ಹುಳಿಯಾರು: ಹೋಬಳಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಮಹಿಳಾ ಕರವೇ ಘಟಕ,ಹೋಬಳಿಯ ಕನ್ನಡಪರ ಸಂಘಟನೆಗಳ ಸಹಯೋಗದೊಂದಿಗೆ ಇಂದು(ತಾ.28)ರ ಬುಧವಾರ 57ನೇ ಕನ್ನಡ ರಾಜ್ಯೋತ್ಸವ ಹಾಗೂ ಪ್ರತಿಭಾಪುರಸ್ಕಾರ ಸಮಾರಂಭವನ್ನು ಹಮ್ಮಿಕೊಂಡಿದ್ದಾರೆ.
ಇಂದು ಬೆಳಿಗ್ಗೆ 9 ಗಂಟೆಗೆ ಹುಳಿಯಾರಿನ ಕರವೇ ವೃತ್ತದಲ್ಲಿ ಧ್ವಜಾರೋಹಣ ಕಾರ್ಯ ನಡೆಯಲಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಧ್ವಾಜಾರೋಹಣ ನೆರವೇರಿಸುವರು.ಕರವೇ ಜಿಲ್ಲಾಧ್ಯಕ್ಷ ಎನ್.ಎಸ್.ವಿಷ್ಣುವರ್ಧನ ಉದ್ಘಾಟನೆಯನ್ನು,ಉಪನ್ಯಾಸಕ ಹಾಲಪ್ಪ ಪ್ರಾಸ್ತಾವಿಕ ನುಡಿ ನುಡಿಯುವರು.ಚಿ.ನಾ.ಹಳ್ಳಿ ತಾಲ್ಲೂಕು ಕರವೇ ಅಧ್ಯಕ್ಷ ಗುರುಮೂರ್ತಿ,ಪಿಎಸೈ ರಾಜು,ತಾ.ಪಂ.ಸದಸ್ಯ ಜಯಣ್ಣ,ಹುಳಿಯಾರು ಕರವೇ ಗೌರವಾಧ್ಯಕ್ಷ ರಂಗಸ್ವಾಮಿ,ಮಹಿಳಾ ಘಟಕದ ಅಧ್ಯಕ್ಷೆ ರತ್ನರಂಜನಿ,ತಾ.ಪಂ.ಮಾಜಿ ಸದಸ್ಯ ಮಲ್ಲಿಕಾರ್ಜುನಯ್ಯ,ಕೊಬ್ಬರಿ ವರ್ತಕ ಚಂದ್ರಣ್ಣ,ಮೆಡಿಕಲ್ ದೇವಣ್ಣ,ಗ್ರಾ.ಪಂ.ಸದಸ್ಯ ಬಡ್ಡಿ ಪುಟ್ಟರಾಜು ಅತಿಥಿಗಳಾಗಿ ಆಗಮಿಸುವರು.
ಇದೇ ದಿನ ಮಧ್ಯಾಹ್ನ ನಡೆಯುವ ಶ್ರೀ ಭುವನೇಶ್ವರಿದೇವಿಯ ಭವ್ಯ ಮೆರವಣಿಗೆಯಲ್ಲಿ ನಾಸಿಕ್ ಡೋಲು,ವೀರಗಾಸೆ,ಡೋಳ್ಳುಕುಣಿತ,ಮದ್ದುಗುಂಡು,ಸ್ತಬ್ದಚಿತ್ರಗಳು ಹಾಗೂ ಜಾನಪದ ಕಲಾತಂಡಗಳು ಪಾಲ್ಗೊಳಲ್ಲಿವೆ.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು,ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಉದ್ಘಾಟನೆ ನೆರವೇಸುವರು.ಶಾಸಕ ಸಿ.ಬಿ.ಸುರೇಶ್ ಬಾಬು ಅಧ್ಯಕ್ಷತೆವಹಿಸುವರು.ಉಪನ್ಯಾಸಕ ಕಣ್ಣಯ್ಯ ಪ್ರಾಸ್ತಾವಿಕ ನುಡಿ ನುಡಿಯಲಿದ್ದು,ಶಿರಾ ಶಾಸಕ ಟಿ.ಬಿ.ಜಯಚಂದ್ರ,ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ರಾಜೇಂದ್ರ,ಜಿ.ಪಂ.ಅಧ್ಯಕ್ಷೆ ಪ್ರೇಮಾ,ಸದಸ್ಯೆ ಮಂಜುಳಾ,ತಾ.ಪಂ ಮಾಜಿ ಅಧ್ಯಕ್ಷ ಸೀತಾರಾಂ,ಮಾಜಿ ಉಪಾಧ್ಯಕ್ಷೆ ಬೀಬೀಫಾತೀಮ,ತಾ.ಪಂ.ಸದಸ್ಯರಾದ ಜಯಣ್ಣ,ಕೆಂಕೆರೆ ನವೀನ್,ಗ್ರಾ.ಪಂ.ಅಧ್ಯಕ್ಷ ಅನ್ಸರ್ ಅಲಿ,ರೈತ ಸಂಘದ ಸತೀಶ್,ಹೃದಯ ತಜ್ಞ ಡಾ||ಪರಮೇಶ್ವರಪ್ಪ,ತಹಶೀಲ್ದಾರ್ ಉಮೇಶ್ಚಂದ್ರ,ಎಸೈ ಪ್ರಭಾಕರ್,ಬಿಇಓ ಸಾ.ಚಿ.ನಾಗೇಶ್,ಉಪ ತಹಶೀಲ್ದಾರ್ ಕೃಷ್ಣಮೂರ್ತಿ,ಬೆಸ್ಕಾಂನ ಉಮೇಶ್ ನಾಯ್ಕ, ಪತ್ರಕರ್ತ ಸಂಘದ ಅಧ್ಯಕ್ಷ ನರೇಂದ್ರಬಾಬು,ಬಿ.ಎಸ್.ಆರ್ ಕಾಂಗ್ರೇಸ್ ನ ಬಾಲಕುಮಾರಸ್ವಾಮಿ,ಜೆಡಿಎಸ್ ಮುಂಖಂಡರಾದ ಲಲಿತಾಪ್ರಕಾಶ್,ತಾಲ್ಲೂಕು ಯುವ ಕಾಂಗ್ರೇಸ್ ಅಧ್ಯಕ್ಷ ವೆಂಕಟೇಶ್ ಅತಿಥಿಗಳಾಗಿ ಆಗಮಿಸಲಿದ್ದು ರಾತ್ರಿ ಎಂಟು ಗಂಟೆಗೆ ರಸ ಮಂಜರಿ ಕಾರ್ಯಕ್ರಮವಿದ್ದು,ಹೋಬಳಿಯ ಎಲ್ಲಾ ಕನ್ನಡಪರ ಸಂಘಟನೆಯವರು ಹಾಗೂ ಸಾರ್ವಜನಿಕರು ರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವಂತೆ ಸಂಘಟಕರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ