ಹುಳಿಯಾರು ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 50ನೇ ವರ್ಷದ ಸುವರ್ಣಮಹೋತ್ಸವದ ಜಾತ್ರಾ ಮಹೋತ್ಸವದ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲು ಇಂದು ಹುಳಿಯಾರಿನ ಎಲ್ಲಾ ದೇವಸ್ಥಾನದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಪಟ್ಟಣದ ವಿವಿಧ ಸಂಘಟನೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಹಾಗೂ ಎಲ್ಲಾ ಸಮಾಜಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತು ದುರ್ಗಾಪರಮೇಶ್ವರಿ ದೇವಸ್ಥಾನದ ಗುಂಚಿ ಗೌಡರುಗಳ ಸಭೆಯನ್ನು ದೇವಸ್ಥಾನದಲ್ಲಿ ಕರೆಯಲಾಗಿತ್ತು.
50ನೇ ವರ್ಷದ ಸುವರ್ಣಮಹೋತ್ಸವದ ಜಾತ್ರಾ ಮಹೋತ್ಸವದದ ಜಾತ್ರೆಯನ್ನು ಅಚ್ಚಳಿಯದಂತೆ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು. ಜಾತ್ರಾ ಮಹೋತ್ಸವಕ್ಕೆ ಸುತ್ತಮುತ್ತಲ ಹಳ್ಳಿಗಳ ಎಲ್ಲಾ ಒಂಬತ್ತು ದೇವರುಗಳನ್ನು ಕರೆಸುವುದು ಸೇರಿದಂತೆ ,ಅನ್ನ ಸಂತರ್ಪಣೆ, ಮೂರು ದಿನಗಳ ಕಾಲದ ಉಪಹಾರ, ಆರ್ಕೆಸ್ಟ್ರಾ, ದೇವಾಲಯಕ್ಕೆ ಹೂವಿನ ಅಲಂಕಾರ, ರಾಜಬೀದಿಯಲ್ಲಿ ವಿದ್ಯುದ್ದೀಪ ಅಲಂಕಾರದ ಬಗ್ಗೆ ಚರ್ಚಿಸಲಾಯಿತು. ಗ್ರಾಮದ ಪ್ರತಿ ಮನೆಗೂ ರೂ200 ರಸೀತಿ ಹಾಕಲು ತೀರ್ಮಾನಿಸಲಾಯಿತು. ಜಾತ್ರಾ ಮಹೋತ್ಸವದ ಯಶಸ್ಸಿಗೆ ಪ್ರತಿಯೊಬ್ಬರು ಕೈಜೋಡಿಸಲು ಮನವಿ ಮಾಡಲಾಯಿತು.
ದಿನಾಂಕ 18/4/2022ನೇ ಸೋಮವಾರದಿಂದ 23/4/2022ನೇ ಶನಿವಾರದವರೆಗೆ ಒಂದು ವಾರಗಳ ಕಾಲ ಜಾತ್ರೆಯನ್ನು ನಡೆಯಲಿದ್ದು,
ದಿನಾಂಕ 18/4/22ನೇ ಸೋಮವಾರ ರಾತ್ರಿ ಅಮ್ಮನವರ ಮಧುವಣಗಿತ್ತಿ ಶಾಸ್ತ್ರ,
ದಿನಾಂಕ 19/4/22ನೇ ಮಂಗಳವಾರ ಆರತಿ ಬಾನ,
ದಿನಾಂಕ 20/4/22ನೇ ಬುಧವಾರ ರಾತ್ರಿ ಹುಳಿಯಾರಿನ ಪ್ರಮುಖ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ,ರಾತ್ರಿ 11ಘಂಟೆಗೆ ಅಮ್ಮನವರ ಕೂಡುಭೇಟಿ ಕಾರ್ಯಕ್ರಮ,
ದಿನಾಂಕ 21/4/22ನೇ ಗುರುವಾರ ಬೆಳಗ್ಗೆ 6ಘಂಟೆಯಿಂದ ಕಳಸೋತ್ಸವ, ಸಂಜೆ 7ಘಂಟೆಗೆ ಸಂಗೀತ ರಸ ಸಂಜೆ ಕಾರ್ಯಕ್ರಮ,
ದಿನಾಂಕ 22/4/22ನೇ ಶುಕ್ರವಾರ ಮಧ್ಯಾಹ್ನ 12ಘಂಟೆಗೆ ಬ್ರಹ್ಮ ರಥೋತ್ಸವ,ಸಂಜೆ 6 ಘಂಟೆಗೆ ರಾಜಬೀದಿಗಳಲ್ಲಿ ಹೆಸರಾಂತ ಜನಪದ ಕಲಾತಂಡಗಳೊಂದಿಗೆ ಅಮ್ಮನವರ ಉತ್ಸವ ಕಾರ್ಯಕ್ರಮ.
ದಿನಾಂಕ 23/4/22 ನೇ ಶನಿವಾರ ಮಧ್ಯಾಹ್ನ ಸಿಡಿ ಕಾರ್ಯಕ್ರಮದೊಂದಿಗೆ 50ನೇ ವರ್ಷದ ಜಾತ್ರಾ ತೆರೆ ಎಳೆಯಲು ತೀರ್ಮಾನಿಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ