ಇಲ್ಲಿನ ಎಪಿಯಂಸಿಗೆ ನಡೆದಿದ್ದ ಚುನಾವಣೆಯ ಫಲಿತಾಂಶ ಮಂಗಳವಾರದಂದು ಹೊರಬಿದಿದ್ದು ವ್ಯವಸಾಯಗಾರರ ಹುಳಿಯಾರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಆರ್.ಪಿ.ವಸಂತಯ್ಯ ಹಾಗೂ ವ್ಯವಸಾಯಗಾರರ ಯಳನಡು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ವೈ.ಸಿ.ಸಿದ್ರಾಮಯ್ಯ ವಿಜೇತರಾಗಿದ್ದು ಇಂದು ತಮ್ಮ ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿಕೊಂಡರು.ಮೊದಲಿಗೆ ಬಿಜೆಪಿ ಅಭ್ಯರ್ಥಿ ಆರ್.ಪಿ.ವಸಂತಯ್ಯ ವಿಜೇತರಾದ ಸುದ್ದಿ ಹೊರಬೀಳುತ್ತಿದ್ದಂತೆ ಕಾರ್ಯಕರ್ತರುಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ವಾದ್ಯದೊಂದಿಗೆ ಪಟ್ಟಣದ ಎಲ್ಲಾ ಬೀದಿಗಳಲ್ಲೂ ಬಿಜೆಪಿ ಪರ ಘೋಷಣೆ ಕೂಗುತಾ ಸಂಭ್ರಮಿಸಿದರು.ತಾ.ಪಂ.ಸದಸ್ಯ ನವೀನ್,ಯುಸಿ ಗೌಡ,ಪ್ರಸನ್ನ ಕುಮಾರ್,ರಾಘವೇಂದ್ರ ,ರಾಮಣ್ಣ ಮುಂತಾದವರಿದ್ದರು.ಕಾಂಗ್ರೆಸ್ ಅಭ್ಯರ್ಥಿ ವೈ.ಸಿ.ಸಿದ್ರಾಮಯ್ಯ 614 ಮತ ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಲಕ್ಷ್ಮಯ್ಯನಿಗಿಂತ 129 ಮತಗಳ ಅಂತರದಿಂದ ಜಯಗಳಿಸಿದ ಸುದ್ದಿ ತಿಳಿಯುತಿದ್ದಂತೆ ಕಾರ್ಯಕರ್ತರುಗಳು ಪ್ರಮುಖ ಬಿದಿಗಳಲ್ಲಿ ಮೆರವಣಿಗೆ ಮಾಡಿದರು. ಯುವ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್,ಅಶೋಕ್,ರಂಗನಾಥ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಒಟ್ಟಾರೆ ಹುಳಿಯಾರು ಎ.ಪಿ.ಎಂ.ಸಿ ಯ ಚುನಾವಣೆಯ ಒಟ್ಟು 12 ಕ್ಷೇತ್ರ ಗಳಲ್ಲಿನ ಸ್ಪರ್ಧಿಗಳು ಪಡೆದ ಮತಗಳಿಕೆ ಈಗಿದೆ.
1)ಹುಳಿಯಾರು ಕ್ಷೇತ್ರ:-ಆರ್.ಪಿ.ವಸಂತಯ್ಯ-842, ಕೆ.ಎಮ್.ರಾಜಶೇಖರಪ್ಪ-687, ಸೈಯದ್ ಜಲಾಲ್-257, ಹೆಚ್.ಆರ್.ರಂಗನಾಥ್-122,
ಬಿಜೆಪಿಯ ಆರ್.ಪಿ.ವಸಂತಯ್ಯ ಜಯಗಳಿಸಿದ್ದಾರೆ.
2) ಹೊಯ್ಸಳಕಟ್ಟೆ ಕ್ಷೇತ್ರ :- ರುದ್ರಪ್ಪ-444, ಡಿ.ಜಿ.ರಾಜಶೇಖರ ನಾಯ್ಕ-258, ಲಚ್ಚಾನಾಯ್ಕ-192, ರಾಮಾನಾಯ್ಕ-140, ಸೋಮಶೇಖರನಾಯ್ಕ-74,
ಜೆಡಿಎಸ್ ಪಕ್ಷದ ರುದ್ರಪ್ಪ ಜಯಗಳಿಸಿದ್ದಾರೆ.
3)ಯಳನಡು ಕ್ಷೇತ್ರ:-ವೈ.ಸಿ.ಸಿದ್ದರಾಮಯ್ಯ-614, ಲಕ್ಷ್ಮಯ್ಯ-485, ರಮೇಶ್ ಟಿ.ಕೆ.-280, ಕರಿಯಪ್ಪ ಪೂಜಾರಿ-208
ಕಾಂಗ್ರೇಸ್ ಪಕ್ಷದ ವೈ.ಸಿ.ಸಿದ್ದರಾಮಯ್ಯ ಜಯಗಳಿಸಿದ್ದಾರೆ.
4) ಹಂದನಕೆರೆ ಕ್ಷೇತ್ರ :-ಸೋಮಶೇಖರಯ್ಯ-1050, ಚಂದ್ರಣ್ಣ-895, ಆರ್.ಜಿ.ನೀಲಕಂಠಪ್ಪ-95, ಕಾಂತರಾಜ್ ಅರಸ್-03,
ಜೆಡಿಯುನಿಂದ ಸೋಮಶೇಖರಯ್ಯ ಜಯಗಳಿಸಿದ್ದಾರೆ.
5) ತಿಮ್ಮನಹಳ್ಳಿ ಕ್ಷೇತ್ರ :-ಸಣ್ಣಕರಿಯಪ್ಪ-473, ರಾಮಚಂದ್ರಯ್ಯ-330 ಎಸ್.ಆರ್. ಸ್ವಾಮಿನಾಥ್-288, ಬಸವರಾಜು-25
ಜೆಡಿಯು ಪಕ್ಷದ ಸಣ್ಣ ಕರಿಯಪ್ಪ ಜಯಗಳಿಸಿದ್ದಾರೆ.
6) ತೀರ್ಥಪುರ ಕ್ಷೇತ್ರ :- ದ್ರಾಕ್ಷಾಯಣಮ್ಮ-798, ವಸಂತ ಲಕ್ಷ್ಮೀ-790, ಲತಾ-258, ಈರಮ್ಮ-145
ಜೆಡಿಯು ಪಕ್ಷದ ದ್ರಾಕ್ಷಾಯಣಮ್ಮ ಜಯಗಳಿಸಿದ್ದಾರೆ.
7) ಕಂದಿಕೆರೆ ಕ್ಷೇತ್ರ :- ಸಣ್ಣಯ್ಯ-773, ಬಿ.ಕೆ.ಜಯಣ್ಣ-745, ಬಿ.ಪಂಚಾಕ್ಷರಯ್ಯ-116
ಜೆಡಿಯುನ ಸಣ್ಣಯ್ಯ ಜಯಗಳಿಸಿದ್ದಾರೆ.
8) ಕಸಬಾ ಕ್ಷೇತ್ರ :- ಸಿ.ಎಂ.ರಂಗಸ್ವಾಮಿ-679, ಲಿಂಗರಾಜು-310, ಸಿ.ಕೆ.ಶಾಂತಕುಮಾರ್-104, ಕೆ.ಶಿವಣ್ಣ-104, ಬಸವರಾಜು-51, ಸಿ.ಕೆ.ಗುರುಸಿದ್ದಯ್ಯ-39, ಶಾಂತಕುಮಾರ್-12
ಜೆಡಿಎಸ್ ನ ಸಿ.ಎಂ.ರಂಗಸ್ವಾಮಿಯವರು ಜಯಗಳಿಸಿದ್ದಾರೆ.
9) ಮತಿಘಟ್ಟ ಕ್ಷೇತ್ರ :-ಹೆಚ್.ಕೆ.ಬಸವರಾಜು-863, ನಟರಾಜು-688, ಬಸವರಾಜು-467
ಜೆಡಿಯುನ ಹೆಚ್.ಕೆ.ಬಸವರಾಜು ಜಯಗಳಿಸಿದ್ದಾರೆ.
10) ಶೆಟ್ಟಿಕೆರೆ ಕ್ಷೇತ್ರ :-ಕೆ.ಎಂ. ಈಶ್ವರಮೂರ್ತಿ-870, ಕೃಷ್ಣಮೂರ್ತಿ-602,ಎನ್.ಬಿ. ಸಿದ್ದೇಗೌಡ-368, ಬಿ.ಸಿ.ಶಿವಕುಮಾರಸ್ವಾಮಿ-70
ಜೆಡಿಯುಪಕ್ಷದ ಕೆ.ಎಂ.ಈಶ್ವರಮೂರ್ತಿಯವರು ಜಯಗಳಿಸಿದ್ದಾರೆ.
11) ಜೆ.ಸಿ.ಪುರ ಕ್ಷೇತ್ರ :- ಎಂ.ಎಸ್.ಶಿವರಾಜು-1094, ಗಂಗಾಧರಯ್ಯ-389, ಎಸ್.ಜಿ.ಮಹೇಶ್-356, ಬಿ.ಶಿವಶಂಕರಯ್ಯ-93, ನಿಜಾನಂದಮೂರ್ತಿ-81
ಜೆಡಿಯು ಪಕ್ಷದ ಎಂ.ಎಸ್.ಶಿವರಾಜು ಜಯಗಳಿಸಿದ್ದಾರೆ.
12) ವರ್ತಕರ ಕ್ಷೇತ್ರ :- ಸಿ.ಎಸ್.ಶಾಂತಕುಮಾರ್-52,ಎಲ್.ಆರ್.ಬಾಲಾಜಿ-36, ವೈ.ಎ.ರಿಯಾಜ್ ಅಹಮದ್-04, ಕೆ.ನಿಂಗರಾಜು-01
ಜೆಡಿಯುನ ಸಿ.ಎಸ್.ಶಾಂತಕುಮಾರ್ ಜಯಗಳಿಸಿದ್ದಾರೆ.
ಒಟ್ಟು 12 ಕ್ಷೇತ್ರಗಳಲ್ಲಿ 08 ಕ್ಷೇತ್ರಗಳಲ್ಲಿ ಜೆಡಿಯು ಹಾಗು ಜೆಡಿಎಸ್ 02 ಬಿಜೆಪಿ ಹಾಗು ಕಾಂಗ್ರೇಸ್ ತಲಾ ಒಂದೊಂದು ಸ್ಥಾನಗಳಲ್ಲಿ ಜಯಗಳಿಸಿದೆ.
ಹುಳಿಯಾರಿನ ಎಪಿಯಂಸಿಗೆ ನಡೆದಿದ್ದ ಚುನಾವಣೆಯಲ್ಲಿ ವ್ಯವಸಾಯಗಾರರ ಹುಳಿಯಾರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಆರ್.ಪಿ.ವಸಂತಯ್ಯನ ವಿಜಯೋತ್ಸವ.
ಯಳನಡು ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ವೈ.ಸಿ.ಸಿದ್ರಾಮಯ್ಯ ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ