ಕೃಷಿ ವಿಶ್ವವಿದ್ಯಾನಿಲಯ ಜಿಕೆವಿಕೆ ಬೆಂಗಳೂರು, ಸಮುದಾಯ ಆಧಾರಿತ ಕೆರೆ ನಿರ್ವಹಣಾ ಯೋಜನೆ ಸಲಹಾ ಸೇವೆ, ತುಮಕೂರು ಜಿಲ್ಲಾ ಯೋಜನಾ ಘಟಕ ಹಾಗೂ ಶ್ರೀ ವಿರಭದ್ರೇಶ್ವರಸ್ವಾಮಿ ಕೆರೆ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ಮುದ್ದೇನಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಡಿಯಲ್ಲಿ ಬೆಳೆದ ಟಮ್ಯಾಟೋ ಬೆಳೆಯ ಕ್ಷೇತ್ರೂತ್ಸವ ಮುಂಗಾರು-2012 ಕಾರ್ಯಕ್ರಮ ನಡೆಯಿತು.
ಕ್ಷೇತ್ರೋತ್ಸವದಲ್ಲಿ ಸಹಕರ್ತ ರೈತರಾದ ಧನಂಜಯರವರು ಟಮ್ಯಾಟೋ ಬೆಳೆಯ ಅಧಿಕ ಇಳುವರಿಗೆ, ನಾಟಿ ಮಾಡುವುದರಿಂದ ಕಟಾವುವರೆಗೆ ಸಾವಯವ ಗೂಬ್ಬರದ ಬಳಕೆ, ಪೀಡೆ ನಿಯಂತ್ರಣದ ಬಗ್ಗೆ ವಿವರಣೆ ನೀಡಿದರು.ಅಲ್ಲದೆ ಈ ಪದ್ದತಿಯನ್ನು ಅಳವಡಿಸುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದಾಗಿದ್ದು,ಜೈವಿಕ ಗೂಬ್ಬರಗಳ ಬಳಕೆಯಿಂದ ಸೂರಗು ರೋಗ ಹತೋಟಿ ಮಾಡಬಹುದೆಂದು ತಿಳಿಸಿದರು. ಜಿಲ್ಲಾ ಸಂಯೋಜಕರಾದ ಡಾ,,ಎನ್.ಗೋಪಿನಾಥನ್ ಸೇರಿದಂತೆ ಅನೇಕ ರೈತ ಹಾಗೂ ರೈತ ಮಹಿಳೆಯರು ಭಾಗವಹಿಸಿದ್ದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ