ಕೃಷಿ ವಿಶ್ವವಿದ್ಯಾನಿಲಯ ಜಿಕೆವಿಕೆ ಬೆಂಗಳೂರು, ಸಮುದಾಯ ಆಧಾರಿತ ಕೆರೆ ನಿರ್ವಹಣಾ ಯೋಜನೆ ಸಲಹಾ ಸೇವೆ, ತುಮಕೂರು ಜಿಲ್ಲಾ ಯೋಜನಾ ಘಟಕ ಹಾಗೂ ಶ್ರೀ ಗಂಗಮ್ಮದೇವಿ ಕೆರೆ ಅಭಿವೃದ್ದಿ ಸಂಘದ ಸಂಯುಕ್ತಾಶ್ರಯದಲ್ಲಿ ಸಮಗ್ರ ಬೆಳೆ ನಿರ್ವಹಣೆ ಪ್ರಾತ್ಯಕ್ಷಿಕೆಯಲ್ಲಿ ತರಕಾರಿ ಬೆಳೆಗಳ ಕ್ಷೇತ್ರೋತ್ಸವ ಮುಂಗಾರು-2012 ಕಾರ್ಯಕ್ರಮ ಚಿಕ್ಕನಾಯಕನಹಳ್ಳಿ ತಾಲ್ಲೂಕು ಬಂಗಾರಗೆರೆ ಗ್ರಾಮದಲ್ಲಿ ಶನಿವಾರದಂದು ನಡೆಸಲಾಯಿತು.
ಹುಳಿಯಾರು ಸಮೀಪದ ಬಂಗಾರಗೆರೆ ಗ್ರಾಮದಲ್ಲಿ ನಡೆದ ಸಮಗ್ರ ಬೆಳೆ ನಿರ್ವಹಣೆ ಪ್ರಾತ್ಯಕ್ಷಿಕೆಯಲ್ಲಿ ತರಕಾರಿ ಬೆಳೆಗಳ ಕ್ಷೇತ್ರೋತ್ಸವದಲ್ಲಿ ರೈತರಿಗೆ ಮಾಹಿತಿ ನೀಡುತ್ತಿರುವ ಅಧಿಕಾರಿಗಳು.
ಕ್ಷೇತ್ರೋತ್ಸವದಲ್ಲಿ ಜಿಲ್ಲಾ ಸಂಯೋಜಕರಾದ ಡಾ,,ಎನ್.ಗೋಪಿನಾಥನ್ ರವರು ಭಾಗವಹಿಸಿ ತರಕಾರಿ ಬೆಳೆಗಳಾದ ಮೆಣಸಿನಕಾಯಿ, ಟೊಮ್ಯಾಟೋ, ಹೆಬ್ಬಾಳ ಅವರೆ, ತೂಗರಿ ಬೆಳೆಗಳಲ್ಲಿ ಅನುಸರಿಸಿದ ಜೈವಿಕ ಗೂಬ್ಬರಗಳ ಬಳಕೆ,ನಾಟಿ ಮಾಡುವಾಗ ಸಾಲುಗಳ ಅಂತರ ನೀರು ಸಿಂಪರಣೆ,ನಿರ್ವಹಣೆಗಳ ಬಗ್ಗೆ ರೈತರಿಗೆ ಸಮಗ್ರ ಮಾಹಿತಿ ತಿಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ