ಹೋಬಳಿ ಲಿಂಗಪ್ಪನಪಾಳ್ಯದ ಇತಿಹಾಸ ಪ್ರಸಿದ್ದ ಶ್ರೀರಾಮದೇವರ ದೇವಾಲಯದ ನೂತನ ವಿಮಾನ ಗೋಪುರ,ಕಳಸ,ಗರುಡಗಂಬ ಸ್ಥಾಪನಾ ಕಾರ್ಯ ಹೊಸದುರ್ಗ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ತಾ.23ರ ಶುಕ್ರವಾರ ಮತ್ತು ತಾ.24ರ ಶನಿವಾರ ನಡೆಯಲಿದೆ.
ತಾ.23ರ ಶುಕ್ರವಾರ ಸಂಜೆ ಹೊಸದುರ್ಗ ತಾಲ್ಲೂಕು ಗರಗದ ಶ್ರೀರಾಮಾಂಜನೇಯಸ್ವಾಮಿ,ಹುಳಿಯಾರು ಶ್ರಿ ಆಂಜನೇಯಸ್ವಾಮಿ,ದುರ್ಗಾಪರಮೇಶ್ವರಿ,ಹುಳಿಯಾರಮ್ಮ,ಗೌಡಗೆರೆ ದುರ್ಗಮ್ಮ ದೇವರುಗಳ ಆಗಮನ.ನಂತರ ಗಂಗಾಪ್ರವೇಶ,ಪುಣ್ಯಾಹ,ದೇವನಾಂದಿ,ಕಳಸಸ್ಥಾಪನೆ,ನವಗ್ರಹ ಆರಾಧನೆ,ಹುಳಿಯಾರಿನ ಶ್ರೀ ಡಿ.ಆರ್.ನರೇಂದ್ರಬಾಬು ಶ್ರೀಮತಿ ಹೆಚ್.ಎನ್.ನಾಗಲಕ್ಷ್ಮಿ ಅವರಿಂದ ಶ್ರೀರಾಮದೇವರ ಉತ್ಸವಮೂರ್ತಿಯ ಸೇವಾ ಕಾರ್ಯ,ನೇತ್ರೋನ್ಮಿಲನ,ಬಿಂಬಶುದ್ದಿ,ಅಧಿವಾಸ ಪೂಜೆ,ಕಳಹೋಮ,ದಿಗ್ಬಲಿ ಕೈಂಕರ್ಯಗಳು,ಶ್ರೀ ಎಲ್.ರಾಮಯ್ಯ ಶ್ರೀಮತಿ ಪುಷ್ಪಲತ ಅವರಿಂದ ಗರುಡಗಂಬ ಸೇವಾಕಾರ್ಯ ಹಾಗೂ ವಿವಿಧ ಪೂಜಾ ಕಾರ್ಯ ನಡೆಯಲಿವೆ.ಇದೇದಿನ ಸಂಜೆ ಹುಳಿಯಾರಿನ ಮುಖ್ಯಪ್ರಾಣ ಭಜನಾ ಮಂಡಳಿ ಅವರಿಂದ ಭಜನಾ ಕಾಎಯಕ್ರಮ ಜರುಗಲಿದೆ.
ತಾ.24ರ ಶನಿವಾರ ಬೆಳಿಗ್ಗೆ ಶ್ರಿಗಣಪತಿಹೋಮ,ನವಗ್ರಹಹೋಮ,ರಾಮತಾರಕಹೋಮ, ಮೃತ್ಯುಂಜಯಹೋಮ,ಶ್ರೀಆಂಜನೇಯಹೋಮ,ಮಹಾಲಕ್ಷ್ಮಿಹೋಮ, ವಾಸ್ತುಹೋಮ,ದುರ್ಗಾಹೋಮ, ಪೂರ್ಣಾಹುತಿ ಕಾರ್ಯ ನಡೆದು,ನಂತರ ಹುಳಿಯಾರಿನ ಶ್ರೀಅಂಜನಾದ್ರಿ ಮಹಿಳಾ ಸಂಘದವರಿಂದ ಭಜನೆ ಕಾರ್ಯ,ನಂತರ ಮೂಲವಿಗ್ರಹ ಶ್ರೀರಾಮಚಂದ್ರಸ್ವಾಮಿಗೆ ಪಂಚಾಂಮೃತಾಭಿಷೇಕ, ಸಹಸ್ರನಾಮ ಪೂಜೆ ನಡೆದು,ಸಮಯ 11.36ಕ್ಕೆ ವಿಮಾನಗೋಪುರ,ಕಳಸ ಸ್ಥಾಪನೆ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳ ಸಮ್ಮುಖದಲ್ಲಿ ನಡೆದು,ಮಧ್ಯಾಹ್ನ ಮಹಾಮಂಗಳಾರತಿ ಹಾಗೂ ಪ್ರಸಾದವಿನಿಯೋಗ ನಂತರ ಅನ್ನಸಂತರ್ಪಣೆ ಕಾರ್ಯ ನಡೆಯಲಿದ್ದು,ಇದೇ ದಿನ ರಾತ್ರಿ ಸಂಪೂರ್ಣರಾಮಾಯಣ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಹುಳಿಯಾರು ಹೋಬಳಿ ಲಿಂಗಪ್ಪನಪಾಳ್ಯದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀರಾಮ ಮಂದಿರದ ವಿಮಾನ ಗೋಪುರ,ಕಳಸ,ಗರುಡಗಂಬದ ಒಂದು ನೋಟ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ