನರಿಗೆ ಆತನ್ನು ಗಲ್ಲಿಗೇರಿಸಿರುವ ವಿಷಯ ಹೆಚ್ಚಿನ ಸಂತಸ,ಹರ್ಷವನ್ನು ತಂದುಕೊಟ್ಟಿದೆ ಎಂದು ಹಿಂದೂಜಾಗರಣ ವೇದಿಕೆಯ ರಾಘವೇಂದ್ರ ತಿಳಿಸಿದರು. ರಾಷ್ಟ್ರಪತಿಯವರು ಕಸಬ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿ, ಹೆಚ್ಚು ಕಾಲಾವಕಾಶ ನೀಡದೆ ಕಸಬ್ ನನ್ನು ಗಲ್ಲಿಗೆ ಹಾಕಿರುವುದು ಉತ್ತಮ ನಡೆಯಾಗಿದ್ದು,ದೇಶದ್ರೋಹಿಗಳಿಗೆ ಯಾವುದೇ ರೀತಿಯ ಕರುಣೆ ತೊರದೆ ತಕ್ಕ ಶಿಕ್ಷೆ ವಿಧಿಸಬೇಕು,ಕಸಬ್ ನನ್ನು ಗಲ್ಲಿಗೇರಿಸಿದ ಸರಕಾರದ ನಿರ್ಧಾರ ಇತರೇ ಉಗ್ರರಿಗೂ ಎಚ್ಚರಿಕೆಯನ್ನು ಕೊಟ್ಟಂತಾಗಿದೆ ಎಂಬ ಅಭಿಪ್

ಬಂಗಾರಗೆರೆ:ಸಮಗ್ರ ಬೆಳೆ ನಿರ್ವಹಣೆ ಪ್ರಾತ್ಯಕ್ಷಿಕೆಯಲ್ಲಿ ತರಕಾರಿ ಬೆಳೆಗಳ ಕ್ಷೇತ್ರೋತ್ಸವ

ಕೃಷಿ ವಿಶ್ವವಿದ್ಯಾನಿಲಯ ಜಿಕೆವಿಕೆ ಬೆಂಗಳೂರು, ಸಮುದಾಯ ಆಧಾರಿತ ಕೆರೆ ನಿರ್ವಹಣಾ ಯೋಜನೆ ಸಲಹಾ ಸೇವೆ, ತುಮಕೂರು ಜಿಲ್ಲಾ ಯೋಜನಾ ಘಟಕ ಹಾಗೂ ಶ್ರೀ ಗಂಗಮ್ಮದೇವಿ ಕೆರೆ ಅಭಿವೃದ್ದಿ ಸಂಘದ ಸಂಯುಕ್ತಾಶ್ರಯದಲ್ಲಿ ಸಮಗ್ರ ಬೆಳೆ ನಿರ್ವಹಣೆ ಪ್ರಾತ್ಯಕ್ಷಿಕೆಯಲ್ಲಿ ತರಕಾರಿ ಬೆಳೆಗಳ ಕ್ಷೇತ್ರೋತ್ಸವ ಮುಂಗಾರು-2012 ಕಾರ್ಯಕ್ರಮ ಚಿಕ್ಕನಾಯಕನಹಳ್ಳಿ ತಾಲ್ಲೂಕು ಬಂಗಾರಗೆರೆ ಗ್ರಾಮದಲ್ಲಿ ಶನಿವಾರದಂದು ನಡೆಸಲಾಯಿತು. ಹುಳಿಯಾರು ಸಮೀಪದ ಬಂಗಾರಗೆರೆ ಗ್ರಾಮದಲ್ಲಿ ನಡೆದ ಸಮಗ್ರ ಬೆಳೆ ನಿರ್ವಹಣೆ ಪ್ರಾತ್ಯಕ್ಷಿಕೆಯಲ್ಲಿ ತರಕಾರಿ ಬೆಳೆಗಳ ಕ್ಷೇತ್ರೋತ್ಸವದಲ್ಲಿ ರೈತರಿಗೆ ಮಾಹಿತಿ ನೀಡುತ್ತಿರುವ ಅಧಿಕಾರಿಗಳು. ಕ್ಷೇತ್ರೋತ್ಸವದಲ್ಲಿ ಜಿಲ್ಲಾ ಸಂಯೋಜಕರಾದ ಡಾ,,ಎನ್.ಗೋಪಿನಾಥನ್ ರವರು ಭಾಗವಹಿಸಿ ತರಕಾರಿ ಬೆಳೆಗಳಾದ ಮೆಣಸಿನಕಾಯಿ, ಟೊಮ್ಯಾಟೋ, ಹೆಬ್ಬಾಳ ಅವರೆ, ತೂಗರಿ ಬೆಳೆಗಳಲ್ಲಿ ಅನುಸರಿಸಿದ ಜೈವಿಕ ಗೂಬ್ಬರಗಳ ಬಳಕೆ,ನಾಟಿ ಮಾಡುವಾಗ ಸಾಲುಗಳ ಅಂತರ ನೀರು ಸಿಂಪರಣೆ,ನಿರ್ವಹಣೆಗಳ ಬಗ್ಗೆ ರೈತರಿಗೆ ಸಮಗ್ರ ಮಾಹಿತಿ ತಿಳಿಸಿದರು.

ಮುದ್ದೇನಹಳ್ಳಿಯಲ್ಲಿ ಟೊಮ್ಯಾಟೋ ಬೆಳೆಯ ಕ್ಷೇತ್ರೋತ್ಸವ

ಕೃಷಿ ವಿಶ್ವವಿದ್ಯಾನಿಲಯ ಜಿಕೆವಿಕೆ ಬೆಂಗಳೂರು, ಸಮುದಾಯ ಆಧಾರಿತ ಕೆರೆ ನಿರ್ವಹಣಾ ಯೋಜನೆ ಸಲಹಾ ಸೇವೆ, ತುಮಕೂರು ಜಿಲ್ಲಾ ಯೋಜನಾ ಘಟಕ ಹಾಗೂ ಶ್ರೀ ವಿರಭದ್ರೇಶ್ವರಸ್ವಾಮಿ ಕೆರೆ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ಮುದ್ದೇನಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಡಿಯಲ್ಲಿ ಬೆಳೆದ ಟಮ್ಯಾಟೋ ಬೆಳೆಯ ಕ್ಷೇತ್ರೂತ್ಸವ ಮುಂಗಾರು-2012 ಕಾರ್ಯಕ್ರಮ ನಡೆಯಿತು.  ಕ್ಷೇತ್ರೋತ್ಸವದಲ್ಲಿ ಸಹಕರ್ತ ರೈತರಾದ ಧನಂಜಯರವರು ಟಮ್ಯಾಟೋ ಬೆಳೆಯ ಅಧಿಕ ಇಳುವರಿಗೆ, ನಾಟಿ ಮಾಡುವುದರಿಂದ ಕಟಾವುವರೆಗೆ ಸಾವಯವ ಗೂಬ್ಬರದ ಬಳಕೆ, ಪೀಡೆ ನಿಯಂತ್ರಣದ ಬಗ್ಗೆ ವಿವರಣೆ ನೀಡಿದರು.ಅಲ್ಲದೆ ಈ ಪದ್ದತಿಯನ್ನು ಅಳವಡಿಸುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದಾಗಿದ್ದು,ಜೈವಿಕ ಗೂಬ್ಬರಗಳ ಬಳಕೆಯಿಂದ ಸೂರಗು ರೋಗ ಹತೋಟಿ ಮಾಡಬಹುದೆಂದು ತಿಳಿಸಿದರು. ಜಿಲ್ಲಾ ಸಂಯೋಜಕರಾದ ಡಾ,,ಎನ್.ಗೋಪಿನಾಥನ್ ಸೇರಿದಂತೆ ಅನೇಕ ರೈತ ಹಾಗೂ ರೈತ ಮಹಿಳೆಯರು ಭಾಗವಹಿಸಿದ್ದರು