ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲಾ ವಿಭಾಗಕ್ಕೆ ಬುಧವಾರದಂದು ಭೇಟಿ ನೀಡಿದ ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹಮದ್ ಮಾತನಾಡಿದರು.ರಂಗಭೂಮಿ ಕಲಾವಿದರಾದ ಮಾಸ್ಟರ್ ಹಿರಣಯ್ಯ ,ಉಪಪ್ರಾಂಶುಪಾಲರಾದ ಇಂದಿರಾ ಇದ್ದಾರೆ. |
ಹೋಬಳಿ ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲಾ ವಿಭಾಗಕ್ಕೆ ಬುಧವಾರದಂದು ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹಮದ್ ಹಾಗೂ ರಂಗಭೂಮಿ ಕಲಾವಿದರಾದ ಮಾಸ್ಟರ್ ಹಿರಣಯ್ಯ ಅವರು ಭೇಟಿ ನೀಡಿದ್ದು ಶಾಲಾ ಮಕ್ಕಳಲ್ಲಿ ಹರುಷವನ್ನುಂಟು ಮಾಡಿತ್ತು.
ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹಮದ್ ಮಾತನಾಡಿ ಮಕ್ಕಳ ಮನಸ್ಸೆಂಬುದು ಮುಗ್ದತೆಯಿಂದ ಕೂಡಿರುವ ಹೂವಿನಂತಹದ್ದು,ಅದನ್ನು ಯಾವರೀತಿಗೆ ಬೇಕಾದರೂ ಬಾಗಿಸಬಹುದಾಗಿದೆ. ಈಗಿನಿಂದಲೇ ಮಕ್ಕಳು ತಮಗೆ ಸಿಗುವಂತಹ ಉತ್ತಮ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಬೆಳೆಯಿರಿ.ಕಠಿಣ ಪರಿಶ್ರಮವಿದ್ದರೆ ಜಯ ಶತಸಿದ್ದ ಚೆನ್ನಾಗಿ ಓದಿ ಉತ್ತಮ ಅಂಕಗಳನ್ನು ಗಳಿಸಿ ತಂದೆ-ತಾಯಿ ಹಾಗೂ ಶಾಲೆಗೆ ಹೆಸರು ತಂದು ಕೊಡಿ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ರಂಗಭೂಮಿ ಕಲಾವಿದರಾದ ಮಾಸ್ಟರ್ ಹಿರಣಯ್ಯ ಮಾತನಾಡಿ, ಇಂದು ಅನೇಕರು ಉತ್ತಮ ಸ್ಥಾನಕ್ಕೆ ಬಂದರೆ ಸಾಕು ಹಿಂದೆ ತಾವಿದ್ದ ಸ್ಥಿತಿಯನ್ನು ಮರೆಯುತ್ತಾರೆ.ಆದರೆ ಅದನ್ನು ಮರೆತರೆ ನಮ್ಮನ್ನು ನಾವೇ ಮರೆತಂತೆ ಎಂದರು.ಜ್ಞಾನ,ವಿದ್ಯೆಯಲ್ಲಿ ಮುಂದೆ ಮುಂದೆ ಹೋಗುತ್ತಾ ಇತರರೊಂದಿಗೆ ಯಾವರೀತಿ ಬೆರೆಯ ಬೇಕೆಂಬುದನ್ನು ಕಲಿಯುತ್ತಾ ಸಾಗಿ ಉತ್ತಮ ಪ್ರಜೆಗಳಾಗಿ ಬಾಳಿ, ಪ್ರೌಢಶಾಲಾ ಹಂತದ ಮಕ್ಕಳ ವಯಸ್ಸು ಸೂಕ್ಷ್ಮವಾದದ್ದು ಅದನ್ನು ಹರಿಯಲು ಬಿಡದೇ,ನಮ್ಮ ಹಿಡಿತದಲ್ಲಿ ಇಟ್ಟು ಕೊಂಡು ಸಮಾಜದಲ್ಲಿ ಸಾಗಬೇಕಿದೆ ಎಂದರು.ತಮ್ಮ ಹುಳಿಯಾರಿನ ನಂಟಿನ ಬಗ್ಗೆ ಹಾಗೂ ಕೆಲ ಹಾಸ್ಯದ ಉದಾಹಣೆಗಳನ್ನು ಹೇಳಿ ಮಕ್ಕಳನ್ನು ರಂಜಿಸಿದರು.
ಶಾಲಾ ಮಕ್ಕಳು ನಿತ್ಯೋತ್ಸವ ಗೀತೆಯನ್ನು ಹಾಡುವ ಮೂಲಕ ಕವಿವರ್ಯರನ್ನು ಸ್ವಾಗತಿಸಿದರು. ಈ ಸಂಧರ್ಭದಲ್ಲಿ ಶಾಲಾ ಉಪಪ್ರಾಂಶುಪಾಲರಾದ ಇಂದಿರಾ,ದೈಹಿಕ ಶಿಕ್ಷಕರಾದ ಮನ್ಸೂರ್ ಅಹಮದ್,ಶಿಕ್ಷಕರಾದ ಲೋಕೇಶ್ ಸೇರಿದಂತೆ ಇತರ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ