ಚಿಕ್ಕನಾಯಕನಹಳ್ಳಿ ತಾಲ್ಲೂಕು ಕನ್ನಡಸಾಹಿತ್ಯ ಪರಿಷತ್ ವತಿಯಿಂದ ತಾಲ್ಲೂಕಿನ ಪ್ರತಿ ಹೋಬಳಿಗಳಲ್ಲೂ ಕನ್ನಡ ಸಾಹಿತ್ಯ ಸಮ್ಮೇಳನನ ಸೇರಿದಂತೆ ಅನೇಕ ಸಾಂಸ್ಕೃತಿಕಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಲಾಗಿದ್ದು ,ಅಂತೆಯೇ ಹುಳಿಯಾರಿನಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸುವಂತೆ ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮದ್ ಅವರಿಗೆ ತಾಲ್ಲುಕು ಕಸಾಪದವರು ಮನವಿ ಮಾಡಿದರು.
ಹುಳಿಯಾರಿನಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸುವಂತೆ ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮದ್ ಅವರಿಗೆ ತಾಲ್ಲುಕು ಕಸಾಪದವರು ಮನವಿ ಮಾಡಿದರು.
|
ಹುಳಿಯಾರಿನಲ್ಲಿ ಪತ್ರಕರ್ತ ನರೇಂದ್ರ ಬಾಬು ಅವರ ಮನೆಗೆ ಆಗಮಿಸಿದ್ದ ಕೆ.ಎಸ್. ನಿಸಾರ್ ಅಹಮದ್ ಹಾಗೂ ಮಾಸ್ಟರ್ ಹಿರಣ್ಣಯ್ಯ ಅವರನ್ನು ಭೇಟಿ ಮಾಡಿದ ಚಿಕ್ಕನಾಯಕನಹಳ್ಳಿ ತಾಲ್ಲೂಕು ಕನ್ನಡಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ರವಿಕುಮಾರ್ ಹಾಗೂ ಸಂಚಾಲಕರು ಪರಿಷತ್ ನ ಉದ್ದೇಶಿತ ತಾಲ್ಲೂಕ್ ಮತ್ತು ಹೋಬಳಿ ಸಮ್ಮೇಳನದ ಕಾರ್ಯಕ್ರಮಗಳಲ್ಲದೆ ಕನ್ನಡ ಭವನ ನಿರ್ಮಾಣದ ಯೋಜನೆಗಳನ್ನು ವಿವರಿಸಿದರು, ತಾವುಗಳು ಆಗಮಿಸಿ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸುವಂತೆ ವಿನಂತಿಸಿದರು.ಇದೇ ಸಂದರ್ಭದಲ್ಲಿ ಈರ್ವರನ್ನು ಸನ್ಮಾನಿಸಲಾಯಿತು.ತಾಲ್ಲೂಕ್ ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್,ಬೆಳಗುಲಿ ಶಶಿಭೂಷಣ್,ಎಪಿಪಿ ಭಾಗ್ಯಲಕ್ಷ್ಮಿ,ಮಂಜುನಾಥ್ ಅರಸ್,ಪತ್ರಕರ್ತ ಕಿರಣ್ ಕುಮಾರ್,ಹೆಚ್.ಎ.ರಮೇಶ್,ಶಿಕ್ಷಕ ಷಬ್ಬೀರ್,ಶಿವು ಮುಂತಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ