ಕರ್ನಾಟಕದಲ್ಲಿ ಜನಿಸಿರುವಂತಹ ಕನ್ನಡಾಂಬೆಯ ಮಕ್ಕಳಾದ ಪ್ರತಿಯೊಬ್ಬ ಪ್ರಜೆಯೂ ಕನ್ನಡನಾಡಿನ ನೆಲ,ನುಡಿ,ಜಲ,ಸಂಸ್ಕೃತಿಯನ್ನು ಪುಕ್ಕಟ್ಟೆಯಾಗಿ ಬಳಸಿಕೊಳ್ಳುತ್ತಿದ್ದೇವೆ ಅದರಂತೆಯೇ ಕನ್ನಡನಾಡಿನ ಬಗೆಗೆ ಗೌರವಹೊಂದಿ ಕನ್ನಡ ಭಾಷೆಗೆ ನೆಲ,ಜಲಕ್ಕೆ ಧಕ್ಕೆಯಾಗದಂತೆ ನಡೆದುಕೊಂಡು,ಕನ್ನಡನಾಡು ನಮ್ಮದು ಎಂಬ ಅಭಿಮಾನದಿಂದ ಕನ್ನಡ ನಾಡಿನ ಋಣವನ್ನು ತೀರಿಸಬೇಕಿದೆ ಮಾಜಿ ಶಾಸಕ ಜಿ.ಸಿ.ಮಾಧುಸ್ವಾಮಿ ತಿಳಿಸಿದರು.
ಹುಳಿಯಾರು ಹೋಬಳಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಮಹಿಳಾ ಕರವೇ ಘಟಕ,ಹೋಬಳಿಯ ಕನ್ನಡಪರ ಸಂಘಟನೆಗಳ ಸಹಯೋಗದೊಂದಿಗೆ ಬುಧವಾರ ಬೆಳಿಗ್ಗೆ ನಡೆದ 57ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕರ್ನಾಟಕ ಏಕೀಕರಣಗೊಂಡು 57ವರ್ಷಗಳು ಕಳೆದಿದ್ದು ಅದರ ಆಚರಣೆ ಅಂದಿನಿಂದ ಇಂದಿನವರೆಗೂ ನಡೆಸಿಕೊಂಡು ಬಂದಿರುವುದು ಸಂತಸವನ್ನುಂಟುಮಾಡಿದೆ.ಇಂದು ನಾವು ಅಭಿವೃದ್ದಿಯಾಗದೇ ಬರಿ ನಮ್ಮ ರಕ್ಷಣೆಯಲ್ಲಿಯೇ ಸಾಗುತ್ತಿದ್ದೇವೆ,ಏಕೀಕರಣ ಸಂಧರ್ಭದಲ್ಲಿ ಅನೇಕ ವಿರೋಧ ವ್ಯಕ್ತವಾಗಿತ್ತು ಆದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತ ನೀತಿಯಿಂದ ಕರ್ನಾಟಕ ಏಕೀಕರಣಗೊಂಡಿದ್ದರಿಂದ ಮೈಸೂರು ಅರಸರನ್ನು ಇಂದು ಸ್ಮರಿಸಬೇಕಿದೆ ಎಂದರು.ನಾವು ಇತರೆ ರಾಜ್ಯದವರೊಂದಿಗೆ ಸಂವಹನ ನಡೆಸುವಾಗ ಕನ್ನಡದಲ್ಲಿ ಮಾತಾಡದೇ ಹಿಂದಿ,ತಮಿಳು,ತೆಲುಗು ಇತರೆ ಭಾಷೆಯಲ್ಲಿ ಮಾತಾಡಲು ಮುಂದಾಗುತ್ತೇವೆ,ಈ ರೀತಿ ಮಾಡದೇ ಕನ್ನಡ ಭಾಷೆಯಲ್ಲೇ ಮಾತಾಡಿ,ಯಾವ ಸಾಹಿತ್ಯವನ್ನು ಹೆಚ್ಚು ಬಳಸುತ್ತಾ ಹೋಗುತ್ತೇವೆ ಆ ಸಾಹಿತ್ಯ ಬೆಳೆಯುತ್ತದೆ ಇಲ್ಲವಾದರೆ ನಶಿಸುತ್ತದೆ ಎಂದರು.ವ್ಯವಹಾರಿಕವಾಗಿ ಯಾವುದೇ ಭಾಷೆ ಬಳಸಿ ಆದರೆ ಕನ್ನಡ ಭಾಷೆಯನ್ನು ಮರೆಯಬೇಡಿ,ಕಾವೇರಿಯಿಂದ ಗೋದಾವರಿಯವರೆಗೆ ಇದ್ದ ಕನ್ನಡನಾಡಿನ ಹಿರಿಮೆಯನ್ನು ಉಳಿಸಿ,ಬೆಳೆಸಿ ಎಂದು ತಿಳಿಸಿದರು.ಪ್ರತಿಯೊಬ್ಬರೂ ಸ್ವಾಭಿಮಾನದಿಂದ ಬಾಳಲು ಶಿಕ್ಷಣ ಬೇಕು.ಇಂದು ರಾಜಕಾರಣ,ಹೋರಾಟ,ಸಂಘಟನೆಗಳನ್ನು ಮಾಡಬಹುದು ಆದರೆ ಆಡಳಿತ ಮಾಡುವುದು ಸುಲಭದ ಮಾತಲ್ಲ.ಕನ್ನಡ ಭಾಷೆ ನೋವು ನಲಿವುನಲ್ಲಿಯೋ ನಮ್ಮೊಂದಿಗೆ ಇರುತ್ತದೆ ಎಂದರು.ಯಾವುದೇ ಭಾಷೆಯ ಅನಿಮಾರ್ಯತೆ ನಮಗಿಲ್ಲ. ಇನ್ಪೋಸಿಸ್ ,ವಿಪ್ರೋ ನಂತಹ ಅನೇಕ ಸಾಫ್ ವೇರ್ ಕಂಪನಿಗಳು ಅಭಿವೃದ್ದಿಯ ನೆಪದಲ್ಲಿ ಸ್ಥಾಪನೆಯಾಗಿ ಕನ್ನಡನಾಡಿನ ಜನತೆಯನ್ನೇ ಮರೆತಿದ್ದಾರೆಂದು ವಿಷಾದಿಸಿದರು.
ಮಧ್ಯಾಹ್ನದ ನಂತರ ಪಟ್ಟಣದ ರಾಜ ಬೀದಿಗಳಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಿ,ಶ್ರೀ ಭುವನೇಶ್ವರಿದೇವಿಯ ಭವ್ಯ ಮೆರವಣಿಗೆಯಲ್ಲಿ ನಾಸಿಕ್ ಡೋಲು,ವೀರಗಾಸೆ,ಡೋಳ್ಳುಕುಣಿತ,ಮದ್ದುಗುಂಡು,ಸ್ತಬ್ದಚಿತ್ರಗಳು ಹಾಗೂ ಜಾನಪದ ಕಲಾತಂಡಗಳಿಂದ ವಿವಿಧ ಪ್ರದರ್ಶನಗಳು ನಡೆದವು.
ರೈತಸಂಘದ ಕೆಂಕೆರೆ ಸತೀಶ್,ಚಿ.ನಾ.ಹಳ್ಳಿ ತಾಲ್ಲೂಕು ಕರವೇ ಕಾರ್ಯದರ್ಶಿ ರೇಣುಕ ಮಾರ್ತಿ,ತಾ.ಪಂ.ಸದಸ್ಯ ಜಯಣ್ಣ,ಹುಳಿಯಾರು ಕರವೇ ಗೌರವಾಧ್ಯಕ್ಷರಾದ ರಂಗಸ್ವಾಮಿ,ಬೀರಪ್ಪ,ಮಹಿಳಾ ಘಟಕದ ಅಧ್ಯಕ್ಷೆ ರತ್ನರಂಜನಿ,ತಾ.ಪಂ.ಮಾಜಿ ಸದಸ್ಯ ಮಲ್ಲಿಕಾರ್ಜುನಯ್ಯ,ಮೆಡಿಕಲ್ ದೇವಣ್ಣ,ಗ್ರಾ.ಪಂ.ಸದಸ್ಯ ಬಡ್ಡಿ ಪುಟ್ಟರಾಜು,ಯಳನಡು ವಿಎಸ್.ಎಸ್.ನ ಅಧ್ಯಕ್ಷ ಕುಮಾರ್,ಸಜ್ಜಾದ್,ಖಾಸಗಿ ಬಸ್ ಏಜೆಂಟ್ ಸಂಘದ ಲೋಕೇಶಣ್ಣ ಅತಿಥಿಗಳಾಗಿ ಆಗಮಿಸಿದ್ದು,ಉಪನ್ಯಾಸಕ ಹಾಲಪ್ಪ ಪ್ರಾಸ್ತಾವಿಕ ನುಡಿ ನುಡಿದರು.ಶಿಕ್ಷಕ ಗಂಗಾಧರಯ್ಯ ನಿರೂಪಿಸಿ,ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ