ಮುಂಬೈನ ದಾಳಿ ಪ್ರಕರಣದ ಉಗ್ರ ಅಜ್ಮಲ್ ಅಮೀರ್ ಕಸಬ್ ನನ್ನು ಬುಧವಾರ ಬೆಳಿಗ್ಗೆ 7.30 ಕ್ಕೆ ಪೂನಾದ ಯರವಾಡ ಜೈಲಿನಲ್ಲಿ ಗಲ್ಲಿಗೇರಿಸಿರುವುದನ್ನು ಸ್ವಾಗತಿಸಿದ ಹುಳಿಯಾರಿನ ಹಿಂದೂಜಾಗರಣ ವೇದಿಕೆ ,ಎಬಿವಿಪಿ ,ಜಯಕರ್ನಾಟಕ ಮುಂತಾದ ಸಂಘಟನೆಗಳು ಹಾಗೂ ಸಾರ್ವಜನಿಕರು ಪಟ್ಟಣದ ಬಸ್ ನಿಲ್ದಾಣದಲ್ಲಿ ಕಸಬ್ ನ ಪ್ರತಿಕೃತಿಗೆ ಬೆಂಕಿಹಚ್ಚಿ,ಪಟಾಕಿ ಸಿಡಿಸಿ,ಸಿಹಿ ಹಂಚಿ ಸಂಭ್ರಮ ಆಚರಿಸಿದರು.
26/11 ರ ಮುಂಬೈನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಬದುಕುಳಿದಿದ್ದ ಉಗ್ರ ಅಜ್ಮಲ್ ಅಮೀರ್ ಕಸಬ್ ನನ್ನು ವಿಚಾರಣೆಗಾಗಿ ಸರ್ಕಾರ ಇದುವರೆವಿಗೂ ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸಿದ್ದಲ್ಲದೆ ಶಿಕ್ಷೆ ವಿಧಿಸಲು ಸರ್ಕಾರ ಮುಂದೂಡಿಕೊಂಡು ಬಂದಿದ್ದು ಸಾರ್ವಜನಿಕರ ತೀವ್ರ ಅಸಮಾದಾನಕ್ಕೆ ಕಾರಣವಾಗಿತ್ತು. ಕಸಬ್ ನಿಗೆ ಶಿಕ್ಷೆ ಆಗುತ್ತೋ,ಇಲ್ಲವೋ ಎಂಬ ಅನುಮಾನದಲ್ಲಿದ್ದ ಜನರಿಗೆ ಆತನ್ನು ಗಲ್ಲಿಗೇರಿಸಿರುವ ವಿಷಯ ಹೆಚ್ಚಿನ ಸಂತಸ,ಹರ್ಷವನ್ನು ತಂದುಕೊಟ್ಟಿದೆ ಎಂದು ಹಿಂದೂಜಾಗರಣ ವೇದಿಕೆಯ ರಾಘವೇಂದ್ರ ತಿಳಿಸಿದರು.
ರಾಷ್ಟ್ರಪತಿಯವರು ಕಸಬ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿ, ಹೆಚ್ಚು ಕಾಲಾವಕಾಶ ನೀಡದೆ ಕಸಬ್ ನನ್ನು ಗಲ್ಲಿಗೆ ಹಾಕಿರುವುದು ಉತ್ತಮ ನಡೆಯಾಗಿದ್ದು,ದೇಶದ್ರೋಹಿಗಳಿಗೆ ಯಾವುದೇ ರೀತಿಯ ಕರುಣೆ ತೊರದೆ ತಕ್ಕ ಶಿಕ್ಷೆ ವಿಧಿಸಬೇಕು,ಕಸಬ್ ನನ್ನು ಗಲ್ಲಿಗೇರಿಸಿದ ಸರಕಾರದ ನಿರ್ಧಾರ ಇತರೇ ಉಗ್ರರಿಗೂ ಎಚ್ಚರಿಕೆಯನ್ನು ಕೊಟ್ಟಂತಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು..
ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಾದ ಚುರುಮುರಿ ರಘು,ಶ್ರೀಧರ್ ಅಂಬೇಕರ್,ಗಂಗಾಧರ್,ತಾ.ಪಂ.ಸದಸ್ಯರಾದ ನವೀನ್ ಹಾಗೂ ವಸಂತ್,ಕನ್ನಡಸೇನೆ ನಾಗಭೂಷಣ್,ಎಬಿವಿಪಿಯ ನರೇಂದ್ರಬಾಬು,ಜಯಕರ್ನಾಟಕ ಸಂಘ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ