ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮಾರ್ಚ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ತಿರುಮಲಾಪುರದಲ್ಲಿ ಮೂರು ದಿನಗಳ ಕಾಲ ಶ್ರೀ ಅಖಂಡ ರಾಮಕೋಟಿ ಮಹೋತ್ಸವ

ಹುಳಿಯಾರು ಹೋಬಳಿ ಜೋಡಿ ತಿರುಮಲಾಪುರದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀ "ಶುಭಕೃತು” ನಾಮಸಂವತ್ಸರದ ಚೈತ್ರ ಶುದ್ಧ ಚತುರ್ದಶಿ ಶುಕ್ರವಾರ ದಿನಾಂಕ 15-4-2022 ರಿಂದ 17-4-2022 ರವರೆಗೆ ಶ್ರೀ ಅಖಂಡ ರಾಮಕೋಟಿ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಅಖಂಡ ಶ್ರೀರಾಮಭಜನೆ, ಶ್ರೀ ರಾಮಪಟ್ಟಾಭಿಷೇಕ, ಹಾಗೂ ಶ್ರೀರಾಮತಾರಕ ಯಜ್ಞವನ್ನು ನೆರವೇರಿಸಲಾಗುವುದು. *ಮೂರು ದಿನಗಳ ಕಾಲದ ವೇಳಾಪಟ್ಟಿ ಹೀಗಿದೆ* ದಿನಾಂಕ : 15-04-2022 ಶುಕ್ರವಾರ ಚೈತ್ರ ಶುದ್ಧ ಚತುರ್ದಶಿ ಸಂಜೆ : 6-30 ಕ್ಕೆ ಶ್ರೀ ಮಹಾಗಣಪತಿ ಪೂಜೆ, ಸ್ವಸ್ತಿವಾಚನ, ದೇವನಾಂದಿ,ಕಲಶಸ್ಥಾಪನೆ, ಕಲಶಾರಾಧನೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ದಿನಾಂಕ : 16-04-2022 ಶನಿವಾರ ಚೈತ್ರ ಶುದ್ಧ ಪೂರ್ಣಿಮ ಬೆಳಗ್ಗೆ 6-00 ಘಂಟೆಗೆ ಶ್ರೀ ಮಹಾಗಣಪತಿ ಪ್ರಾರ್ಥನೆ, ಕಲಶಾರಾಧನೆ, ಶ್ರೀ ಅರುಣಪೂರ್ವಕ ಸೂರ್ಯನಮಸ್ಕಾರ, ಶ್ರೀ ಸ್ವಾಮಿಯವರಿಗೆ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಸಹಸ್ರಮೋದಕ ಶ್ರೀಮಹಾಗಣಪತಿಹೋಮ, ಶ್ರೀ ಅಖಂಡರಾಮಕೋಟ ಜ್ಯೋತಿ ಸ್ಥಾಪನೆ ನಂತರ ಶ್ರೀ ರಾಮಭಜನಾ ಮಂಡಲಯವರಿಂದ ಅಖಂಡರಾಮ ಭಜನೆ (ಕೋಲಾರ ಜಿಲ್ಲೆ, ಬಂಗಾರಪೇಟೆ ತಾಲ್ಲೂಕು,ಮಾಕಾರಹಳ್ಳಿ ವೃಂದದವರಿಂದ) ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಮಹಾ ಅನ್ನಸಂತರ್ಪಣೆ ಸಂಜೆ 6-30ಕ್ಕೆ ಶ್ರೀ ಸೀತಾ ರಾಮ ಕಲ್ಯಾಣೋತ್ಸವ ಹಾಗೂ ಕೋಲಾಟ,ಮಹಾಮಂಗಳಾರತಿ, ಪ್ರಸಾದ ವಿನಿಯೋಗ  ದಿನಾಂಕ : 17-04-20

ಸೀಗೆಬಾಗಿಯಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ‘ಶಿಕ್ಷಕ ಸಂಯೋಜನಾ ಘಟಕ’ ಉದ್ಘಾಟನೆ ಹಾಗೂ ‘ಲಂಕೇಶ್ ನೆನಪು’ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ‘ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು’ ಮತ್ತು ‘ಗ್ರಾಮಾಂತರ ವಿದ್ಯಾಪೀಠ ಪ್ರೌಢಶಾಲೆ’, ಸೀಗೆಬಾಗಿ ಗೇಟ್ ಇವರ ಸಂಯುಕ್ತಾಶ್ರಯದಲ್ಲಿ ಸೀಗೆಬಾಗಿಯ ಗ್ರಾಮಾಂತರ ವಿದ್ಯಾಪೀಠ ಪ್ರೌಢಶಾಲೆಯಲ್ಲಿ  ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ‘ಶಿಕ್ಷಕ ಸಂಯೋಜನಾ ಘಟಕ’ದ ಉದ್ಘಾಟನೆ ಹಾಗೂ ‘ಲಂಕೇಶ್ ನೆನಪು’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ‘ಶಿಕ್ಷಕ ಸಂಯೋಜನಾ ಘಟಕ’ದ ನಾಮಫಲಕಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಘಟಕವನ್ನು ಉದ್ಘಾಟಿಸಿದ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷರಾದ ಎಂ.ಎಸ್. ರವಿಕುಮಾರ್ ಕಟ್ಟೇಮನೆ ಅವರು ಮಾತನಾಡಿ ‘ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು’ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು, ನಮ್ಮ ಕಾರ್ಯಕ್ರಮಗಳು ತಾಲ್ಲೂಕಿನ ಪ್ರತಿ ಹಳ್ಳಿಗೂ ತಲುಪಬೇಕೆಂಬುದು ನಮ್ಮ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ನಾವು ಈ ದಿನ ಸೀಗೆಬಾಗಿ ಅಂತಹ ಗ್ರಾಮಾಂತರ ಪ್ರದೇಶವನ್ನು ಕಾರ್ಯಕ್ರಮಕ್ಕಾಗಿ ಆಯ್ಕೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.  ‘ ಲಂಕೇಶ್ ನೆನಪು’ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಗ್ರಾಮಾಂತರ ವಿದ್ಯಾಪೀಠ ಪ್ರೌಢಶಾಲೆ, ಸೀಗೆಬಾಗಿ ಗೇಟ್ ಇಲ್ಲಿನ ಮುಖ್ಯ ಶಿಕ್ಷಕರಾದ ಬಿ. ಶಿವಯ್ಯ  ಅವರು ಮಾತನಾಡಿ ‘ಕನ್ನಡ ಕಟ್ಟುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕಾಗಿದೆ. ಸ್ಪಷ್ಟವಾಗಿ ಕನ್ನಡವನ್ನು ಮಾತನಾಡಬೇಕಿದೆ. ಇಂದಿನ ಮಕ್ಕಳೇ ಭವಿಷ್ಯದ ಕನ್ನಡದ ಕಟ್ಟಾ

ಹುಳಿಯಾರು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ 50ನೇ ವರ್ಷದ ಜಾತ್ರಾ ಮಹೋತ್ಸವ ಏ.18ರಿಂದ 23ರವರೆಗೆ

ಹುಳಿಯಾರು ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 50ನೇ ವರ್ಷದ ಸುವರ್ಣಮಹೋತ್ಸವದ ಜಾತ್ರಾ ಮಹೋತ್ಸವದ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲು ಇಂದು ಹುಳಿಯಾರಿನ ಎಲ್ಲಾ ದೇವಸ್ಥಾನದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಪಟ್ಟಣದ ವಿವಿಧ ಸಂಘಟನೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಹಾಗೂ ಎಲ್ಲಾ ಸಮಾಜಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತು ದುರ್ಗಾಪರಮೇಶ್ವರಿ ದೇವಸ್ಥಾನದ ಗುಂಚಿ ಗೌಡರುಗಳ ಸಭೆಯನ್ನು ದೇವಸ್ಥಾನದಲ್ಲಿ ಕರೆಯಲಾಗಿತ್ತು.  50ನೇ ವರ್ಷದ ಸುವರ್ಣಮಹೋತ್ಸವದ ಜಾತ್ರಾ ಮಹೋತ್ಸವದದ ಜಾತ್ರೆಯನ್ನು  ಅಚ್ಚಳಿಯದಂತೆ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು. ಜಾತ್ರಾ ಮಹೋತ್ಸವಕ್ಕೆ ಸುತ್ತಮುತ್ತಲ ಹಳ್ಳಿಗಳ ಎಲ್ಲಾ ಒಂಬತ್ತು ದೇವರುಗಳನ್ನು ಕರೆಸುವುದು ಸೇರಿದಂತೆ ,ಅನ್ನ ಸಂತರ್ಪಣೆ, ಮೂರು ದಿನಗಳ ಕಾಲದ ಉಪಹಾರ, ಆರ್ಕೆಸ್ಟ್ರಾ, ದೇವಾಲಯಕ್ಕೆ ಹೂವಿನ ಅಲಂಕಾರ, ರಾಜಬೀದಿಯಲ್ಲಿ ವಿದ್ಯುದ್ದೀಪ ಅಲಂಕಾರದ ಬಗ್ಗೆ ಚರ್ಚಿಸಲಾಯಿತು. ಗ್ರಾಮದ ಪ್ರತಿ ಮನೆಗೂ ರೂ200 ರಸೀತಿ ಹಾಕಲು ತೀರ್ಮಾನಿಸಲಾಯಿತು. ಜಾತ್ರಾ ಮಹೋತ್ಸವದ ಯಶಸ್ಸಿಗೆ ಪ್ರತಿಯೊಬ್ಬರು ಕೈಜೋಡಿಸಲು ಮನವಿ ಮಾಡಲಾಯಿತು. ದಿನಾಂಕ 18/4/2022ನೇ ಸೋಮವಾರದಿಂದ 23/4/2022ನೇ ಶನಿವಾರದವರೆಗೆ ಒಂದು ವಾರಗಳ ಕಾಲ ಜಾತ್ರೆಯನ್ನು ನಡೆಯಲಿದ್ದು, ದಿನಾಂಕ 18/4/22ನೇ ಸೋಮವಾರ ರಾತ್ರಿ ಅಮ್ಮನವರ ಮಧುವಣಗಿತ್ತಿ ಶಾಸ್ತ್ರ,  ದಿನಾಂಕ 19/4/22ನೇ ಮಂಗಳ

ಯಳನಾಡುವಿನಲ್ಲಿ ಇಂದು ಸಂಜೆ "ಹೈನುಗಾರಿಕೆಯಲ್ಲಿ ಅಳವಡಿಸಿ ಕೊಳ್ಳಬೇಕಾದ ಪದ್ಧತಿಗಳು” ಕುರಿತು ಉಪನ್ಯಾಸ

ದಿನಾಂಕ : 18-03-2022 ರ ಸಂಜೆ 07 ಗಂಟೆಗೆ ಹುಳಿಯಾರು ಹೋಬಳಿಯ ಯಳನಾಡು ಗ್ರಾಮದ ಶ್ರೀ ಗುರು ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಪ್ರಖ್ಯಾತ ಪಶುಶಸ್ತ್ರ ಚಿಕಿತ್ಸಕರಾದ ತಿಪಟೂರು ತಾಲ್ಲೂಕಿನ ನೊಣವಿನಕೆರೆ ಪಶು ಆಸ್ಪತ್ರೆಯ ಹಿರಿಯ ಪಶುವೈದ್ಯಾಧಿಕಾರಿಗಳಾದ ಡಾ.ಎಸ್.ಪಿ.ಮಂಜುನಾಥರವರು “ಹೈನುಗಾರಿಕೆಯಲ್ಲಿ ಅಳವಡಿಸಿ ಕೊಳ್ಳಬೇಕಾದ ಪದ್ಧತಿಗಳು” ಕುರಿತು ಉಪನ್ಯಾಸ ನೀಡಲಿದ್ದಾರೆ.  ಪಿಪಿಟಿ ಮುಖಾಂತರ ಎಂದರೆ ಚಿತ್ರಗಳು ಮತ್ತು ಪ್ರಸ್ತುತವಾದ ಈ ವಿಡಿಯೋಗಳಿಂದ ಉಪನ್ಯಾಸದಲ್ಲಿ ರೈತರು ತಿಳಿದುಕೊಳ್ಳಲೇಬೇಕಾದ ಮತ್ತು ಹೈನುಗಾರಿಕೆಯಲ್ಲಿ ಅಳವಡಿಸಿಕೊಳ್ಳಲೇಬೇಕಾದ ಮಾಹಿತಿಗಳನ್ನು ತಮ್ಮ ಅಪಾರ ಅನುಭವದ ಕಥಾನಕಗಳಿಂದ ಪ್ರಸ್ತುತಪಡಿಸುತ್ತಿದ್ದಾರೆ.  ರೈತಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು  ಚಿಕ್ಕನಾಯಕನಹಳ್ಳಿಯ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರು ಕೋರಿದ್ದಾರೆ.

ಬರುವ ಶೈಕ್ಷಣಿಕ ವರ್ಷದಿಂದ ಹುಳಿಯಾರಿನ ವಾಸವಿ ಶಾಲೆ,LEAD ಸಂಚಾಲಿತ ಶಾಲೆಯಾಗಿ ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನೀಡಲಿದೆ

ಹುಳಿಯಾರಿನ ವಾಸವಿ ವಿದ್ಯಾಸಂಸ್ಥೆಯು ( Vasavi English medium higher primary and high school) ಅಂತರರಾಷ್ಟ್ರೀಯ ಗುಣಮಟ್ಟದ ಶಿಕ್ಷಣವನ್ನು ಕೈಗೆಟಕುವ ದರದಲ್ಲಿ ನೀಡುವ ಮೂಲಕ ಭಾರತದಲ್ಲಿ ಶಿಕ್ಷಣವನ್ನು ಸಬಲೀಕರಣಗೊಳಿಸುತ್ತಿರುವ  LEAD ಸಂಸ್ಥೆಯೊಂದಿಗೆ ಸಹಯೋಗ ಹೊಂದಿದ್ದು, ಬರುವ ಶೈಕ್ಷಣಿಕ ವರ್ಷದಿಂದಲೇ LEAD ಸಂಚಾಲಿತ ಸ್ಕೂಲ್ ಆಗಲಿದ್ದು ಈ ನಿಟ್ಟಿನಲ್ಲಿ ಇಂದು ವಾಸವಿ ಶಾಲೆಯ ಪೋಷಕರೊಂದಿಗೆ ಲೀಡ್ಸ್ ಸಂಸ್ಥೆಯ ಪರಿಚಯ ಸಭೆ ಹಮ್ಮಿಕೊಳ್ಳಲಾಗಿತ್ತು. LEAD ಸಂಸ್ಥೆಯು ಆಧುನಿಕ ಜ್ಞಾನದ ಅನಿಮಿಯತ ಅವಕಾಶ ನೀಡಲಿದ್ದು, ಸ್ಮಾರ್ಟ್ ಕ್ಲಾಸ್ ರೂಮ್, ಮಕ್ಕಳ ಮೇಲೆ ವ್ಯಕ್ತಿಗತ ಗಮನ ಹರಿಸುವಿಕೆ,ತಜ್ಞರಿಂದ ತರಬೇತಿ ಹೊಂದಿದ ಶಿಕ್ಷಕರಿಂದ ಪಠ್ಯಕ್ರಮ ಬೋಧನೆ, ಅಂತರರಾಷ್ಟ್ರೀಯ ಮಾನದಂಡದ ಪಠ್ಯಕ್ರಮ ಅನುಸರಣೆ ಮೂಲಕ ಅತ್ಯುತ್ತಮ ಶಿಕ್ಷಣ ನೀಡಲಿದೆ ಎಂದು ಪೋಷಕರಿಗೆ ಪರಿಚಯಿಸಲಾಯಿತು. ಇದಕ್ಕೂ ಮುನ್ನ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಶಾರದಾ ಪೂಜಾ ಕಾರ್ಯಕ್ರಮ ಜರಗಿತು. ಬೆಂಗಳೂರಿನ ಕಾರ್ತಿಕ್  ಐ ಕ್ಲಿನಿಕ್‌ನ ಡಾ|| ರವೀಂದ್ರ ಮತ್ತು ಕುಟುಂಬದವರು ನೀಡಿದ ಶುದ್ಧ ನೀರಿನ ಘಟಕಕ್ಕೆ ಚಾಲನೆ ನೀಡಲಾಯಿತು. ವಾಸವಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಟಿ.ಎಲ್.ಬಾಲೇಶ್, ಕಾರ್ಯದರ್ಶಿ ಎಲ್.ಆರ್. ಬಾಲಾಜಿ, ಹುಳಿಯಾರು ಆರ್ಯವೈಶ್ಯ ಸಮಾಜದ ಅಧ್ಯಕ್ಷ ಎಲ್.ಆರ್.ಚಂದ್ರಶೇಖರ್ ಸೇರಿದಂತೆ ಸಂಸ್

ಹುಳಿಯಾರಿನ ಬಿ.ಎಂ.ಎಸ್. ಕಾಲೇಜಿನ ಯುವಕವಿ ಶ್ರೀರಂಗ ಅವರ ‘ಕಲ್ಪವೃಕ್ಷ’ ಕವಿತೆಯು ಅತ್ಯುತ್ತಮ ಕವಿತೆಯೆಂದು ಆಯ್ಕೆ

ಶಿಕ್ಷಣ ಭೀಷ್ಮ ಡಾ. ಹೆಚ್.ಎಂ. ಗಂಗಾಧರಯ್ಯ ಅವರ ಸ್ಮರಣಾರ್ಥ ತುಮಕೂರಿನ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು ಹಮ್ಮಿಕೊಂಡಿದ್ದ “ ಅಂತರ ಕಾಲೇಜು ಕವನ ಸ್ಪರ್ಧೆ-2022 ”ರಲ್ಲಿ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹುಳಿಯಾರು, ಇಲ್ಲಿನ ದ್ವಿತೀಯ ಬಿ.ಎ. ಐಚ್ಛಿಕ ಕನ್ನಡದ ವಿದ್ಯಾರ್ಥಿ ಶ್ರೀರಂಗ ಕೆ.ಎಂ. ಅವರ ‘ಕಲ್ಪವೃಕ್ಷ’ ಎಂಬ ಕವಿತೆಯು ಅತ್ಯುತ್ತಮ ಕವಿತೆಯೆಂದು ಆಯ್ಕೆಯಾಗಿದೆ.  ಈ ಯುವಕವಿಗೆ ಕಾಲೇಜಿನ ಸಾಂಸ್ಕೃತಿಕ ಸಂಘದ ವತಿಯಿಂದ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡಿದ್ದು, ಈ ಸಂದರ್ಭದಲ್ಲಿ  ಮಾತನಾಡಿದ ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಡಾ. ಮೋಹನ್ ಕುಮಾರ್ ಎಂ.ಜೆ. ಅವರು ಕಾಲೇಜಿನ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಅವರಲ್ಲಿ ಶ್ರೀರಂಗ ಕೆ.ಎಂ. ಅವರ ಕವಿತೆ ಕವನಸಂಕಲನಕ್ಕೆ ಆಯ್ಕೆಯಾಗಿದೆ. ಅಲ್ಲದೆ ಈ ಕವಿತೆಯು ಸಿದ್ಧಾರ್ಥ ಸಂಸ್ಥೆಯು ಹೊರತಂದಿರುವ ‘ಅರಳುವ ಮೊಗ್ಗುಗಳು’ ಎಂಬ ಯುವ ಕವಿಗಳ ‘ಕವನ ಸಂಕಲನ’ದಲ್ಲಿಯೂ ಸ್ಥಾನ ಪಡೆದಿದ್ದು, ಸಂಸ್ಥೆಯು ಈ ಯುವಕವಿಗೆ ಪ್ರಮಾಣಪತ್ರದೊಂದಿಗೆ ಕವನಸಂಕಲನದ 10 ಪ್ರತಿಗಳನ್ನು ಬಹುಮಾನವಾಗಿ ನೀಡಿರುತ್ತದೆ ಎಂದು ತಿಳಿಸಿದರು.  ಪ್ರಾಚಾರ್ಯ ಪ್ರೊ. ಕೃಷ್ಣಮೂರ್ತಿ ಬಿಳಿಗೆರೆ ಅವರು ಮಾತನಾಡಿ ಇದು ಕಾಲೇಜಿಗೆ ಹೆಮ್ಮೆ ತರುವ ವಿಷಯ. ಇಂತಹ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು.  ಒಂದು ಬಹುಮಾನ ಪಡೆದು ಅಲ್ಲಿ

ಹುಳಿಯಾರಿನ ಬಿಎಂಎಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಕೃಷಿಕ್ಷೇತ್ರದ ಅಧ್ಯಯನ ಭೇಟಿ

ಹುಳಿಯಾರು-ಕೆಂಕೆರೆಯ ಬಿ.ಎಮ್.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಪ್ರಥಮ ಬಿ.ಎ. ಅರ್ಥಶಾಸ್ತ್ರ ವಿಷಯದ ವಿದ್ಯಾರ್ಥಿಗಳಿಗೆ A STUDY VISIT TO AGRARIAN FIELD ಅನ್ನು ಏರ್ಪಡಿಸಿದ ಹಿನ್ನಲೆಯಲ್ಲಿ ಲಿಂಗಪ್ಪನಪಾಳ್ಯದ ಶ್ರೀ ಚಂದ್ರಶೇಖರ್‌ರವರ ತೋಟಕ್ಕೆ ಭೇಟಿ ನೀಡಲಾಯಿತು.  ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥರಾದ ಪ್ರೊ| ಫರ್ಹಾನಾಜ್ ಹಾಗೂ ಪ್ರೊ| ಜಯಪ್ರಕಾಶ್ ಅವರ ನೇತೃತ್ವದಲ್ಲಿ ಸುಮಾರು 48-50 ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಉನ್ನತಿಗಾಗಿ ಬೇಕಾಗುವ ರೀತಿಯಲ್ಲಿ ತೋಟದ ವೀಕ್ಷಣೆ ನಡೆಸಿದ್ದಲ್ಲದೆ ರೈತ ಚಂದ್ರಶೇಖರ್ ಅವರ ಸಂದರ್ಶನ ನಡೆಸಿ ವಿವರವಾದ ಮಾಹಿತಿ ಪಡೆದರು. ಪ್ರೊ| ಫರ್ಹಾನಾಜ್ ಅಧ್ಯಯನ ಭೇಟಿಯ ಪ್ರಸ್ತುತತೆಯ ಬಗ್ಗೆ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ ಅಧ್ಯಯನ ಭೇಟಿಗಳ ಅವಶ್ಯಕತೆ, ಪ್ರಸ್ತುತ ನಮ್ಮ ಕೃಷಿ ಕ್ಷೇತ್ರದ ಸ್ಥಿತಿಗತಿ, ಶಿಕ್ಷಣ ಸಂಸ್ಥೆಗಳೇಕೆ ರೈತರೊಂದಿಗೆ ಸಂಪರ್ಕ ಹೊಂದಬೇಕು ಮತ್ತು ಕೃಷಿಯಲ್ಲಿ ಇತ್ತೀಚಿನ ದಿನಗಳಲ್ಲಾಗುತ್ತಿರುವ ಕ್ರಾಂತಿಕಾರಿ ಬೆಳವಣಿಗೆಗೆ ರೈತರ ಕೊಡುಗೆಗಳನ್ನು ಕುರಿತು ಮಾತನಾಡಿದರು. ಪ್ರಸ್ತುತ ಹೊಸ ಶಿಕ್ಷಣ ನೀತಿಯ ಅನುಸಾರ ವಿವಿಧ ರೀತಿಯ ಅಧ್ಯಯನ ಭೇಟಿ ನೀಡುವುದೂ ಪಠ್ಯಕ್ರಮದ ಒಂದು ಭಾಗವಾಗಿರುವುದರಿಂದ ಹಾಗೂ ಇಂತಹ ಪ್ರಾಕ್ಟಿಕಲ್ ಜ್ಞಾನವನ್ನು ಪಡೆಯುವುದಿಂದ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಇನ್ನೂ ಹೆಚ್ಚಾಗಲು ಸಹಕರಿಸುತ್ತದೆ ಎ

ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ತ್ರಿಫೇಸ್ ವಿದ್ಯುತ್ ಸರಬರಾಜಾಗುವ ಪೂರಕಗಳ ಈ ವಾರದ ವೇಳಾಪಟ್ಟಿ‌....

ಚಿಕ್ಕನಾಯಕನಹಳ್ಳಿ - ಹುಳಿಯಾರು ಸೇರಿದಂತೆ ತಾಲ್ಲೂಕಿನ ವಿವಿಧ ಉಪ ಸ್ಥಾವರದಿಂದ ಕೃಷಿ ನೀರಾವರಿ ಪಂಪ್‌ಸೆಟ್‌ಗಳಿಗೆ ತ್ರಿಫೇಸ್ ವಿದ್ಯುತ್ ಸರಬರಾಜಾಗುವ ಪೂರಕಗಳ ಈ ವಾರದ ವೇಳಾಪಟ್ಟಿ‌....

ಕೃಷಿ ಕಾಯ್ದೆಗಳ ವಾಪಸಾತಿಗಾಗಿ ಆಗ್ರಹಿಸಿ ಕಾಗೋಡಿನಿಂದ ಜುಂಜಪ್ಪನಗುಡ್ಡೆವರೆಗೆ ಬರುತ್ತಿರುವ ಜನಜಾಗೃತಿ ಜಾಥ ಇಂದು ಚಿಕ್ಕನಾಯಕನಹಳ್ಳಿ - ಹುಳಿಯಾರಿಗೆ

ಜನಾಂದೋಲನಗಳ ಮಹಾಮೈತ್ರಿ ವತಿಯಿಂದ ಕರ್ನಾಟಕ ರಾಜ್ಯ ಸರ್ಕಾರದ 3 ಕರಾಳ ಕೃಷಿ ಕಾಯ್ದೆಗಳ ವಾಪಸಾತಿಗಾಗಿ ಆಗ್ರಹಿಸಿ ಕಾಗೋಡಿನಿಂದ ಜುಂಜಪ್ಪನಗುಡ್ಡೆವರೆಗೆ ಬರುತ್ತಿರುವ ಜನಜಾಗೃತಿ ಜಾಥವು ಇಂದು ದಿನಾಂಕ 12-03-2022 ರಂದು ತಿಪಟೂರಿನಿಂದ ಚಿಕ್ಕನಾಯಕನಹಳ್ಳಿ ಮಾರ್ಗವಾಗಿ ಜುಂಜಪ್ಪನಗುಡ್ಡೆವರೆಗೆ ಹಾದು ಹೋಗಲಿದ್ದು ಈ ಬಗ್ಗೆ ಗುರುವಾರ ಚಿಕ್ಕನಾಯಕನಹಳ್ಳಿ  ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕಿನ ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಗೋಷ್ಠಿಯಲ್ಲಿ ಸಿ.ಡಿ. ಚಂದ್ರಶೇಖರ್ ಮಾಜಿ ಪುರಸಭಾ ಅಧ್ಯಕ್ಷರು ಮಾತನಾಡಿ ಕರ್ನಾಟಕ ರಾಜ್ಯ ಸರ್ಕಾರದ ಮೂರು ಕರಾಳ ಕೃಷಿ ಕಾಯಿದೆಗಳ ಜಾರಿಯಿಂದ ರೈತರು ಕೃಷಿ ಕಾರ್ಮಿಕರು ಸ್ಥಳಿಯ ವ್ಯಾಪಾರಿಗಳು ಪಶುಪಾಲನೆ ಮಾಡುವ ಬುಡಕಟ್ಟು ಜನಾಂಗಗಳು ಹೀಗೆ ಹಲವಾರು ಸಮಾಜಗಳು ತೊಂದರೆಗೊಳಗಾಗುವುದರಿಂದ ಈ ಕಾನೂನುಗಳನ್ನು ಈಗಿರುವಂತೆ ಜಾರೀ ಮಾಡದೇ ಈ ಮೇಲೆ ಹೇಳಿದ ಎಲ್ಲರಿಗೂ ಅನಾನುಕೂಲವಾಗದಂತೆ ಸೂಕ್ತ ಮಾರ್ಪಾಡುಗಳನ್ನು ಮಾಡಿ ಜಾರಿ ಮಾಡಲು ಆಗ್ರಹಿಸಲು ಈ ಜಾಥಾ ನಡೆಯುತ್ತಿದೆ ಎಂದು ತಿಳಿಸಿದರು. ಪ್ರಗತಿಪರ ಕೃಷಿಕ ಷಡಕ್ಷರಿ ಶಂಕರಲಿಂಗಪ್ಪ ಇವರು ಮಾತನಾಡಿ ಈ ಜಾಥವು ರಾಜ್ಯದ ಮೂರು ದಿಕ್ಕುಗಳಲ್ಲಿ ಪ್ರಾರಂಭವಾಗಿ ಇದೇ ತಿಂಗಳ ಹದಿನೈದರಂದು ಬೆಂಗಳೂರು ತಲುಪುವುದರ ಮೂಲಕ ಈ  ಜನ ಜಾಗೃತಿ ಜಾಥಾ ಒಗ್ಗೂಡುವುದೆಂದರು.

ಹುಳಿಯಾರಿನಲ್ಲಿ 2 ತಿಂಗಳ ಅವಧಿಗೆ ಉಚಿತ ಗಾರ್ಮೆಂಟ್ ಟೈಲರಿಂಗ್ ತರಬೇತಿ

ಹುಳಿಯಾರಿನ ದುರ್ಗಮ್ಮನ ಗುಡಿ ಬೀದಿಯಲ್ಲಿರುವ ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಸಂಸ್ಥೆಯು 18 ರಿಂದ 45 ವರ್ಷ ವಯಸ್ಸಿನ  ನಿರುದ್ಯೋಗಿ ಯುವಕ ಯುವತಿಯರಿಗೆ *2 ತಿಂಗಳ ಉಚಿತ ಟೈಲರಿಂಗ್ ತರಬೇತಿ* (ಸಿದ್ದ ಉಡುಪು ತಯಾರಿಕೆ) ನೀಡಲಿದ್ದು,ಆಸಕ್ತರು ಮೇಲ್ಕಂಡ ವಿಳಾಸದಲ್ಲಿ  15/03/2022 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ತರಬೇತಿ ಪಡೆದಂತವರಿಗೆ ಜಿಲ್ಲೆಯ ಪ್ರಖ್ಯಾತ ಗಾರ್ಮೆಂಟ್ಸ್ ಗಳಲ್ಲಿ ಉದ್ಯೋಗ ಕಲ್ಪಿಸಲು ನೆರವು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : *ಸಿ.ಎನ್. ಪ್ರಭು* ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಸಂಸ್ಥೆ. ಹುಳಿಯಾರು  📞9141689595      9448748259

ವಿದ್ಯುತ್ ವಿತರಣಾ ಕೇಂದ್ರದ ಯೋಜನೆ ಬಗ್ಗೆ ತಕರಾರಿಲ್ಲ ,ಆದರೆ ಡಿಂಕನಹಳ್ಳಿಯ ಯೋಜಿತ ಸ್ಥಳದಲ್ಲಿ ಮಾತ್ರ ಬೇಡ : ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ಆಗ್ರಹ

ರೈತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ಹುಳಿಯಾರು : ಹೋಬಳಿಯ ಕೋರಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಿಂಕನಹಳ್ಳಿಯಲ್ಲಿ ಉದ್ದೇಶಿತ 400 ಕೆವಿ ವಿದ್ಯುತ್ ಸ್ವಿಚ್ಚಿಂಗ್ ಸ್ಟೇಷನ್ ಸ್ಥಾಪಿಸುವುದರ ಬಗ್ಗೆ ರೈತರು ವಿರೋಧ ವ್ಯಕ್ತಪಡಿಸಿದ್ದು, ಸುಮಾರು 300ರಷ್ಟು ರೈತರು ತಮ್ಮ ಸಮಸ್ಯೆಗಳ ಬಗ್ಗೆ ಮಾಜಿ ಶಾಸಕ ಸಿ.ಬಿ ಸುರೇಶ್ ಬಾಬು ಅವರ ಬಳಿ ತಮ್ಮ ಅಹವಾಲು ಸಲ್ಲಿಸಿ, ಸಾಧಕಬಾಧಕಗಳ ಬಗ್ಗೆ ಚರ್ಚೆ ನಡೆಸಿದ ಘಟನೆ ಡಿಂಕನಹಳ್ಳಿ ತೋಟದ ಆವರಣದಲ್ಲಿ  ಮಂಗಳವಾರ ಜರುಗಿತು. ಸಮಸ್ಯೆ ಏನು :ಡಿಂಕನಹಳ್ಳಿಯಲ್ಲಿ 400 ಕೆವಿ ಸ್ವಿಚಿಂಗ್ ಸ್ಟೇಷನ್ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಸದರಿ ಯೋಜನೆಗೆ ಅಗತ್ಯವಿರುವ ಜಮೀನು ನೀಡಲು ಗ್ರಾಮಸ್ಥರು ತಕರಾರು ತೆಗೆದಿದ್ದು, ಹಾಲಿ ಯೋಜನೆಗೆ ಉದ್ದೇಶಿಸಲಾಗಿರುವ ಭೂಮಿ ಕೃಷಿ ಯೋಗ್ಯವಾಗಿದ್ದು,ಈ ಭೂಮಿಯನ್ನು ಸ್ವಾಧೀನಪಡಿಸಿಕೊಂಡಲ್ಲಿ ರೈತರುಗಳ ಜೀವನಕ್ಕೆ ತೊಂದರೆಯಾಗಲಿದ್ದು,ಇದರ ಬದಲು  ಇಲ್ಲಿಯೇ ಆಗಲಿ ಅಥವಾ ತಾಲೂಕಿನ ಬೇರೆ ಎಲ್ಲಿಯಾದರೂ ಆಗಲೇ ಕೃಷಿಗೆ ಯೋಗ್ಯವಲ್ಲದ ಬಂಜರು ಭೂಮಿಯನ್ನು ಆಯ್ಕೆ ಮಾಡಿಕೊಂಡು ಯೋಜನೆ ಅನುಷ್ಠಾನಗೊಳಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದು ಇದಕ್ಕಾಗಿ ಮಾಜಿ ಶಾಸಕರು ತಮ್ಮ ಹೋರಾಟಕ್ಕೆ ಬೆಂಬಲಿಸುವಂತೆ ಮನವಿ ಮಾಡಿದರು. ಸಭೆಯಲ್ಲಿ ಹಲವರು ರೈತರ ಇಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಿ ಯೋಜನೆಗೆ ಭೂಮಿ ನೀಡಲು ರೈತರು ವಿರೋಧ  ವ್ಯಕ್ತಪ