ಬರುವ ಶೈಕ್ಷಣಿಕ ವರ್ಷದಿಂದ ಹುಳಿಯಾರಿನ ವಾಸವಿ ಶಾಲೆ,LEAD ಸಂಚಾಲಿತ ಶಾಲೆಯಾಗಿ ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನೀಡಲಿದೆ
ಹುಳಿಯಾರಿನ ವಾಸವಿ ವಿದ್ಯಾಸಂಸ್ಥೆಯು ( Vasavi English medium higher primary and high school) ಅಂತರರಾಷ್ಟ್ರೀಯ ಗುಣಮಟ್ಟದ ಶಿಕ್ಷಣವನ್ನು ಕೈಗೆಟಕುವ ದರದಲ್ಲಿ ನೀಡುವ ಮೂಲಕ ಭಾರತದಲ್ಲಿ ಶಿಕ್ಷಣವನ್ನು ಸಬಲೀಕರಣಗೊಳಿಸುತ್ತಿರುವ LEAD ಸಂಸ್ಥೆಯೊಂದಿಗೆ ಸಹಯೋಗ ಹೊಂದಿದ್ದು, ಬರುವ ಶೈಕ್ಷಣಿಕ ವರ್ಷದಿಂದಲೇ LEAD ಸಂಚಾಲಿತ ಸ್ಕೂಲ್ ಆಗಲಿದ್ದು ಈ ನಿಟ್ಟಿನಲ್ಲಿ ಇಂದು ವಾಸವಿ ಶಾಲೆಯ ಪೋಷಕರೊಂದಿಗೆ ಲೀಡ್ಸ್ ಸಂಸ್ಥೆಯ ಪರಿಚಯ ಸಭೆ ಹಮ್ಮಿಕೊಳ್ಳಲಾಗಿತ್ತು.
LEAD ಸಂಸ್ಥೆಯು ಆಧುನಿಕ ಜ್ಞಾನದ ಅನಿಮಿಯತ ಅವಕಾಶ ನೀಡಲಿದ್ದು, ಸ್ಮಾರ್ಟ್ ಕ್ಲಾಸ್ ರೂಮ್, ಮಕ್ಕಳ ಮೇಲೆ ವ್ಯಕ್ತಿಗತ ಗಮನ ಹರಿಸುವಿಕೆ,ತಜ್ಞರಿಂದ ತರಬೇತಿ ಹೊಂದಿದ ಶಿಕ್ಷಕರಿಂದ ಪಠ್ಯಕ್ರಮ ಬೋಧನೆ, ಅಂತರರಾಷ್ಟ್ರೀಯ ಮಾನದಂಡದ ಪಠ್ಯಕ್ರಮ ಅನುಸರಣೆ ಮೂಲಕ ಅತ್ಯುತ್ತಮ ಶಿಕ್ಷಣ ನೀಡಲಿದೆ ಎಂದು ಪೋಷಕರಿಗೆ ಪರಿಚಯಿಸಲಾಯಿತು.
ಇದಕ್ಕೂ ಮುನ್ನ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಶಾರದಾ ಪೂಜಾ ಕಾರ್ಯಕ್ರಮ ಜರಗಿತು.ಬೆಂಗಳೂರಿನ ಕಾರ್ತಿಕ್ ಐ ಕ್ಲಿನಿಕ್‌ನ ಡಾ|| ರವೀಂದ್ರ ಮತ್ತು ಕುಟುಂಬದವರು ನೀಡಿದ ಶುದ್ಧ ನೀರಿನ ಘಟಕಕ್ಕೆ ಚಾಲನೆ ನೀಡಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ