ಶಿಕ್ಷಣ ಭೀಷ್ಮ ಡಾ. ಹೆಚ್.ಎಂ. ಗಂಗಾಧರಯ್ಯ ಅವರ ಸ್ಮರಣಾರ್ಥ ತುಮಕೂರಿನ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು ಹಮ್ಮಿಕೊಂಡಿದ್ದ “ಅಂತರ ಕಾಲೇಜು ಕವನ ಸ್ಪರ್ಧೆ-2022”ರಲ್ಲಿ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹುಳಿಯಾರು, ಇಲ್ಲಿನ ದ್ವಿತೀಯ ಬಿ.ಎ. ಐಚ್ಛಿಕ ಕನ್ನಡದ ವಿದ್ಯಾರ್ಥಿ ಶ್ರೀರಂಗ ಕೆ.ಎಂ. ಅವರ ‘ಕಲ್ಪವೃಕ್ಷ’ ಎಂಬ ಕವಿತೆಯು ಅತ್ಯುತ್ತಮ ಕವಿತೆಯೆಂದು ಆಯ್ಕೆಯಾಗಿದೆ.
ಈ ಯುವಕವಿಗೆ ಕಾಲೇಜಿನ ಸಾಂಸ್ಕೃತಿಕ ಸಂಘದ ವತಿಯಿಂದ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡಿದ್ದು, ಈ ಸಂದರ್ಭದಲ್ಲಿ ಮಾತನಾಡಿದ ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಡಾ. ಮೋಹನ್ ಕುಮಾರ್ ಎಂ.ಜೆ. ಅವರು ಕಾಲೇಜಿನ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಅವರಲ್ಲಿ ಶ್ರೀರಂಗ ಕೆ.ಎಂ. ಅವರ ಕವಿತೆ ಕವನಸಂಕಲನಕ್ಕೆ ಆಯ್ಕೆಯಾಗಿದೆ. ಅಲ್ಲದೆ ಈ ಕವಿತೆಯು ಸಿದ್ಧಾರ್ಥ ಸಂಸ್ಥೆಯು ಹೊರತಂದಿರುವ ‘ಅರಳುವ ಮೊಗ್ಗುಗಳು’ ಎಂಬ ಯುವ ಕವಿಗಳ ‘ಕವನ ಸಂಕಲನ’ದಲ್ಲಿಯೂ ಸ್ಥಾನ ಪಡೆದಿದ್ದು, ಸಂಸ್ಥೆಯು ಈ ಯುವಕವಿಗೆ ಪ್ರಮಾಣಪತ್ರದೊಂದಿಗೆ ಕವನಸಂಕಲನದ 10 ಪ್ರತಿಗಳನ್ನು ಬಹುಮಾನವಾಗಿ ನೀಡಿರುತ್ತದೆ ಎಂದು ತಿಳಿಸಿದರು.
ಪ್ರಾಚಾರ್ಯ ಪ್ರೊ. ಕೃಷ್ಣಮೂರ್ತಿ ಬಿಳಿಗೆರೆ ಅವರು ಮಾತನಾಡಿ ಇದು ಕಾಲೇಜಿಗೆ ಹೆಮ್ಮೆ ತರುವ ವಿಷಯ. ಇಂತಹ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಒಂದು ಬಹುಮಾನ ಪಡೆದು ಅಲ್ಲಿಗೆ ಸುಮ್ಮನಾಗುವುದಲ್ಲ. ಬರೆವಣಿಗೆ ನಿರಂತರವಾಗಿರಬೇಕು. ಕಾವ್ಯ ಸಮಾಜದ ಓರೆಕೋರೆಗಳ ಮೇಲೆ ಬೆಳಕು ಚೆಲ್ಲುವಂತಿದ್ದು, ಎಚ್ಚರಮೂಡಿಸುವಂತಿರಬೇಕು ಎಂದು ಹೇಳಿದರು.
ಶುಭಾಶಯಗಳು ಸಹೋದರ 🤝👍👍👍
ಪ್ರತ್ಯುತ್ತರಅಳಿಸಿCongratulations🎉🎉🎉
ಪ್ರತ್ಯುತ್ತರಅಳಿಸಿ