ದಿನಾಂಕ : 18-03-2022 ರ ಸಂಜೆ 07 ಗಂಟೆಗೆ ಹುಳಿಯಾರು ಹೋಬಳಿಯ ಯಳನಾಡು ಗ್ರಾಮದ ಶ್ರೀ ಗುರು ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಪ್ರಖ್ಯಾತ ಪಶುಶಸ್ತ್ರ ಚಿಕಿತ್ಸಕರಾದ ತಿಪಟೂರು ತಾಲ್ಲೂಕಿನ ನೊಣವಿನಕೆರೆ ಪಶು ಆಸ್ಪತ್ರೆಯ ಹಿರಿಯ ಪಶುವೈದ್ಯಾಧಿಕಾರಿಗಳಾದ ಡಾ.ಎಸ್.ಪಿ.ಮಂಜುನಾಥರವರು “ಹೈನುಗಾರಿಕೆಯಲ್ಲಿ ಅಳವಡಿಸಿ ಕೊಳ್ಳಬೇಕಾದ ಪದ್ಧತಿಗಳು” ಕುರಿತು ಉಪನ್ಯಾಸ ನೀಡಲಿದ್ದಾರೆ.
ಪಿಪಿಟಿ ಮುಖಾಂತರ ಎಂದರೆ ಚಿತ್ರಗಳು ಮತ್ತು ಪ್ರಸ್ತುತವಾದ ಈ ವಿಡಿಯೋಗಳಿಂದ ಉಪನ್ಯಾಸದಲ್ಲಿ ರೈತರು ತಿಳಿದುಕೊಳ್ಳಲೇಬೇಕಾದ ಮತ್ತು ಹೈನುಗಾರಿಕೆಯಲ್ಲಿ ಅಳವಡಿಸಿಕೊಳ್ಳಲೇಬೇಕಾದ ಮಾಹಿತಿಗಳನ್ನು ತಮ್ಮ ಅಪಾರ ಅನುಭವದ ಕಥಾನಕಗಳಿಂದ ಪ್ರಸ್ತುತಪಡಿಸುತ್ತಿದ್ದಾರೆ.
ರೈತಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಚಿಕ್ಕನಾಯಕನಹಳ್ಳಿಯ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ