ಪವಾಡ ಬಯಲು ಕಾರ್ಯಕ್ರಮದ ಮೂಲಕ ಜನಸಾಮಾನ್ಯರಲ್ಲಿಯ ಮೂಢನಂಬಿಕೆಗಳ ನಿರ್ಮೂಲನೆಗಾಗಿ ತಮ್ಮ ವ್ಯಕ್ತಿಗತ ನೆಲೆಯಲ್ಲಿ ಹೊರಾಟವನ್ನೇ ಆರಂಭಿಸಿರುವ ಹುಲಿಕಲ್ ನಟರಾಜ್ ಸಮಾಜದಲ್ಲಿ ವೈಜ್ಞಾನಿಕ ಹಾಗೂ ವೈಚಾರಿಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಹುಟ್ಟುಹಾಕಿದ್ದು ಅವರು ಹುಳಿಯಾರು ಸಮೀಪದ ಹಂದನಕೆರೆ ಹೋಬಳಿಯ ದೊಡ್ಡೆಣ್ಣೇಗೆರೆ ಜ್ಞಾನಭಾರತಿ ಶಾಲೆಗೆ ಇತ್ತೀಚೆಗೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಶಾಲೆಯಲ್ಲಿನ ಪ್ರತ್ಯೇಕವಾಗಿ ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆ ಹಾಗೂ ಕ್ರಿಯಾಶೀಲತೆ ಬಗ್ಗೆ ವಿಚಾರಿಸಿದರು.
ಜ್ಞಾನಭಾರತಿ ವಿದ್ಯಾ ಸಂಸ್ಥೆಯು ತಾಲೋಕಿನಲ್ಲೇ ಗ್ರಾಮೀಣ ಮಟ್ಟದಲ್ಲಿ ಉತ್ತಮ ಶಿಕ್ಷಣ ನೀಡುತ್ತಿದೆ ಎಂದು ಸಂಸ್ಥೆಯ ಕಾಯ೯ದಶಿ೯ ಪ್ರಶಾಂತ್ ಮತ್ತು ಅನಿತಾ ಪ್ರಶಾಂತ್ ಅವರನ್ನು ಪ್ರಶಂಸಿದರು.
ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯರಾದ ರಮ್ಯ ಮಂಜುನಾಥ, ಪಿಡಿಒ ಸಂತೋಷ್, ಡಿ.ಎಂ
ಶಿವಕುಮಾರ್,ಸೋಮಣ್ಣ, ಶಾಲೆಯ ಸಿಬ್ಬಂದಿ ವಗ೯ದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ