:ಹುಳಿಯಾರಿನ ಟಿಪ್ಪುಸುಲ್ತಾನ್ ಸಂಘದ ಸದಸ್ಯರೊಂದಿಗೆ ಕವಿ ಕೆ.ಎಸ್.ನಿಸಾರ್ ಅಹಮದ್ ಹಾಗೂ ರಂಗಭೂಮಿ ಕಲಾವಿದರಾದ ಮಾಸ್ಟರ್ ಹಿರಣಯ್ಯ
|
ಕನ್ನಡ ನೆಲದಲ್ಲಿರುವ ಎಲ್ಲಾ ಧರ್ಮಿಯರು ಕನ್ನಡಿಗರು.ಇವರುಗಳನ್ನು ಹಿಂದೂ, ಮುಸ್ಲಿಮ್,ಕ್ರಿಶ್ಚಿಯನ್ ಹೀಗೆ ಅನೇಕ ಧರ್ಮಗಳ ಹೆಸರಿನಲ್ಲಿ ಪ್ರತ್ಯೇಕವಾಗಿ ನೋಡುವುದನ್ನು ಕೈ ಬಿಟ್ಟು ಎಲ್ಲಾ ಧರ್ಮ ಧರ್ಮಗಳ ಮಧ್ಯೆ ಸೇತುವೆ ಕಟ್ಟುವ ಕಾರ್ಯ ಮಾಡಬೇಕು, ಹೃದಯಗಳನ್ನು, ಮನಸ್ಸುಗಳನ್ನು ಕಟ್ಟುವ ಪ್ರಯತ್ನ ಮಾಡಬೇಕು ಎಂದು ನಿತ್ಯೋತ್ಸವ ಕವಿ ನಾಡೋಜ ಪ್ರೊ.ಕೆ.ಎಸ್.ನಿಸಾರ್ ಅಹ್ಮದ್ ಅಭಿಪ್ರಾಯಪಟ್ಟರು
ಹುಳಿಯಾರಿನ ಟಿಪ್ಪುಸುಲ್ತಾನ್ ಸಂಘದ ಆತಿಥ್ಯ ಸ್ವೀಕರಿಸಿ ಸದಸ್ಯರುಗಳನ್ನು ಉದ್ದೇಶಿಸಿ ಮಾತನಾಡಿದ ಡಾ.ಕೆ.ಎಸ್.ನಿಸಾರ್ ಅಹ್ಮದ್ ಸಮನ್ವಯ,ಸಾಮರಸ್ಯ,ಸೌಹಾದ೯ತೆ,ಧಮ೯ಸಹಿಷ್ಣುತೆ ಕನ್ನಡಿಗರ ಹುಟ್ಟುಗುಣವಾಗಿದ್ದು, ಟಿಪ್ಪುಸಂಘಟನೆಯವರು ಇಲ್ಲಿನ ಎಲ್ಲಾ ಸಂಘಸಂಸ್ಥೆಗಳೊಂದಿಗೆ ಒಟ್ಟಾಗಿ ಜನಪರವಾಗಿ ಕಾಯ೯ನಿವ೯ಹಿಸಿ, ಜನರ ಮನಸ್ಸಿನಲ್ಲಿ ಚಿರವಾಗಿ ನೆಲೆಸಬೇಕು ಎಂದರು.
ಕೆಲವೇ ಮಂದಿಯ ಸ್ವಾರ್ಥದಿಂದ ಮುಸ್ಲಿಂಮರ ಬಗ್ಗೆ ಜನಮಾನಸದಲ್ಲಿ ಇಸ್ಲಾಂ ಧರ್ಮದ ಬಗ್ಗೆ ಅಪಾರ್ಥಕ್ಕೆಡೆಮಾಡಿಕೊಟ್ಟಿದೆ.ಇದಕ್ಕೆ ಹೊರಗಿನವರು ಕಾರಣರಲ್ಲ ಮುಸ್ಲಿಮರ ಒಳಗಿನ ಒಳಸುಳಿಗಳೇ ಕಾರಣ.ಉಳಿದ ಧರ್ಮಗಳಷ್ಟೆ ಶ್ರೇಷ್ಠ ಉದಾತ್ತ ಧ್ಯೇಯಗಳನ್ನು ಹೊಂದಿರುವ ಇಸ್ಲಾಂ ಧರ್ಮದ ಬಗ್ಗೆ ಎಲ್ಲರಲ್ಲೂ ಅಪನಂಬಿಕೆ ಹೆಚ್ಚುತ್ತಿದೆತ್ತಿದೆ.ಯುವಜನತೆ ಈ ಬಗ್ಗೆ ಎಚ್ಚೆತ್ತುಕ್ಕೊಂಡು ಮತ್ತೆ ನಂಬಿಕೆ ಹುಟ್ಟಿಸುವ ಕೆಲಸ ಮಾಡಬೇಕೆಂದು ಕರೆ ನೀಡಿದರು.
ಜಗತ್ತಿನಲ್ಲಿರುವ ಎಲ್ಲ ಧರ್ಮಗಳು ಕೂಡ ಶ್ರೇಷ್ಠ. ಎಲ್ಲ ಧರ್ಮಗಳನ್ನು ಗೌರವಿಸುವ ಒಬ್ಬರಿಗೊಬ್ಬರು ಬೆರೆಯುವ, ಬೆಳೆಯುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ವಿವಿಧ ಧರ್ಮೀಯರನ್ನು ಒಗ್ಗೂಡಿಸಿ ಮನಸ್ಸು- ಮನಸ್ಸುಗಳ ನಡುವೆ ಸೇತುವೆ ಕಟ್ಟುವ ಬದಲು ಗೋಡೆ ಕಟ್ಟುತ್ತಿದ್ದೇವೆ ಎಂದು ವಿಷಾದಿಸಿದರು.
ಖ್ಯಾತ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯನವರು ಮಾತನಾಡಿ ರಾಜಕಾರಣದ ಉದ್ದೇಶದಿಂದ ನಮ್ಮಗಳ ಮಧ್ಯೆ ಜಾತಿ ಗೋಡೆ ನಿರ್ಮಾಣವಾಗುತ್ತಿದ್ದು ಇದರಿಂದ ನಾವೆಲ್ಲಾ ಒಂದೇ ಎನ್ನುವ ಭಾವ ದೂರವಾಗುತ್ತಿದೆ.ಈ ಬಗ್ಗೆ ಯುವಸಮೂಹ ಎಚ್ಚೆತ್ತುಕೊಂಡು ಸಾಮರಸ್ಯದಿಂದ ಬದುಕಬೇಕೆಂದರು.
ಟಿಪ್ಪು ಸುಲ್ತಾನ್ ಯುವಕ ಸಂಘದ ಅಧ್ಯಕ್ಷ ಮಹ್ಮದ್ ರಫೀಕ್, ಉಪಾಧ್ಯಕ್ಷ ಅಪ್ಸರ್ ಅಲಿ ,ಫಯಾಜ್,ಇಮ್ರಾನ್ ಪಾಷ,ಸದ್ದಾಂಹುಸೇನ್,ಮಹ್ಮದ್,ಸಾದಿಕ್ ಪಾಷ,ಇಮ್ರಾಝ್, ಜಾವಿದ್ ಹಾಗೂ ಸಂಘದ ಸದಸ್ಯರುಗಳಲ್ಲದೆ ಮೆಡಿಕಲ್ ಈಶಣ್ಣ,ರಂಗನಾಥ್ ಪ್ರಸಾದ್,ತೋಟದಮನೆ ಸೋಮಶೇಖರ್,ಪ್ರದೀಪ್ ಮುಂತಾದವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ