ಜಾನಪದ ಸಾಹಿತ್ಯವಾದ ಲಾವಣಿ,ಜಾನಪದ ಗೀತೆಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಜೀವಂತವಾಗಿದ್ದು, ಕನ್ನಡ ಭಾಷೆ ಉಳಿದು ಬಾಳಬೇಕಾದರೆ ಕರ್ನಾಟಕದ ಕಟ್ಟ ಕಡೆಯ ಪ್ರಜೆಗೂ ಕನ್ನಡ ಸಾಹಿತ್ಯ ಹಾಗೂ ಸಂಗೀತ ತಲುಪಿದಾಗ ಮಾತ್ರ ಸಾಧ್ಯವೆಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ರವಿಕುಮಾರ್ ತಿಳಿಸಿದರು
ಹುಳಿಯಾರು ಹೋಬಳಿ ಕಟ್ಟಡ ನಿರ್ಮಾಣ ಕಾರ್ಮಿಕ ಸಂಘದವರು ಸೋಮವಾರದಂದು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕನ್ನಡ ಭಾಷೆ,ಸಾಹಿತ್ಯದ ಮಹತ್ವವನ್ನು ಎಲ್ಲರೂ ತಿಳಿದು,ಇತರರಿಗೂ ತಿಳಿಸುವ ಕಾರ್ಯ ನಡೆಯಬೇಕಿದೆ. ಅನ್ಯಭಾಷೆಗಳ ಹಾವಳಿ ನಡುವೆ ಕನ್ನಡ ಭಾಷೆ ಹಾಗೂ ಸಂಸ್ಕೃತಿ ಜೀವಂತವಾಗಿದೆ ಎಂದರು.
ಹುಳಿಯಾರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಚ್.ಕೆ.ರಾಮಯ್ಯ ಮಾತನಾಡಿ,ಪ್ರಸ್ತುತ ಕನ್ನಡ ನಾಡಿನ ಅನೇಕ ಪ್ರದೇಶಗಳು ಇತರ ರಾಜ್ಯದವರ ಪಾಲಾಗುವಂತ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಕನ್ನಡ ಜನತೆ ಎಚ್ಚೆತ್ತುಕೊಂಡು ಯಾವುದೇ ಹೋರಾಟ ಮಾಡಲು ಸಿದ್ದವಾಗಿರ ಬೇಕು ಎಂದರು.
ಸೋಮವಾರ ಬೆಳಿಗ್ಗೆ ಸಂಘದ ಕಛೇರಿ ಆವರಣದಲ್ಲಿ ಧ್ವಜಾರೋಹಣವನ್ನು ನಡೆಸಿ,ನಂತರ ಭುವನೇಶ್ವರಿ ದೇವಿ,ರಾಷ್ಟ್ರಕವಿ ಕುವೆಂಪು, ವಿಶ್ವೇಶ್ವರಯ್ಯ,ಸಿ.ವಿ.ರಾಮನ್,ಟಿಫ್ಫು ಸುಲ್ತಾನ್ ಅವರ ಭಾವಚಿತ್ರಗಳನ್ನು ಅಲಂಕರಿಸಿ ಪಟ್ಟಣದ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಕರಿಯಾನಾಯ್ಕ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು,ಹೋಬಳಿ ಸ್ವಾತಂತ್ರ್ಯ ಹೋರಾಟಗಾರ ಸಂಘದ ಅಧ್ಯಕ್ಷ ವೆಂಕಟಚಲಪತಿಶೆಟ್ಟಿ,ಚೈತನ್ಯ ಹಾರ್ಡ್ ವೇರ್ ನ ಗುರುನಾಥ್,ಲಕ್ಷ್ಮಿ ಹಾರ್ಡ್ ವೇರ್ ನ ಪ್ರಭಾಕರ್,ಕಲ್ಪತರು ಬ್ರಿಕ್ಸ್ ಅಂಡ್ ಟೈಲ್ಸ್ ನ ಟಿ.ಎಸ್.ರಂಗನಾಥ ಶೆಟ್ಟಿ,ಕಟ್ಟಡ ನಿರ್ಮಾಣ ಕಾರ್ಮಿಕ ಸಂಘದ ಗೌರವಾಧ್ಯಕ್ಷ ಕೃಷ್ಣಮೂರ್ತಿ,ಉಪಾಧ್ಯಕ್ಷ ವೆಂಕಟೇಶ್,ಕಾರ್ಯದರ್ಶಿ ಮಂಜುನಾಥ್,ಸುರೇಶ್,ದುರ್ಗಯ್ಯ ಹಾಗೂ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಹುಳಿಯಾರು ಹೋಬಳಿ ಕಟ್ಟಡ ಕಾರ್ಮಿಕ ಸಂಘದವರು ಆಯೋಜಿಸಿದ್ದ ಕನ್ನಡರಾಜ್ಯೋತ್ಸವ ಸಮಾರಂಭದ ಉದ್ಘಾಟನೆಯನ್ನು ಕ.ಸಾ.ಪ ಅಧ್ಯಕ್ಷ ರವಿಕುಮಾರ್ ನೆರವೇರಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ