ಗ್ರಾಮೀಣ ಭಾಗದ ಮಕ್ಕಳಲ್ಲಿ ಅಡಕವಾಗಿರುವ ಸುಪ್ತ ಪ್ರತಿಭೆಯನ್ನು ಗುರ್ತಿಸಲು ಹಾಗೂ ಮಕ್ಕಳನ್ನು ಉತ್ತೇಜಿಸಿ ಅವರ ಸೃಜನಶೀಲತೆಯ ಮಟ್ಟವನ್ನು ಹೆಚ್ಚಿಸಿ,ಅವರ ಪ್ರತಿಭೆಯನ್ನು ಹೊರಹುಮ್ಮುವಂತೆ ಮಾಡಲು ಪ್ರತಿಭಾ ಕಾರಂಜಿ ಸ್ಪರ್ಧೆಯು ಒಂದು ಸೂಕ್ತ ವೇದಿಕೆಯಾಗಿದೆ ಎಂದು ತಾಲ್ಲೂಕು ಇಸಿಓ ತಿಮ್ಮಾಬೋವಿ ಅಭಿಪ್ರಾಯಪಟ್ಟರು.
ಹುಳಿಯಾರಿನ ಎಂಪಿಎಸ್ ಶಾಲಾ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಹುಳಿಯಾರು ಹೋಬಳಿ ಕ್ಲಸ್ಟರ್ ಮಟ್ಟದ ಪ್ರತಿಭಕಾರಂಜಿ ಸ್ಪರ್ಧೆಯ ಉದ್ಘಾಟನೆ ನೆರವೇಸಿದ ಅವರು ಮಾತನಾಡಿದರು.
ಪ್ರತಿಯೊಂದು ಮಕ್ಕಳು ತಮ್ಮದೇ ಆದ ಪ್ರತಿಭೆಯನ್ನು ಹೊಂದಿರುತ್ತಾರೆ ಆದರೆ ಅದನ್ನು ಪ್ರದರ್ಶಿಸಲಾಗದೇ ಆ ಪ್ರತಿಭೆ ನಶಿಸುತ್ತದೆ,ಇಂತಹದನ್ನು ತಡೆಯುವ ನಿಟ್ಟಿನಲ್ಲಿ ಶಾಲಾ ಸಂಕಿರ್ಣದಲ್ಲಿ ವಿವಿಧ ಸಹಪಠ್ಯಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ ಎಂದರು.ಪ್ರತಿಭಾಕಾರಂಜಿ ಸ್ಪರ್ಧೆಯಲ್ಲಿ ಸೋಲು,ಗೆಲುವು ಮುಖ್ಯವಲ್ಲ ಸ್ಪರ್ಧೆ ಮುಖ್ಯವಾಗಿದ್ದು ಪ್ರತಿಯೊಂದು ಶಾಲೆಯ ಎಲ್ಲಾ ಮಕ್ಕಳು ಪಾಲ್ಗೊಳ್ಳುವುದು ಅಗತ್ಯವಾಗಿದೆ.ಸ್ಪರ್ಧೆಯಲ್ಲಿ ಜಯಶೀಲರಾದ ಮಕ್ಕಳು ತಾಲ್ಲೂಕು,ಜಿಲ್ಲಾ ಮಟ್ಟಗಳಲ್ಲಿ ಭಾಗವಹಿಸಿ ತಂದೆ-ತಾಯಿ,ಶಿಕ್ಷರಿಗೆ ಹೆಸರು ತಂದು ಕೊಡಿ ಎಂದು ಆಶಿಸಿದರು.
ಪ್ರತಿಭಕಾರಂಜಿ ಸ್ಪರ್ಧೆಯಲ್ಲಿ ಸ್ಪರ್ಧಿಸಲು ಬಂದಿದ್ದ ಹೋಬಳಿಯ ವಿವಿಧ ಶಾಲೆಯ ಮಕ್ಕಳು ಬಗೆ ಬಗೆಯ ವೇಷಭೂಷಣಗಳನ್ನು ತೊಟ್ಟು ನೋಡುಗರನ್ನು ಆಕರ್ಷಿಸುತ್ತಿದ್ದರು.
ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಬಿಆರ್ ಪಿ ಪುಟ್ಟಮಾದಪ್ಪ,ಎಂಪಿಎಸ್ ಶಾಲೆಯ ಮುಖ್ಯಶಿಕ್ಷಕ ಶಂಕರಪ್ಪ,ಹೆಚ್.ಪಿ.ಜಿ.ಎಸ್ ಮುಖ್ಯಶಿಕ್ಷಕ ನಂದವಾಡಗಿ,ಸಹಶಿಕ್ಷಕ ಕರಿಯಪ್ಪ ಸೇರಿದಂತೆ ಹೋಬಳಿ ಸುತ್ತಮುತ್ತಲಿನ ಶಾಲಾ ಶಿಕ್ಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.
ಹುಳಿಯಾರಿನ ಎಂಪಿಎಸ್ ಶಾಲಾ ಮೈದಾನದಲ್ಲಿ ಗುರುವಾರ ನಡೆದ ಪ್ರತಿಭಕಾರಂಜಿ ಸ್ಪರ್ಧೆಯ ಉದ್ಘಾಟನೆಯನ್ನು ಇಸಿಓ ತಿಮ್ಮಾಬೋವಿ ನೆರವೇರಿಸಿದರು.ಬಿಆರ್ ಪಿ ಪುಟ್ಟಮಾದಪ್ಪ,ಎಂಪಿಎಸ್ ಶಾಲೆಯ ಮುಖ್ಯಶಿಕ್ಷಕ ಶಂಕರಪ್ಪ,ಹೆಚ್.ಪಿ.ಜಿ.ಎಸ್ ಮುಖ್ಯಶಿಕ್ಷಕ ನಂದವಾಡಗಿ,ಸಹಶಿಕ್ಷಕ ಕರಿಯಪ್ಪ ಸೇರಿದಂತೆ ಇತರರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ