ಇಂಗ್ಲೀಷು,ತಮಿಳು,ತೆಲುಗು ಸೇರಿದಂತೆ ಅನೇಕ ಅನ್ಯ ಭಾಷೆಗಳ ಮಧ್ಯೆ ಇಂದು ನಮ್ಮ ಕನ್ನಡಭಾಷೆ ನಲುಗಿ ಹೋಗಿ ಕರ್ನಾಟಕದಲ್ಲೇ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ ನಗರಪ್ರದೇಶಗಳಲ್ಲಿ ಸೃಷ್ಥಿಯಾಗಿದೆ .ಪರಭಾಷಾ ವ್ಯಾಮೋಹದಿಂದಾಗಿ ಕನ್ನಡನಾಡಲ್ಲಿ ಕನ್ನಡ ಮಾತನಾಡುವ ಕನ್ನಡಿಗರಿಗಾಗಿ ಶೋಧ ಕಾರ್ಯ ನಡೆಸುವಂತಾಗಿದೆ. ಕನ್ನಡ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ ಎಂದರೆ ಅದು ಹೆಚ್ಚಿನದಾಗಿ ಗ್ರಾಮೀಣ ಭಾಗದಲ್ಲಿ ಮಾತ್ರ,ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಮೂಲಕ ಕರ್ನಾಟಕದಲ್ಲಿ ಕನ್ನಡ ಭಾಷೆಯ ನೆಲೆಯನ್ನು ಭದ್ರಗೊಳಿಸಲು ಎಲ್ಲರೂ ಕೈಜೋಡಿಸಬೇಕೆಂದು ಮಾಸ್ಟರ್ ಹಿರಣ್ಣಯ್ಯ ಕರೆ ನೀಡಿದರು.
ಹುಳಿಯಾರಿನ ವಿವಿಧ ಸಂಘಟನೆಗಳ ಸದಸ್ಯರೊಂದಿಗೆ ಕವಿ ಕೆ.ಎಸ್.ನಿಸಾರ್ ಅಹಮದ್ ಹಾಗೂ ರಂಗಭೂಮಿ ಕಲಾವಿದರಾದ ಮಾಸ್ಟರ್ ಹಿರಣಯ್ಯ
|
ಖ್ಯಾತ ಕವಿ ನಿಸಾರ್ ಅಹಮದ್ ಅವರೊಂದಿಗೆ ಹುಳಿಯಾರಿಗೆ ಆಗಮಿಸಿದ್ದ ಅವರು ಕನ್ನಡ ಸಾಹಿತ್ಯ ಪರಿಷತ್ ನ ಸಂಚಾಲಕರು ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರೊಂದಿಗೆ ತಮ್ಮ ಸಂತಸದ ಕ್ಷಣ ಹಂಚಿಕೊಂಡು ಮಾತನಾಡಿದರು.
ಪ್ರೋ||ನಿಸಾರ್ ಅಹ್ಮದ್ ಮಾತನಾಡಿ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳ ಬದಲಿಗೆ ಹೋಬಳಿ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಲು ಹೊರಟಿರುವುದು ಉತ್ತಮ ಬೆಳವಣಿಗೆಯಾಗಿದೆ.ಈ ಸಮ್ಮೇಳನಗಳಲ್ಲಿ ಉದಯೋನ್ಮುಖ ಯುವ ಬರಹಗಾರರಿಗೆ ಅವಕಾಶ ಕಲ್ಪಿಸಿ ಅವರು ರಚಿಸಿರುವ ಸಾಹಿತ್ಯ ಕೃತಿಗಳನ್ನು ವಿಮರ್ಷಿಸಿ,ಅವುಗಳನ್ನು ಪ್ರಕಟಿಸಿ ಎಂದು ಸಲಹೆ ನೀಡಿದರು. ಇಂದು ಕನ್ನಡ ಉಳಿದಿದೆ ಎಂದು ಗ್ರಾಮೀಣ ಭಾಗದಲ್ಲಿ ಮಾತ್ರ ಎಂಬುದಕ್ಕೆ ನೀವು ಕೈಗೊಂಡಿರುವ ಈ ಕಾರ್ಯಕ್ರಮಗಳೇ ಸಾಕ್ಷಿ.ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಆಯೋಜಿಸುವ ಸಾಹಿತ್ಯ ಕಾರ್ಯಕ್ರಮಗಳ ಪಾಲ್ಗೊಳ್ಳುವವರ ಸಂಖ್ಯೆ ಬೆರಲೆಣಿಕೆಯಷ್ಠಿದೆ ಕಾರಣ ಅಲ್ಲಿ ಕನ್ನಡಿಗರಿಗಿಂತ ಹೆಚ್ಚಾಗಿ ಇತರೆ ಭಾಷೆಗಳನ್ನಾಡುವ ಮಂದಿ ಹೆಚ್ಚಿದ್ದರೆ,ಮತ್ತೊಂದು ಕಡೆ ಕನ್ನಡ ಬಲ್ಲವರು ಕನ್ನಡ ತಿಳಿದಿಲ್ಲದವರಂತೆ ಇರುತ್ತಾರೆ ಇಂತಹವರ ಮಧ್ಯೆ ಯಾವುದೇ ಕನ್ನಡಪರ ಕಾರ್ಯಕ್ರಮ ಮಾಡುವ ಅಗತ್ಯವಿಲ್ಲ ಎಂದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ